ಸಾರಾಂಶ
ಕೊಪ್ಪ, ಕನ್ನಡ ನೆಲ ಜಲ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಎಂದು ಕನ್ನಡ ಸಾಹಿತ್ಯ ಪರಿಷತ್ತು ಹರಿಹರಪುರ ಹೋಬಳಿ ಮಹಿಳಾ ಘಟಕದ ಅಧ್ಯಕ್ಷ ಸುಮಿತ್ರಾ ನಾರಾಯಣ್ ಹೇಳಿದರು.
- ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ, ನುಡಿ ಕನ್ನಡೋತ್ಸವ, ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಕನ್ನಡ ನೆಲ ಜಲ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಎಂದು ಕನ್ನಡ ಸಾಹಿತ್ಯ ಪರಿಷತ್ತು ಹರಿಹರಪುರ ಹೋಬಳಿ ಮಹಿಳಾ ಘಟಕದ ಅಧ್ಯಕ್ಷ ಸುಮಿತ್ರಾ ನಾರಾಯಣ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹರಿಹರಪುರ ಹೋಬಳಿ ಘಟಕ, ಹರಿಹರಪುರ ಹೋಬಳಿ ಮಹಿಳಾ ಘಟಕ ಮತ್ತು ನವೋದಯ ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ನವೋದಯ ಕನ್ನಡ ಸಂಘ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ, ನುಡಿ ಕನ್ನಡೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಸುವ ಕರ್ತವ್ಯ ನಮ್ಮದು ಹಿರಿಯರು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಕಸಾಪ ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಕನ್ನಡಿಗರ ಇತಿಹಾಸ ಬಹು ಪ್ರಾಚೀನ. ಸಾವಿರಾರು ವರ್ಷದ ಇತಿಹಾಸದ ಕನ್ನಡವನ್ನು ನಾವೆಲ್ಲ ಹೆಚ್ಚು ಬಳಸಬೇಕಿದೆ. ಕಸಾಪ ಹೋಬಳಿ ಘಟಕ ಹರಿಹರಪುರ ನಿರಂತರವಾಗಿ ಹಳ್ಳಿ-ಹಳ್ಳಿಗಳಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಆಯೋಜಿಸುತ್ತಾ ನೂರಾರು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಅತಿ ಮುಖ್ಯ. ಪ್ರಬಂಧ ಕವನ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಜ್ಞಾನ ಹೆಚ್ಚುತ್ತದೆ ಮುಂದಿನ ದಿನಗಳಲ್ಲಿ ಹೋಬಳಿಯಾದ್ಯಂತ ಹಲವಾರು ಕಾರ್ಯಕ್ರಮ ಆಯೋಜನೆಯಾಗಲಿದೆ ಎಂದರು.ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ರಕ್ತದಾನಿ ಪ್ರವೀಣ್ ಕುಮಾರ್ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಅಭಿನಂದಿಸಲಾಯಿತು.ಸತ್ಯ ಹರಿಹರಪುರ, ಹರಿಹರಪುರ ನವೋದಯ ಕನ್ನಡ ಸಂಘ ರವಿರಾಜ್, ಶಿಕ್ಷಕ ಸುಕೇಶ್, ಹರಿಹರಪುರ ಅ.ರಾ.ಸ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಕ ಗಜೇಂದ್ರ, ಕ.ಸಾ.ಪ. ಹರಿಹರಪುರ ಹೋಬಳಿ ಘಟಕ ಕೋಶಾಧ್ಯಕ್ಷ ಎ.ಒ. ವೆಂಕಟೇಶ್, ಎಚ್.ಕೆ. ಗೋಪಾಲ್ ಮಾತನಾಡಿದರು. ಕಸಾಪ ಹರಿಹರಪುರ ಗ್ರಾಮ ಘಟಕದ ಅಧ್ಯಕ್ಷ ಮೂರ್ತಿ ಅಡಿಗ, ಶಾನುವಳ್ಳಿ ಗ್ರಾಮ ಘಟಕದ ಅಧ್ಯಕ್ಷೆ ಸರೋಜಾ ಜಯಪ್ರಕಾಶ್, ಕಸಾಪ ಪ್ರಧಾನ ಸಂಚಾಲಕ ಶುಕುರ್ ಅಹಮದ್, ಲಕ್ಷ್ಮಿನಾರಾಯಣ, ಸುಧಾಕರ, ಕಾಂತರಾಜ್, ಸುಧೀರ್, ಶಿವಶಂಕರ್, ರವಿಪ್ರಸಾದ್ ಭಂಡಿಗಡಿ, ಪದ್ಮಿನಿ ಲಕ್ಷ್ಮಿನಾರಾಯಣ , ಅರುಣಾಚಲ, ರಾಜು, ವಿವೇಕಾನಂದ, ಕಸಾಪ ಕಾರ್ಯದರ್ಶಿಶಶಿಶೇಖರ್ ಹೊರಕೂಡಿಗೆ, ಕಸಾಪ ಭಂಡಿಗಡಿ ಗ್ರಾಮ ಘಟಕ ಅಧ್ಯಕ್ಷೆ ಅಸ್ಮಾ, ಡಾ. ಶುಭಾ ಶಾಸ್ತ್ರೀ ಸವಿತಾ ಶ್ರೀಹರ್ಷ, ಅಂಬಿಕಾ ಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು.