ಕಡೂರುಭಾರತ ದೇಶಕ್ಕೆಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 80 ನೇ ಸ್ವಾತಂತ್ರ ದಿನಾಚರಣೆ
ಕನ್ನಡಪ್ರಭ ವಾರ್ತೆ ಕಡೂರುಭಾರತ ದೇಶಕ್ಕೆಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶನಿವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 80 ನೇ ಸ್ವಾತಂತ್ರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಂತೆ ಬ್ರಿಟೀಷರ ವಿರುದ್ಧ ಸತತ ಹೋರಾಟ ನಡೆಸಿ 9 ವರ್ಷ ಜೈಲಿನಲ್ಲಿದ್ದ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಅಂಬೇಡ್ಕರ್, ಗೋಕುಲೆ, ಲಾಲಾ ಲಜಪತರಾವ್ , ಬಿಪಿನ್ ಚಂದ್ರಪಾಲ್, ದಾದಾ ಬಾಯಿ ನವರೋಜಿ ಹಾಗೂ ಲಕ್ಷಾಂತರ ಜನರ ತ್ಯಾಗ ಬಲಿದಾನ ಸ್ಮರಿಸಬೇಕು ಎಂದರು.ಭಾರತವನ್ನು ನೆಹರೂ ಸುದೀರ್ಘ ಕಾಲ ಆಳುವ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿದರು. ಸಂಕಷ್ಟದಲ್ಲಿದ್ದ ಭಾರತದಲ್ಲಿ ಶಿಕ್ಷಣ, ಕೃಷಿ, ಉದ್ಯೋಗ,ಕೈಗಾರಿಕೆ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಅಂದು ಕೇವಲ ಶೇ .11ರಷ್ಟಿದ್ದ ದೇಶದ ಶೈಕ್ಷಣಿಕ ಪ್ರಮಾಣ ಇಂದು ಶೇ .75 ಕ್ಕೆ ಏರಿದೆ. ಅದೇ ರೀತಿ ಕರ್ನಾಟಕ ಕೂಡ ಬಡವರ ಪರವಾಗಿ ಕಾರ್ಯಕ್ರಮ ರೂಪಿಸುವ ಮುಖೇನ ಕೊಡುಗೆ ನೀಡಿದೆ. ಅದರಲ್ಲಿ ಗ್ಯಾರಂಟಿ, ಭಾರತ್ ಜೋಡೋ ಕಾರ್ಯ ಕ್ರಮ ನೀಡಿದೆ. ಕಡೂರಲ್ಲಿ ಉನ್ನತ ಶಿಕ್ಷಣ ಕೇಂದ್ರವಾಗಿದೆ. ಮಹಿಳೆಯರಿಗೆ ರೆಡಿಮೇಡ್ ಗಾರ್ಮೆಂಟ್ಸ್ ತೆರೆದು ಉದ್ಯೋಗ ನೀಡಲಾಗಿದೆ. ಶಾಶ್ವತ ನೀರಾವರಿ ಯೋಜನೆಯಲ್ಲಿ ತಾಲೂಕಿನ 180 ಕೆರೆ ಕಟ್ಟೆಗಳು ತುಂಬಲಿವೆ. ಅಲ್ಲದೆ, 150 ಕೋಟಿ ಅನುದಾನವನ್ನು ಶೈಕ್ಷಣಿಕ ಅಭಿವೃದ್ದಿಗೆ ನೀಡಿದ್ದು, ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದರು.ಧ್ನಜಾರೋಹಣ ಮಾಡಿದ ತಹಸೀಲ್ದಾರ್ ಸಿ ಎಸ್ ಪೂರ್ಣಿಮಾ ಸಂದೇಶ ಓದಿ, ಭಾರತ ಮಾತೆ ಸ್ವಾತಂತ್ರಕ್ಕಾಗಿ ಹೋರಾಡಿದ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕು ಅದರಂತೆ ರಾಜ್ಯ ಸರಕಾರ ಬಡವರು, ನಿರ್ಗತಿಕರು, ಅನಾಥರು, ಮಹಿಳೆಯರನ್ನು ಗುರುತಿಸಿ ಸ್ವಾವಲಂಬಿಗಳಾಗುವ ಕಾರ್ಯಕ್ರಮ ರೂಪಿಸಿದೆ. ತಾಲೂಕಿನ ಅಭಿವೃದ್ಧಿಗೆ ಸಂಭಂದಿಸಿದಂತೆ ಅಧಿಕಾರಿ, ಜನಪ್ರತಿನಿಧಿಗಳು ಕೈ ಜೋಡಿಸಬೇಕು. 80 ರ ಸ್ವಾತಂತ್ರದಂದು ಗಿಡ ನೆಟ್ಟು ಪರಿಸರ ಉಳಿಸುವ ಸಂಕಲ್ಪ ಮಾಡಿ ದೇಶದ ಅಖಂಡತೆ ಎತ್ತಿ ಹಿಡಿಯೋಣ ಎಂದರು.
ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, ನಾವು ಇಂದು ಸ್ವತಂತ್ರರಾಗಲು ನಮ್ಮ ಹಿರಿ ಯರ ಹೋರಾಟದಿಂದ ಸಾದ್ಯವಾಗಿದೆ. ಈ ನಿಟ್ಟಲ್ಲಿ ರಾಜ್ಯ ಸರಕಾರ ಗ್ಯಾರಂಟಿಗಳ ಜಾರಿಯಿಂದ ಜನ ಸಾಮಾನ್ಯರ ಬದುಕು ಹಸನಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಮುಖಂಡರಾದ ಬಾಸೂರು ಚಂದ್ರಮೌಳಿ,ಜಿ ಅಶೋಕ್, ಡಿ.ಎಸ್ ಉಮೇಶ್, ಶ್ರೀನಿವಾಸ್, ದೇವರಾಜ್ , ಅಧಿಕಾರಿ ಗಳಾದ ಸಿ.ಆರ್. ಪ್ರವೀಣ್, ಬಿಇಒ ತಿಮ್ಮಪ್ಪ, ಎಂ.ರಫೀಕ್, ಮಂಜುನಾಥ್ , ನಟರಾಜ್, ದೇವರಾಜ್, ಉಮೇಶ್, ಪ್ರವೀಣ್, ಶ್ರೇಯಸ್, , ಡಾ. ಉಮೇಶ್, ಬಸವರಾಜ ನಾಯ್ಕ, ಪ್ರದೀಪ್, ಪ್ರಕಾಶ್, ಬಿ.ಎಸ್ ಗಾಡ್ರು, ತವರಾಜ್, ಚೇತನ್ ನಾಗರತ್ನ, ಚೈತ್ರ, ರವಿಕುಮಾರ್ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.15ಕೆಕೆಡಿಯು1,
ಕಡೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಶಾಸಕ ಕೆ. ಎಸ್. ಆನಂದ್, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮತ್ತಿತರರು ಇದ್ದರು. 15ಕೆಕೆಡಿಯು1ಎ. ಕಡೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಶಾಸಕ ಕೆ. ಎಸ್. ಆನಂದ್ ರವರು ವಿಕಲಾಂಗರಿಗೆ ತ್ರಿಚಕ್ರ ಮತ್ತಿತರ ಪರಿಕರಗಳನ್ನು ವಿತರಿಸಿದರು. ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮತ್ತಿತರರು ಇದ್ದರು. 15ಕೆಕೆಡಿಯು1ಬಿ