ತಾಯಿ ಹೃದಯ ಕಲೆಯಾದ ಜಾನಪದ ಕಲೆ ಹಾಗೂ ಸಂಸ್ಕ್ಥತಿಯನ್ನು ನಾಶಪಡಿಸಲು ಕೆಲವರು ತಮ್ಮ ಸ್ವಾರ್ಥಕ್ಕಾಗಿ ವೈದಿಕ ಸಂಸ್ಕೃತಿಯನ್ನು ಹೇರಿದರು. ಆದರೆ ನಮ್ಮ ತಾಯಿಂದರು ಅದಕ್ಕೆ ಆಸ್ಪದ ನೀಡದೆ ಉಳಿಸಿ ಬೆಳೆಸುತ್ತಿದ್ದಾರೆ ಎಂದು ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್ (ಜನ್ನಿ) ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ತಾಯಿ ಹೃದಯ ಕಲೆಯಾದ ಜಾನಪದ ಕಲೆ ಹಾಗೂ ಸಂಸ್ಕ್ಥತಿಯನ್ನು ನಾಶಪಡಿಸಲು ಕೆಲವರು ತಮ್ಮ ಸ್ವಾರ್ಥಕ್ಕಾಗಿ ವೈದಿಕ ಸಂಸ್ಕೃತಿಯನ್ನು ಹೇರಿದರು. ಆದರೆ ನಮ್ಮ ತಾಯಿಂದರು ಅದಕ್ಕೆ ಆಸ್ಪದ ನೀಡದೆ ಉಳಿಸಿ ಬೆಳೆಸುತ್ತಿದ್ದಾರೆ ಎಂದು ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್ (ಜನ್ನಿ) ಹೇಳಿದರು.

ನಗರದ ರಂಗ ದೀವಿಗೆ ಸಂಸ್ಥೆಯು ತನ್ನ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಉತ್ಸವವನ್ನು ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂತಹ ಹೃದಯವಂತ ಕಲೆಯನ್ನು ಪ್ರೋತ್ಸಾಹಿಸಿ ಉಳಿಸುವುದು ಸರ್ಕಾರದ ಜವಾಬ್ಧಾರಿಯಾಗಿದ್ದು ಈ ನಿಟ್ಟಿನಲ್ಲಿ ಜನಪ್ರತಿನಿದಿಗಳು ಚಿಂತಿಸಬೇಕು ಎಂದರು.

ಜಾನಪದ ಎಂಬುದು ಈ ನೆಲದಲ್ಲಿ ನೆಲೆಯೂರದಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು, ನಮ್ಮ ನೆಲೆಯ ತಾಯಿಂದರು ಎಷ್ಟೇ ಕಷ್ಟ ಬಂದರು ತಮ್ಮ ಜೀವವನ್ನು ಅಡವಿಟ್ಟು ಈ ಜಾನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇವರಿಗೆ ಪ್ರೋತ್ಸಾಹ ಅತ್ಯಗತ್ಯ ಎಂದರು.

ಮೌಢ್ಯತೆ ಬಿತ್ತುತ್ತಾ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದಾರೆ. ವಿನಹ ಶಾಲೆಗಳನ್ನು ತೆರೆಯುತ್ತಿಲ್ಲ ಇದರಿಂದ ಮೌಡ್ಯತೆ ಹೆಚ್ಚುತ್ತಿದ್ದಯೇ ಹೊರತು ನಮ್ಮ ಜಾನಪದ ಸಂಸ್ಕೃತಿ ಬೆಳೆಯುತ್ತಿಲ್ಲ. ಈ ನಿಟ್ಟಿನಲ್ಲಿ ಚಿಂತಕರು ಸರ್ಕಾರ ಚಿಂತಿಸಿ ಜಾಜನಪದ ಕಲಾವಿದರನ್ನು ಪ್ರೋತ್ಸಾಹಿಬೇಕಾಗಿದೆ ಎಂದರು.

ಜಾನಪದ ಸಂಸ್ಕೃತಿ ಎಲ್ಲಾ ಧರ್ಮ, ಜನರನ್ನು ಒಳಗೊಂಡ ಸಂಸ್ಕೃತಿ ನಾವೆಲ್ಲರೂ ಒಂದೇ ಎಂದು ಸಾರುವ ಸಂಸ್ಕೃತಿ ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲಿ ನಗರದ ರಂಗ ದೀವಿಗೆ ಸಂಸ್ಥೆಯು ಜಾನಪದ ಜಾನಪದ ಸಾಂಸ್ಕೃತಿಕ ಉತ್ಸವನ್ನು ಏರ್ಪಡಿಸುವುದು ಹೆಮ್ಮೆಯ ಸಂಗತಿ ಎಂದರು.

