ಸಾರಾಂಶ
ಮಹಾತ್ಮ ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆ ಮಾರ್ಗಗಳು ಮಾನವನ ಜೀವನ ಬದಲಾವಣೆಗೆ ಮಾರ್ಗ
ಗದಗ: ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ ತತ್ವಾದರ್ಶಗಳಿಂದ ಜೀವನ ದರ್ಶನ ಸಾಧ್ಯ. ಅವರೆಲ್ಲರ ಆದರ್ಶದ ಬದುಕು ನಮಗೆ ದಾರಿದೀಪ ಎಂದು ಹುಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುಧಾ ಎಸ್.ಕೌಜಗೇರಿ ಹೇಳಿದರು.
ನಗರದ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ಜರುಗಿದ 41ನೇ ಜೀವನ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಮಿತಿಯ ಅಧ್ಯಕ್ಷ ಪ್ರೊ.ಎಂ.ಎನ್. ಕಾಮನಹಳ್ಳಿ ಮಾತನಾಡಿ, ಮಹಾತ್ಮ ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆ ಮಾರ್ಗಗಳು ಮಾನವನ ಜೀವನ ಬದಲಾವಣೆಗೆ ಮಾರ್ಗ ಎಂದರು.
ಈ ವೇಳೆ ಪ್ರಸಾದ ಸೇವೆ ಮಾಡಿದ ಸುಗಂಧರಾಜ ಶಿ. ಪಾಳೇಗಾರ ದಂಪತಿಗಳನ್ನು ಹಾಗೂ ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜುನಾಥ ಎಸ್. ಪಾಲೇಗಾರ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ರಾಜು ಸುಂಕದ, ಪಾರ್ವತಿಬಾಯಿ ಪಾಳೇಗಾರ, ಅಂಬರೇಷ ಹಾದಿ, ರಂಗಣ್ಣ ಒಡೆಯರ, ವಿ.ಆರ್. ಕುಲಕರ್ಣಿ, ರಾಧಿಕಾ ಬಂದಮ್, ವಿ.ವೈ. ಮಕ್ಕಣ್ಣವರ, ಬಿ.ಎನ್. ಯರನಾಳ, ವಿ.ಕೆ. ಗುರುಮಠ, ಎಸ್.ಎಸ್. ಪಾಟೀಲ, ಎಸ್.ಐ. ಯಾಳಗಿ, ಎಸ್.ಎಸ್. ಪಾಳೆಗಾರ, ಜಿ.ಎ. ಪಾಟೀಲ, ಎಸ್.ಐ. ಅಣ್ಣಿಗೇರಿ, ವಿ.ಎಂ. ಕನಕೇರಿ, ವಿ.ಬಿ. ತಿರ್ಲಾಪೂರ, ಎಸ್.ಡಿ. ಸವದತ್ತಿ, ಪುಷ್ಪಾ ಭಂಡಾರಿ, ನಿರ್ಮಲಾ ಪಾಟೀಲ ಇದ್ದರು.