ಸಾರಾಂಶ
ಕೊಳ್ಳೇಗಾಲಶಿಕ್ಷಣದಿಂದ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ ಭವ್ಯ ಭಾರತದ ಹೆಮ್ಮೆಯ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಶಿಕ್ಷಣದಿಂದ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ ಭವ್ಯ ಭಾರತದ ಹೆಮ್ಮೆಯ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಸರ್ಕಾರಿ ಎಸ್.ವಿ.ಕೆ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ಪೂಜೆ, ಪುನಸ್ಕಾರಗಳಲ್ಲಿ ಹೆಣ್ಣು ಮಕ್ಕಳು ಪಾಲ್ಗೊಳ್ಳುವುದು ಅತಿ ಮುಖ್ಯ, ಆದರೆ ಇದು ಇತ್ತಿಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ, ನಾವೆಲ್ಲರೂ ಸಂಸ್ಕಾರ ರೂಢಿಸಿಕೊಳ್ಳುವಲ್ಲಿ ಕಟಿಬದ್ಧರಾಗಬೇಕು, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು, ಉಪನ್ಯಾಸಕರು ಸ್ಪಂದಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಎಸ್.ವಿ.ಕೆ ಕಾಲೇಜಿನಲ್ಲೂ ಕಳೆದ ಬಾರಿ 82% ರಷ್ಟು ಫಲಿತಾಂಶ ದೊರೆತಿರುವುದು ಸಂತಸದ ಸಂಗತಿ. ಮಟ್ಟಂ ಟ್ರಸ್ಟ್ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಂಪ್ಯೂಟರ್ ಹಾಗೂ ಇನ್ನಿತರೆ ಕೊಡುಗೆ ನೀಡಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.ಬೇಸರ ವ್ಯಕ್ತಪಡಿಸಿದ ಶಾಸಕ: ಇಂದಿನ ಸರಸ್ವತಿ ಪೂಜಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಉಪನ್ಯಾಸಕರೊಬ್ಬರು ಗಂಧದ ಕಡ್ಡಿಯಲ್ಲಿ ದೀಪ ಹಚ್ಚಿದ್ದು ಇತಿಹಾಸ, ಮತ್ತೊಬ್ಬ ಉಪನ್ಯಾಸಕಿ ದೀಪ ಹಚ್ಚಲು ಬಂದರೆ ಸಿಲ್ಕ್ ಸೀರೆಗೆ ಎಲ್ಲಿ ಅ ಶುಚಿತ್ವಗೊಳ್ಳುತ್ತೆ ಎಂಬ ಕಾರಣದಿಂದ ದೂರ ಸರಿದರೆ, ಅದೇ ರೀತಿಯಲ್ಲಿ ಉದ್ಘಾಟನೆಗೆ ಕರೆದ ಒರ್ವ ವಿದ್ಯಾರ್ಥಿನಿ ದೀಪ ಹಚ್ಚಲು ಆಗಮಿಸಿ ಎಡಗೈನಲ್ಲಿ ದೀಪ ಹಚ್ಚಿದ್ದನ್ನು ಗಮನಿಸಿದರೆ ಇಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ವಿಷಾದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಶ್ರೀಧರ್. ಉಪಪ್ರಾಂಶುಪಾಲ ವಿಶ್ವನಾಥ್, ಉಪನ್ಯಾಸಕ ಅಲೆಗ್ಸಾಂಡರ್, ಕಾಲೇಜು ಅಭಿವೃದ್ಧಿ ಸಮಿತಿಯ ನರಸಿಂಹ, ನಗರಸಭೆ ಸದಸ್ಯರುಗಳಾದ ಮಂಜುನಾಥ್, ಬಸ್ತಿಪುರ ಶಾಂತರಾಜು, ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್ ಇನ್ನಿತರಿದ್ದರು.