ಕಾಡಾ ಅಧ್ಯಕ್ಷ ಎಂ. ಮರಿಸ್ವಾಮಿ ಮಾತನಾಡಿ, ಜಾನಪದ ಕಲೆ ಉಳಿದಿದೆ ಎಂದರೆ ಅದಕ್ಕೆ ನಮ್ಮ ಜಿಲ್ಲೆಯ ಕೊಡುಗೆ ಅಪಾರ, ಈ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ನೀಡುತ್ತಿದೆ.

ಜಿಲ್ಲೆಯ ಮಹದೇಶ್ವರ, ಮಂಟೇಸ್ವಾಮಿ, ಜನಪದ ಕಾವ್ಯಗಳು ಅತ್ಯಂತ ಮಹತ್ವವುಳ್ಳದ್ದು ಅವುಗಳನ್ನು ಜಾನಪದ ಕಲಾವಿದರ ಬಾಯಿಂದ ಕೇಳುವುದೇ ಒಂದು ಸಂತೋಷ ಎಂದರು.

ಜಾನಪದ ಕಲೆ ಒಂದು ಅರ್ಥ ಗರ್ಭಿತ ಕಲೆ, ನಾವು ಜೀವನದಲ್ಲಿ ಹೇಗಿರಬೇಕೆಂದ ಮಾನವೀಯತೆಯನ್ನು ಹೇಳಿ ಕೊಡುವ ಕಲೆ, ಹಿಂದೆ ಮದುವೆ ಸಂಧರ್ಭದಲ್ಲಿ ಹಾಡುತ್ತಿದ್ದ ಸೋಭಾನೆ ಪದಗಳು, ಹಬ್ಬ ಹರಿದಿನಗಳಲ್ಲಿ ಗುಡ್ಡರು, ಹಾಡುತ್ತಿದ ಜನಪದ ಹಾಡುಗಳು ಕೇಳಿದರೆ ಮತ್ತಷ್ಟು ಕೇಳಬೇಕೆನಿಸುತ್ತಿತ್ತು ಈಗ ಅವೆಲ್ಲ ಕಣ್ಮರೆಯಾಗುತ್ತಿವೆ.ಇಂತಹ ಕಲೆಯನ್ನು ಉಳಿಸಿ ಭೆಳೆಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯವು ಮುಂದುವರಿಯಬೇಕು, ಈ ನಿಟ್ಟಿನಲ್ಲಿ ರಂಗ ದೀವಿಗೆ ಸಂಸ್ಥೆಯು ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಹತ್ವಪೂರ್ಣವಾಗಿದೆ ಎಂದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಸುಗ್ಗಿಯ ಕಾಲದಲ್ಲಿ ನಮ್ಮ ಜನರು ಹಾಡುತ್ತಿದ್ದ ಜನಪದ ಹಾಡುಗಳು ಮರೆಯಾಗುತ್ತಿವೆ, ಜಿಲ್ಲೆಯು ಜಾನಪದದ ತವರೂರು ಎಂದರು.

ಸಾಹಿತಿ ಸೋಮಶೇಖರ ಬಿಸಲ್ವಾಡಿ ಅಧ್ಯಕ್ಷತೆ ವಹಿಸಿದ್ದರು. ರಂಗ ದೀವಿಗೆ ಸಂಸ್ಥೆಯ ಅಧ್ಯಕ್ಷ ಕಲೆ ನಟರಾಜು ಪ್ರಾಸ್ರಾವಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ, ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಹೊನ್ನಮ್ಮ, ಸಿಜಿಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಂತರಾಜು, ಕನ್ನಡ ಕೋಗಿಲೆ ಕ್ಯಾತಿ ಜನಪದ ಮಹೇಶ್, ಆಕಾಶವಾಣಿ ಕಲಾವಿದರಾದ ಚಿನ್ನಮ್ಮ ಅವರಿಗೆ ಜನಪದ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಉದ್ಯಮಿ ಶ್ರೀನಿಧಿ ಕುದರ್, ಬಾಲಸುಬ್ರಹ್ಮಣ್ಯಂ ವೇದಿಕೆಯ ಸುರೇಶ್‌ಗೌಡ, ಶಿವಣ್ಣ ಅವರುನ್ನು ಗೌರವಿಸಲಾಯಿತು.

ಕಲಾವಿದರಾದ ಕಿರಣ್‌ಗಿರ್ಗಿ, ಶಾಂತರಾಜು, ಸುಂದರ್ ಕಲಿವೀರ, ಗುರುರಾಜ್, ಮಹಮ್ಮದ್ ಗೌಸ್, ರಿದಂ ರಾಮಣ್ಣ ಇತರರು ಇದ್ದರು