ಶರಣರ ನಾಡಿನಲ್ಲಿ ನೆಲೆಸಿರುವುದೇ ನಮ್ಮ ಪುಣ್ಯ

| Published : Nov 02 2023, 01:00 AM IST

ಸಾರಾಂಶ

ಡಾ.ಮುರಘರಾಜ್ ಅವರು ತಮ್ಮ ತಂದೆ- ತಾಯಿ ಹೆಸರಲ್ಲಿ ಶರಣ ಸಾಹಿತ್ಯ ಪರಿಷತ್ತು ದತ್ತಿ

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಶರಣರು ನಡೆದಾಡಿದ ಈ ನಾಡಿನ ನೆಲದಲ್ಲಿ ನಾವು ತುಳಿದಾಡುತ್ತ ವಾಸವಾಗಿರುವುದೇ ನಮ್ಮೆಲ್ಲರ ಪುಣ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗೌರವ ಸಲಹೆಗಾರ, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಸೋಮವಾರ ರಾತ್ರಿ ಶಿರಾಳಕೊಪ್ಪದ ಬಸವೇಶ್ವರ ಸಮುದಾಯ ವವನದಲ್ಲಿ ಡಾ.ಮುರಘರಾಜ್ ಅವರು ತಮ್ಮ ತಂದೆ- ತಾಯಿ ಹೆಸರಲ್ಲಿ ಶರಣ ಸಾಹಿತ್ಯ ಪರಿಷತ್ತು ದತ್ತಿ ಹೆಸರಲ್ಲಿ ಏರ್ಪಡಿಸಿದ್ದ ಗುಹೇಶ್ವರ ನೆಂಬ ನಿರಾಳ ಎಂಬ ದತ್ತಿ ವಿಶೇಷ ಉಪನ್ಯಾಸ ಕುರಿತು ಮಾತನಾಡಿದರು.

ನೆಲದ ಜನರಿಗೆ ಶರಣರ ಸಾಹಿತ್ಯ ಸಂದೇಶದ ಬಗ್ಗೆ ಹೊಸದಾಗಿ ಏನಾದರೂ ಹೇಳುತ್ತೇನೆ ಎಂದರೆ ಅದೊಂದು ಭ್ರಮೆ. ಆದರೆ ಶರಣರ ಸಾಹಿತ್ಯದ ಪಾವಿತ್ರ್ಯತೆ ದ್ರಷ್ಠಿಯಿಂದ ಅದರ ಮಹತ್ವದ ದೃಷ್ಠಿಯಿಂದ ಅದರ ಚಿಂತನೆ ಮಾಡಬೇಕಿದೆ.

ರಾಜ್ಯದಲ್ಲಿ ಶರಣ ಸಾಹಿತ್ಯ ಸಂದೇಶದ ಪ್ರಚಾರಕ್ಕಾಗಿಯೇ ದತ್ತಿ ಕಾಯರ್ವನ್ನು ಮಾಡಲಾಗುತ್ತಿದ್ದು, ₹2 ಕೋಟಿ ಹಣ ಸಂಗ್ರಹಿಸಿ, ಇಂತಹ ಕಾಯರ್ಕ್ರಮಗಳನ್ನು ಮಾಡುತ್ತಿದ್ದೇವೆ. ಇಡೀ ಭೂಮಿ ನಡುಗುತ್ತಿದೆ. ಭಯೋತ್ಪಾದಕರ ಅಟ್ಟಹಾಸದಿಂದ ನಡುಗುತ್ತಿದೆ. ರಾಜಕೀಯ ಭ್ರಷ್ಟತನದಿಂದ ನಡಗುತ್ತಿದೆ, ಅದು ನಿಲ್ಲಬೇಕಿದೆ ಎಂದರು.

