ಮುಂದಿನ ತಲೆಮಾರಿಗೆ ಜಾನಪದ ಕಲೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ: ಆರ್.ನಾಗೇಶ್

| Published : Jan 30 2024, 02:00 AM IST / Updated: Jan 30 2024, 02:01 AM IST

ಮುಂದಿನ ತಲೆಮಾರಿಗೆ ಜಾನಪದ ಕಲೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ: ಆರ್.ನಾಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ರ್ನಾಕಟಕ ಜಾನಪದ ಪರಿಷತ್‌ ನಿಂದ ಸಮೀಪದ ಲಕ್ಕವಳ್ಳಿಯಲ್ಲಿ ಫೆ.4 ರಂದು ನಡೆಯಲಿರುವ ತರೀಕೆರೆ ತಾಲೂಕು ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಲ್ಲಿಕಾರ್ಜುನ ಜಾದವ್ ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸುವ ಸಮಾರಂಭದಲ್ಲಿ ಮಾತನಾಡಿದ ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಆರ್.ನಾಗೇಶ್ ಮುಂದಿನ ತಲೆಮಾರಿಗೆ ಜಾನಪದ ಕಲೆಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ತಾಲೂಕು ಜಾನಪದ ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜನ ಜಾದವ್ ಅವರನ್ನು ಆಹ್ವಾನಿಸುವ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಂದಿನ ತಲೆಮಾರಿಗೆ ಜಾನಪದ ಕಲೆಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಆರ್.ನಾಗೇಶ್ ಹೇಳಿದ್ದಾರೆ.

ತಾಲೂಕು ಕರ್ನಾಟಕ ಜಾನಪದ ಪರಿಷತ್‌ ನಿಂದ ಸಮೀಪದ ಲಕ್ಕವಳ್ಳಿಯಲ್ಲಿ ಫೆ.4 ರಂದು ನಡೆಯಲಿರುವ ತರೀಕೆರೆ ತಾಲೂಕು ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಲ್ಲಿಕಾರ್ಜುನ ಜಾದವ್ ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ತರೀಕೆರೆ ತಾಲೂಕಿನಲ್ಲಿ ಇದು ಎರಡನೇ ಸಮ್ಮೇಳನ ಈ ಪ್ರಕೃತಿ ಮಡಿಲಲ್ಲಿರುವ ಲಕ್ಕವಳ್ಳಿ ಕೇಂದ್ರದಲ್ಲಿ ನಡೆಯು ತ್ತಿರುವುದು ತುಂಬಾ ಸಂತದ ಹಾಗೂ ಹೆಮ್ಮೆ ವಿಷಯ. ಜಿಲ್ಲೆಯ ಅನೇಕ ಕಡೆಗಳಿಂದ ಜಿಲ್ಲಾ ಹಾಗೂ ತಾಲೂಕು ಕಲಾ ತಂಡಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ, ಈ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಸಲು ಸಹಕರಿಸಬೇಕಾಗಿ ಕೋರಿದರು.

ಕರ್ನಾಟಕ ಜಾನಪದ ಪರಿಷತ್ ಲಕ್ಕವಳ್ಳಿ ಹೋಬಳಿ ಘಟಕದ ಗೌರವ ಸಲಹೆಗಾರ ಕೆ,ಎಸ್ ರಮೇಶ್ ಮಾತನಾಡಿ ಬಹಳ ವರ್ಷಗಳಿಂದ ಭಜನೆ ಮತ್ತು ಜಾನಪದ ಗೀತೆಗಳನ್ನು ಮಲ್ಲಿಕಾರ್ಜುನ ಜಾದವ್ ಅವರು ಹಾಡುತ್ತಾ ಬಂದಿದ್ದಾರೆ ಈ ಊರಿನ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಶ್ರೀ ಮಲ್ಲಿಕಾರ್ಜುನ್ ಜಾದವ್ ಅವರ ಸಾಧನೆ ಗುರುತಿಸಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ಜಾದವ್ ಅವರಿಗೆ ಮೈಸೂರು ಪೇಟ ತೊಡಿಸುವ ಮೂಲಕ ಎಲ್ಲರೂ ಅಭಿನಂದಿಸಿದರು.

ಹೋಬಳಿ ಘಟಕ ಅಧ್ಯಕ್ಷ ಶ್ರೀ ಪಾಂಡುರಂಗ ಮಾತನಾಡಿ ಜಾನಪದ ಕಲೆ ಉಳಿಯಲು ಇಂಥ ಜಾನಪದ ಸಮ್ಮೇಳನಗಳ ಅವಶ್ಯಕತೆ ಇದೆ ಎಂದು ಹೇಳಿದರು.

ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ ಮಲ್ಲಿಕಾರ್ಜುನ ಜಾದವ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ತಮ್ಮೆಲ್ಲರಿಗೂ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೋಬಳಿ ಘಟಕದ ಗೌರವಾಧ್ಯಕ್ಷ ಸಿನೋಜ್ ರಾವ್, ಪಾಂಡುರಂಗ ಜಾದವ್, ಕಾರ್ಯದರ್ಶಿ ಚಿಕ್ಕಣ್ಣ, ಮೂರ್ತಣ್ಣ, ಸುರೇಶ್,. ನಾಗೇಶ್ ಜಾದವ್, ವಿಜಯ್ ಕುಮಾರ್,ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.

29ಕೆಟಿಆರ್.ಕೆ.2ಃ

ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ತಾಲೂಕು ಕರ್ನಾಟಕ ಜಾನಪದ ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜನ ಜಾದವ್ ಅವರನ್ನು ಆಧಿಕೃತವಾಗಿ ಆಹ್ವಾನಿಸುವ ಕಾರ್ಯಕ್ರಮದಲ್ಲಿ ತಾಲೂಕು ಕಜಾಪ ಅಧ್ಯಕ್ಷ ಆರ್.ನಾಗೇಶ್, ಲಕ್ಕವಳ್ಳಿ ಹೋಬಳಿ ಘಟಕದ ಗೌರವ ಸಲಹೆಗಾರ ಕೆ,ಎಸ್ ರಮೇಶ್ ಮತ್ತಿತರು ಇದ್ದರು.