ಪೋಷಕರ ಕನಸು ಸಾಕಾರಗೊಳಿಸುವುದು ಮಕ್ಕಳ ಕರ್ತವ್ಯ: ಮಂಗಳಾನಾಥ ಸ್ವಾಮೀಜಿ ಸಲಹೆ

| Published : Oct 07 2025, 01:02 AM IST

ಸಾರಾಂಶ

ವಿಶ್ವ ಮಾನವರಾಗಿ ಹುಟ್ಟುವ ಮಕ್ಕಳನ್ನು ಕಾಲಕ್ರಮೇಣ ಸಮಾಜವು ಅಲ್ಪಮಾನವರನ್ನಾಗಿಸುತ್ತದೆ. ಇದು ಸರಿಯಲ್ಲ. ಶಿಕ್ಷ ಣ ಮತ್ತು ಸಮಾಜ ಅವರನ್ನು ವಿಶ್ವಮಾನವರನ್ನಾಗಿಯೇ ಬೆಳೆಯುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸದರಷ್ಟೇ ಶಿಕ್ಷ ಣಕ್ಕೆ ಅರ್ಥ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಂದೆ- ತಾಯಿಗಳ ಕನಸುಗಳನ್ನು ಸಾಕಾರಗೊಳಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಶಿಕ್ಷಣದ ಜೊತೆ ಸಂಸ್ಕೃತಿ ಮತ್ತು ಮಾನವೀಯತೆ ಇದ್ದರೆ ಸಾಧನೆಗೆ ಸುಲಭದಾರಿ. ನಿಮ್ಮ ಜೀವನವೆಂಬ ಹೂವಿಗೆ ಪರಿಶ್ರಮವೇ ಪರಿಮಳವಿದ್ದಂತೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ತಿಳಿಸಿದರು

ನಗರ ಹೊರವಲಯದ ಜಿಲ್ಲಾಡಳಿತ ಭವನದ ಹಿಂಭಾಗದ ಒಕ್ಕಲಿಗ ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಜಗತ್ತನ್ನು ಬದಲಿಸುವ ಮಾರ್ಗ ಅದರ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಮೊದಲ ಮಜಲು ಪ್ರೌಢಶಿಕ್ಷಣ, ಈ ಹಂತದಲ್ಲಿ ದುಡಿದರೆ ನವಚೈತನ್ಯದ ಹಾದಿಸೃಷ್ಟಿಸಬಹುದು ಎಂದು ಹೇಳಿದರು.

ಶಿಕ್ಷಣ ಎಂಬುದು ಜೀವನದ ಬದಲಾವಣೆ ಹಾಗೂ ಸುಧಾರಣೆಗೆ ಸೂಚಕವಾಗಿದೆ. ಶಿಕ್ಷಣ ಎಂದಿಗೂ ಉದ್ಯೋಗದ ಮೂಲವಲ್ಲ. ಬದುಕುವ ಮಾರ್ಗ. ಇಂದಿನ ಕಾಲದ ಮಕ್ಕಳು ಅತ್ಯಂತ ಜ್ಞಾನವುಳ್ಳವರಾಗಿದ್ದಾರೆ. ಅವರಿಗೆ ಶಿಕ್ಷಕರು ನೀಡುತ್ತಿರುವ ಶಿಕ್ಷಣದ ಜತೆಗೆ ತನ್ನ ಜವಾಬ್ದಾರಿ, ಜೀವನದ ಶೈಲಿಯನ್ನು ಹೋಲುವಂಥ ಶಿಕ್ಷಣ ಕಲಿಸಬೇಕಾಗಿದೆ ಎಂದು ಹೇಳಿದರು.

ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್ ಮಾತನಾಡಿ, ಕಲಿಕೆಗೆ ಪೂರಕವಾದ ಪರಿಸರ ನಿರ್ಮಾಣದ ಕಡೆ ಪಾಲಕರು ಗಮನ ಹರಿಸಿದಾಗ ಮಾತ್ರವೇ ಮಕ್ಕಳು ಆಸಕ್ತಿಯಿಂದ ವ್ಯಾಸಂಗದ ಕಡೆ ಗಮನಹರಿಸಲು ಸಾಧ್ಯ. ಅಂತಹ ವಾತಾವರಣವನ್ನು ನಮ್ಮ ಒಕ್ಕಲಿಗರ ಸಂಘದ ವಿದ್ಯಾರ್ಥಿನಿ ನಿಲಯದಲ್ಲಿ ಕಲ್ಪಿಸಿದ್ದೇವೆ,

ವಿಶ್ವ ಮಾನವರಾಗಿ ಹುಟ್ಟುವ ಮಕ್ಕಳನ್ನು ಕಾಲಕ್ರಮೇಣ ಸಮಾಜವು ಅಲ್ಪಮಾನವರನ್ನಾಗಿಸುತ್ತದೆ. ಇದು ಸರಿಯಲ್ಲ. ಶಿಕ್ಷ ಣ ಮತ್ತು ಸಮಾಜ ಅವರನ್ನು ವಿಶ್ವಮಾನವರನ್ನಾಗಿಯೇ ಬೆಳೆಯುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸದರಷ್ಟೇ ಶಿಕ್ಷ ಣಕ್ಕೆ ಅರ್ಥ ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ಸರ್ಕಾರ ಕಾಂತರಾಜ್ ಸಲ್ಲಿಸಿರುವ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿತ್ತು. ಅದರ ಅನುಷ್ಠಾನ ಬೇಡವೆಂದು ರಾಜ್ಯ ಒಕ್ಕಲಿಗರ ಸಂಘ, ಡಾ.ನಿರ್ಮಲಾನಂದ ನಾಥ ಶ್ರೀಗಳು, ಎಲ್ಲಾ ಒಕ್ಕಲಿಗಸ್ವಾಮೀಜಿಗಳು, ಹಾಲಿ ಮತ್ತು ಮಾಜಿ ಸಚಿವರು, ಸಂಸದರು ಎಲ್ಲರೂ ಇದನ್ನು ತಿರಸ್ಕರಿಸಿದ್ದರ ಫಲವೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಾಂದಿಯಾಯಿತು. ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಯಾವುದೇ ಗಣತಿದಾರರು ಬಂದಾಗ ನೀವು ಸಮುದಾಯದ ಯಾವುದೇ ಒಕ್ಕಲಿಗ ಜಾತಿಯಲ್ಲಿ ಮರುಸು ಒಕ್ಕಲಿಗರು, ಗೌಡ ಒಕ್ಕಲಿಗರು, ದಾಸ ಒಕ್ಕಲಿಗರು, ಗಂಗಾಟಕಾರ ಒಕ್ಕಲಿಗರು, ರೆಡ್ಡಿ ಒಕ್ಕಲಿಗರು ಸೇರಿ ಇತರೆ ಹಲವಾರು ರೀತಿಯ ಉಪ ಪಂಗಡಗಳಿದ್ದು ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಉಪ ಪಂಗಡಕ್ಕೆ ಸೇರಿದ್ದರೂ ಒಕ್ಕಲಿಗ ಎಂದೆ ನಮೂದಿಸಿ ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕು. ಜಾತಿ ಕಲಂನಲ್ಲಿ ಯಾರೂ ಉಪ ಜಾತಿ ನಮೂದಿಸದಂತೆ ಎಚ್ಚರಿಕೆ ವಹಿಸಬೇಕು. ಮುಂದೆ ಸರ್ಕಾರಿ ಸೌಲಭ್ಯ ಸಿಗಬೇಕಿದ್ದರೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್, ಚಿಕ್ಕಬಳ್ಳಾಪುರ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕಾರ್ಯದರ್ಶಿ ಚಿನ್ನಪ್ಪರೆಡ್ಡಿ, ಯಲುವಹಳ್ಳಿ ಜನಾರ್ದನ್, ಮಂಜುನಾಥ್, ವಿದ್ಯಾರ್ಥಿಗಳು, ಪೋಷಕರು, ಮತ್ತಿತರರು ಇದ್ದರು.

---------