ಇಂದು ಸ್ವಚ್ಛಂದ ಪರಿಸ್ಥಿತಿಯಲ್ಲಿ ಲಕ್ಷಾಂತರ ಹಣ ಗಳಿಸಿ ಆಸ್ತಿ ಮಾಡಿದವರು ನೆಮ್ಮದಿಯಿಂದ ಇಲ್ಲ. ಲಕ್ಷಾಂತರ ರು. ಸಂಬಳ ಪಡೆಯುತ್ತಿರುವ ಅಧಿಕಾರಿ ನೆಮ್ಮದಿಯಿಂದ ಇಲ್ಲ. ಕೆಲ ದೊಡ್ಡ ಅಧಿಕಾರಿಗಳು ರಾಜಕಾರಣಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಹೀನಾಯ ಸ್ಥತಿಯಲ್ಲಿ ನಾವು ಇದ್ದೇವೆ. ಇಂತಹ ಸಂದರ್ಭಗಳಲ್ಲಿ ವೈಯಕ್ತಿವಾಗಿ ನಾವು ನಾವಾದರೂ ಶುದ್ಧ ಹೃದಯಿಗಳಾಗಿ ಮಾನಸಿಕ ಸಮಾಧಾನ ಪಡೆಯಲು ಗಂಭೀರವಾಗಿ ಯೋಚಿಸಬೇಕಿದೆ ಎಂದರು.

ಅಲ್ಲಮಪ್ರಭು ದಾರ್ಶನಿಕ, ಅವನೊಬ್ಬ ಜಗತ್ತೇ ಸೋಜಿಗ ಪಡುವಂತಹ ವ್ಯಕ್ತಿತ್ವ ಹೊಂದಿದ್ದನು. ಸಾಧಕರನ್ನು ಹುಡುಕಿಕೊಂಡು ಹೋಗಿ, ಅರಿವನ್ನು ಮೂಡಿಸಿದ ವ್ಯಕ್ತಿತ್ವ ಅವನದಾಗಿತ್ತು. ಇಂತಹ ಸಂದರ್ಭದಲ್ಲಿ ನಾವು ಪರಸ್ಪರ ಅರ್ಥ ಮಾಡಿಕೊಂಡು ಹೋಗಬೇಕಿದೆ ಎಂದರು.

ಪ್ರಾರಂಭದಲ್ಲಿ ಶಿರಾಳಕೊಪ್ಪ ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಆನೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿರಕ್ತ ಮಠದ ಸಿದ್ದೇಶ್ವರ ಶ್ರೀ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು. ಅಧ್ಯಕ್ಷತೆ ತಾಲೂಕು ಶ.ಸಾ.ಪ. ಅಧ್ಯಕ್ಷ ಶಶಿಧರ ಸ್ವಾಮಿ ವಹಿಸಿದ್ದರು.

ಡಾ.ಮುರಘರಾಜ್, ಸುಭಾಷ್‌ಚಂದ್ರ ಸ್ಥಾನಿಕ್, ಅಕ್ಕ ಮಹಾದೇವಿ ಪ್ರತಿಷ್ಠಾನ ಅಧ್ಯಕ್ಷೆ ರೂಪಾ ಹಾಲೇಶ್, ಎಚ್.ಎಂ. ಗಂಗಮ್ಮ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿಲ್ಲಾ ಶ.ಸಾ.ಪ. ಅಧ್ಯಕ್ಷ ಮಹಾರುದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಗೌರಮ್ಮ ವಚನ ಮಾಡಿದರು. ಶಸಾಪ ಉಪಾಧ್ಯಕ್ಷ ಚಂದ್ರಶೇಖರ ಸ್ವಾಗತಿಸಿದರು. ಶಿಕ್ಷಕ ಅಶೋಕ ಹಿರೇಮನಿ ನಿರೂಪಿಸಿ ವಂದಿಸಿದರು.

- - -

(** ಯಾವುದಾದ್ರೂ ಒಂದೇ ಫೋಟೋ-ಕ್ಯಾಪ್ಷನ್‌ ಬಳಸುವುದು)-1ಕೆಎಸ್ ಎಚ್ಆರ್1: ದತ್ತಿ ಕಾರ್ಯಕ್ರಮವನ್ನು ನಾಡೋಜ ಗೊ.ರು. ಚನ್ನಬಸಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. -1ಕೆಎಸ್‌ಎಚ್ಆರ್2: ಅಕ್ಕ ಮಹಾದೇವಿ ಪ್ರತಿಷ್ಠಾನ ಆಶ್ರಯದಲ್ಲಿ ಗೊ.ರು. ಚನ್ನಬಸಪ್ಪ ಅವರಿಗೆ ಗೌರವ ಸಮಪರ್ಣೆ ಮಾಡಲಾಯಿತು. ಪದಾಧಿಕಾರಿಗಳು ಹಾಜರಿದ್ದರು.