ಸಾರಾಂಶ
ಶೃಂಗೇರಿಭಾರತೀಯ ಪ್ರಾಚೀನಾ ಭಾಷಾ ಪರಂಪರೆಗಳಲ್ಲಿ ಒಂದಾಗಿರುವ ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿರದೇ ಜ್ಞಾನ ಭಂಡಾರವಾಗಿದೆ. ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಸ್ಕೃತ ಪ್ರಾಧ್ಯಾಪಕ ಡಾ.ಮಹೇಶ್ ಕಾಕತ್ಕರ್ ಹೇಳಿದರು.
- ಹತ್ತು ದಿನಗಳ ಸಂಸ್ಕೃತ ಸಂಭಾಷಣ ಶಿಬಿರ
ಕನ್ನಡಪ್ರಭ ವಾರ್ತೆ, ಶೃಂಗೇರಿಭಾರತೀಯ ಪ್ರಾಚೀನಾ ಭಾಷಾ ಪರಂಪರೆಗಳಲ್ಲಿ ಒಂದಾಗಿರುವ ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿರದೇ ಜ್ಞಾನ ಭಂಡಾರವಾಗಿದೆ. ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಂಸ್ಕೃತ ಪ್ರಾಧ್ಯಾಪಕ ಡಾ.ಮಹೇಶ್ ಕಾಕತ್ಕರ್ ಹೇಳಿದರು.
ಪಟ್ಟಣದ ಸಂಸ್ಕಾರ ಭಾರತೀ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಹತ್ತು ದಿನಗಳ ಸಂಸ್ಕೃತ ಸಂಭಾಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತ ಭಾಷೆ ಪ್ರಾಚೀನ ಭಾರತದಲ್ಲಿ ಪ್ರಾರಂಭಗೊಂಡಿದ್ದು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿಯೂ ಒಂದಾಗಿದೆ. ಸಂಸ್ಕೃತ ಪ್ರಾಚೀನ ಭಾರತದಲ್ಲಿ ರಾಜಾಶ್ರಯ ಪಡೆದು ಜನರ ಆಡು ಭಾಷೆ, ವ್ಯವಹಾರ ಭಾಷೆ ಕೂಡ ಆಗಿತ್ತು.ಸಂಸ್ಕೃತದಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳ ರಚನೆಯಾಗಿದ್ದು ಜನರಲ್ಲಿ ಜ್ಞಾನ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂದಿಗೂ ಕೂಡ ಸಂಸ್ಕೃತ ಭಾಷೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ.ಸಂಸ್ಕೃತದಲ್ಲಿ ಅಧ್ಯಯನಗಳು ಹೆಚ್ಚಾಗಬೇಕಿದೆ. ಸಂಸ್ಕೃತ ಸಾಹಿತ್ಯ,ಭಾಷೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಸಂಸ್ಕೃತ ಭಾಷೆ ಕಲಿಯುವತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಸಂಸ್ಕೃತ ಸಾಹಿತ್ಯ ಓದಿ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾದ್ಯಾಪಕಿ ಜ್ಯೋತಿ ಕಾಕತ್ಕರ್, ರೋಹಿಣಿ, ನಟರಾಜನ್, ಲಕ್ಷ್ಮಿ, ಪ್ರತಿಭಾ, ಅರ್ಜನ್, ಪ್ರಣವ್, ಸಿರಿ, ಪೂರ್ಣಿಮಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.12 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಸಂಸ್ಕಾರ ಭಾರತಿ ಕಚೇರಿ ಆವರಣದಲ್ಲಿ ಉಚಿತ ಸಂಸ್ಕ್ರತ ಸಂಭಾಷಣೆ ಶಿಬಿರ ನಡೆಯಿತು.