ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ

| Published : Aug 15 2025, 01:00 AM IST

ಸಾರಾಂಶ

ದಿಟ್ಟ ಪೊಲೀಸ್ ಅಧಿಕಾರಿಗಳ ಕೈಯಿಂದ ಕುಖ್ಯಾತ ದಂತ ಚೋರ ಕಾಡುಗಳ್ಳ ವೀರಪ್ಪನ್ ಹತನಾಗಿದ್ದಾನೆ ಎಂದು ಇನ್ಸ್‌ಪೆಕ್ಟರ್ ಚಿಕ್ಕ ರಾಜ ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಹನೂರು

ದಿಟ್ಟ ಪೊಲೀಸ್ ಅಧಿಕಾರಿಗಳ ಕೈಯಿಂದ ಕುಖ್ಯಾತ ದಂತ ಚೋರ ಕಾಡುಗಳ್ಳ ವೀರಪ್ಪನ್ ಹತನಾಗಿದ್ದಾನೆ ಎಂದು ಇನ್ಸ್‌ಪೆಕ್ಟರ್ ಚಿಕ್ಕ ರಾಜ ಶೆಟ್ಟಿ ತಿಳಿಸಿದರು.

ತಾಲೂಕಿನ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಸ್ಮಾರಕ ಬಳಿ ಹುತಾತ್ಮರ ದಿನ ಆಚರಿಸಿ ಮಾತನಾಡಿದರು.

ಉಭಯ ರಾಜ್ಯಗಳ ತಲೆ ನೋವಾಗಿ ಪರಿಣಮಿಸಿದ್ದ ನರಹಂತಕ ದಂತಚೋರ ಕಾಡುಗಳ ವೀರಪ್ಪನ್ ಸೆರೆ ಹಿಡಿಯಲು ಮಿಣ್ಯಂ ಗ್ರಾಮದ ಬಳಿ ಬರುವ ಅರಣ್ಯ ಪ್ರದೇಶದಲ್ಲಿ ಆ. 14ರಂದು 1992 ರಲ್ಲಿ ಅಂದಿನ ದಿ. ದಿಟ್ಟ ಪೊಲೀಸ್ ವರಿಷ್ಠಾಧಿಕಾರಿ ಹರಿಕೃಷ್ಣ ಸಬ್ ಇನ್ಸ್‌ಪೆಕ್ಟರ್ ಶಕೀಲ್ ಅಹಮದ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಸ್ ಬೆನಗೊಂಡ, ಪೇದೆಗಳಾದ ಅಪ್ಪಚ್ಚು ಬಿಎಸ್, ಸುಂದರ್ ಸಿಎಂ, ಕಾಳಪ್ಪ ವೀರಪ್ಪನ್ ಕಾರ್ಯಾಚರಣೆಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆನೆಯುವ ದಿನವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಮುನ್ನ ಸೋಕಸಾಗರ: 1992 ರಲ್ಲಿ ಆಗಸ್ಟ್ 14ರಂದು ನಡೆದ ದುರ್ಘಟನೆ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು. ಹೀಗಾಗಿ ವೀರಪ್ಪನ್ ಮೋಸದಿಂದ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಹೋರಾಡಿ ವೀರಮರಣವನ್ನು ಹೊಂದಿದ್ದಾರೆ. ನಾವು ಈ ಭಾಗದಲ್ಲಿ ಕಳೆದುಕೊಂಡ ನಮ್ಮವರನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಕರಾಳ ಘಟನೆಗೆ 33 ವರ್ಷ ಎರಡು ರಾಜ್ಯಗಳಿಗೆ ತಲೆನೋವಾಗಿದ್ದ ನರಹಂತಕ ದಂತ ಚೋರ, ಕಾಡುಗಳ್ಳ ವೀರಪ್ಪನ್ ನಡೆಸಿದ ದುಷ್ಕೃತ್ಯಗಳು ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ದಿಟ್ಟ ನಿರ್ಧಾರದಿಂದ ಪೊಲೀಸ್ ಅಧಿಕಾರಿಗಳು ಸಹ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ. ಜೊತೆಗೆ ದಿಟ್ಟ ಪೊಲೀಸ್ ಅಧಿಕಾರಿಗಳ ನಿರ್ಧಾರದಿಂದ ನರ ಹಂತಕ ವೀರಪ್ಪನ್ ಹತನಾಗಿದ್ದಾನೆ. ಇದರಲ್ಲಿ ಹೋರಾಡಿ ಮಡಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ನಿಟ್ಟಿಸಿರು ಬಿಡುವಂತೆ ಆಗಿದ್ದು, ಪ್ರತಿ ವರ್ಷ ನಡೆಯುವ ಕಾರ್ಯಕ್ರಮ ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ ಹಾಗೂ ಕುಟುಂಬದವರು ಮತ್ತು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಾಂಪ್ರದಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಈಶ್ವರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗುರುಸ್ವಾಮಿ, ಮುಖ್ಯಪೇ ದೆ ಮಂಜುನಾಥ್, ಪೇದೆಗಳಾದ ಮಹೇಂದ್ರ, ರಾಜು, ಲಿಯಾ ಖಾತ್ತಿ ಖಾನ್ ಗ್ರಾಮಸ್ಥರು ಉಪಸ್ಥಿತರಿದ್ದರು.