ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಭ್ಯಾಸ ಮಾಡಿ ಎಂಬಿಬಿಎಸ್‌ಗೆ ಆಯ್ಕೆಯಾದ ಹಾಗೂ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮೀಪದ ರಾಮಗೇರಿ ಗ್ರಾಮದ, ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಭ್ಯಾಸ ಮಾಡಿ ಎಂಬಿಬಿಎಸ್‌ಗೆ ಆಯ್ಕೆಯಾದ ಹಾಗೂ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮೀಪದ ರಾಮಗೇರಿ ಗ್ರಾಮದ, ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಬಸಣ್ಣ ಬೆಟಗೇರಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಪ್ರತಿಭಾವಂತ ಮಕ್ಕಳು ಇರುತ್ತಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ. ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನಕ್ಕೇರಿದವರನ್ನು ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಾಗಿದೆ ಎಂದು ತಿಳಿಸಿದ ಅವರು ಗ್ರಾಮೀಣ ಭಾಗದ ಮಕ್ಕಳು ವೈದ್ಯರಾದ ನಂತರ ಕಡ್ಡಾಯವಾಗಿ ಹಳ್ಳಿ ಜನರ ಸೇವೆ ಮಾಡುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.ಎಂಬಿಬಿಎಸ್‌ಗೆ ಆಯ್ಕೆ ಆಗಿರುವ ಶ್ರೀಹರಿ ಹನುಮಂತಪ್ಪ ಮಡ್ಲೂರ, ಬಟ್ಟೂರು ಗ್ರಾಮದ ಪ್ರಗತಿ ಬಸಣ್ಣ ಹೊಳಲಾಪೂರ, ಶಿಶುವಿನಾಳ ಗ್ರಾಮದ ಪವಿತ್ರಾ ಯಲ್ಲಪ್ಪ ಪರಸಪ್ಪನವರ, ಕಳಸದ ಕಾರ್ತಿಕ ರಾಮಪ್ಪ ಸಜ್ಜಗಾರ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರಥಮ ಸುಧೀಂದ್ರ ಬೆಟಗೇರಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಬಸಪ್ಪ ಸಿಂಗಣ್ಣವರ, ರವಿ ಕೆರೂರ, ಮುತ್ತಕ್ಕ ಬೆಟಗೇರಿ, ಎಸ್.ವೈ. ಬೆಟಗೇರಿ, ಮುತ್ತಣ್ಣ ಸಾವಿರಕುರಿ, ಕೆ.ಪಿ. ಕಂಬಳಿ, ಹನಮಪ್ಪ ಹಿತ್ತಲಮನಿ. ಬಸವರಾಜ ಗಳಗನಾಥ, ಬಿ.ಎಂ. ಯರಗುಪ್ಪಿ, ಮಹೇಂದ್ರ ಬೆಟಗೇರಿ, ಅಡಿವೆಕ್ಕ ಬೆಟಗೇರಿ, ಪರಸಣ್ಣ ಲಕ್ಕಣ್ಣವರ, ಗೀತಾ ಕಾಳೆ, ಪುಷ್ಪಾ ಬೆಟಗೇರಿ, ಗುರುರಾಜ ಪೂಜಾರ, ದ್ಯಾಮಣ್ಣ ಬಡಿಗೇರ, ಅಕ್ಷಯ ಕುಮಶಿ, ಮುದಕಣ್ಣ ಗೊಂದಿ, ಬಸಪ್ಪ ಕುಬಟಿ ಇದ್ದರು.