ಸಾರಾಂಶ
ಗರಸಭೆಯ ೧೫ ನೇ ವಾರ್ಡಿನ ಬಾಬು ಜಗಜೀವನರಾಂ ಬಡಾವಣೆಯಲ್ಲಿ ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರಸಭೆಯ ೧೫ ನೇ ವಾರ್ಡಿನ ಬಾಬು ಜಗಜೀವನರಾಂ ಬಡಾವಣೆಯಲ್ಲಿ ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣ ನೆರವೇರಿಸಿದ ಅಖಿಲ ಕರ್ನಾಟಕ ಕನ್ನಡ ಮಹಾಸಭೆ ರಾಜ್ಯಾಧ್ಯಕ್ಷ ಚಾ.ರಾಂ. ಶ್ರೀನಿವಾಸಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವವು ಕನ್ನಡಿಗರ ಅಭಿಮಾನದ ಸಂಕೇತವಾಗಿದ್ದು, ನಾಡು, ನುಡಿ, ಜಲಕ್ಕಾಗಿ ಶ್ರಮಿಸಿದ ಕನ್ನಡ ಸಾಧಕರನ್ನು ನೆನೆಸಿಕೊಳ್ಳುವ ಸುದಿನವಾಗಿದೆ. ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಆದಿಯಾಗಿ ಎಲ್ಲ ಕನ್ನಡ ಹೋರಾಟಗಾರರು, ಚಳುವಳಿಗಾರರು, ಸಾಹಿತಿಗಳನ್ನು ಸ್ಮರಿಸಿ ಅವರು ಹಾಕಿಕೊಟ್ಟ ದಿನವಿದು. ಕನ್ನಡ ನಾಡು, ನುಡಿ, ಭಾಷೆಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಹ ಜಬಾಬ್ದಾರಿ ನಮ್ಮ ಮೇಲಿದ್ದು, ತನು ಕನ್ನಡ, ನುಡಿ ಕನ್ನಡ ಮನಕನ್ನಡ ಎಂಬ ವಾಣಿಯಂತೆ ಇಂದಿನ ಯುವ ಜನತೆ ಓದಿ ಕನ್ನಡದ ಉಳಿವಿಗಾಗಿ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು. ಕನ್ನಡ ಚಳುವಳಿಗಾರ ನಿಜಧ್ವನಿ ಗೋವಿಂದರಾಜು ಮಾತನಾಡಿ, ರಾಜ್ಯದ ಯಾವುದೇ ಮೂಲೆಯಲ್ಲಾಗಲೀ ಕನ್ನಡಭಾಷೆ, ನೆಲಜಲಕ್ಕೆ ಅನ್ಯಾಯವಾದ ವೇಳೆ ಮೊದಲು ಹೋರಾಟ ಆರಂಭವಾಗುವುದು ಗಡಿಜಿಲ್ಲೆ ಚಾಮರಾಜನಗರದಲ್ಲಿ ಎಂಬುದೇ ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಕನ್ನಡಚಸಾಹಿತ್ಯವನ್ನು ಓದುವ ಮೂಲಕ ಭಾಷೆ ಆಸ್ಮಿತೆ ಕಾಪಾಡಬೇಕು ಎಂದರು.ಪಣ್ಯದ ಹುಂಡಿ ರಾಜು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗಾಯಕ ಸಿ.ಎಂ.ನರಸಿಂಹಮೂರ್ತಿ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ್, ಸಮಾಜ ಸೇವಕರಾದ ಜಗದೀಶ್, ರಂಗಸ್ವಾಮಿ, ಗಡಿನಾಡು ಕನ್ನಡ ಹೋರಾಟ ವೇದಿಕೆ ಉಪಾಧ್ಯಕ್ಷ ನಂಜುಂಡಶೆಟ್ಟಿ, ಕನ್ನಡ ಚಳುವಳಿಗಾರ, ಮಹೇಶ್‌ಗೌಡ, ಶ್ರೀಗಂಧ ಕನ್ನಡ ಯುವ ವೇದಿಕೆ ರವಿಚಂದ್ರ ಪ್ರಸಾದ್ ಕಹಳೆ, ಡಾ.ಎಸ್ಪಿ ಬಾಲಸುಬ್ರಮಣ್ಯಂ, ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಎಚ್ಎಂ. ಶಿವಣ್ಣ, ರೈತ ಹೋರಾಟಗಾರ ಚಿಕ್ಕ ಮೋಳೆ ಸಿದ್ದಶೆಟ್ಟಿ, ಕನ್ನಡ ಚಳುವಳಿಗಾರ ವೀರಭದ್ರ, ಚಾ.ಸಿ. ಸಿದ್ದರಾಜು, ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷ ರಾಚಪ್ಪ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.ಇದೇ ಸಂಧರ್ಭದಲ್ಲಿ ಬಡಾವಣೆಯ ನಿವಾಸಿಗಳ ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಗಡಿನಾಡು ಕನ್ನಡ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಚಪ್ಪ ವಿತರಿಸಿದರು. ಪಣ್ಯದ ಹುಂಡಿ ರಾಜು ಕಲಾವಿದ ಡ್ಯಾನ್ಸ್ ಬಸವರಾಜು, ಪ್ರಭುಸ್ವಾಮಿ, ಪ್ರಸಾದ್, ಶಿವು, ಬಂಗಾರು ರಾಮಸಮುದ್ರ, ವಾರ್ಡಿನ ನಿವಾಸಿಗಳು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))