ನಮ್ಮೆಲ್ಲರ ಮೇಲೆ ಸಂವಿಧಾನ ಕಾಪಾಡಿಕೊಳ್ಳುವ ಜವಾಬ್ದಾರಿ

| Published : Jul 10 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮೆಲ್ಲರ ಬದುಕಿಗೆ ಆಧಾರ ಸ್ತಂಭವಾಗಿರುವ ಸಂವಿಧಾನವನ್ನು ಇಂದು ನಾವೆಲ್ಲರೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗೋಣ ಎಂದು ಬೆಳಗಾವಿಯ ಎಎಸ್ಪಿ ರವೀಂದ್ರ ಗಡಾದೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮೆಲ್ಲರ ಬದುಕಿಗೆ ಆಧಾರ ಸ್ತಂಭವಾಗಿರುವ ಸಂವಿಧಾನವನ್ನು ಇಂದು ನಾವೆಲ್ಲರೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗೋಣ ಎಂದು ಬೆಳಗಾವಿಯ ಎಎಸ್ಪಿ ರವೀಂದ್ರ ಗಡಾದೆ ಹೇಳಿದರು.ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಸರ್ಕಾರಿ ನೌಕರರ ಸಂಘದ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ಬದುಕಿದ್ದಾಗಲೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಡೆಗೆ ಇದ್ದರು. ಅವರ ಸಾವಿನ ನಂತರವೂ ಬಡವರನ್ನು ನಿಕೃಷ್ಟರನ್ನು ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವುದು ಬಾಬಾಸಾಹೇಬರು ಬರೆದ ಸಂವಿಧಾನವೇ ವಿನಃ ಯಾವ ವ್ಯಕ್ತಿಯೂ ಅಲ್ಲ, ಸರ್ಕಾರವೂ ಅಲ್ಲ ಎಂದರು.

ಬೆಳಗಾವಿ ಹೆಸ್ಕಾಂ, ಲೆಕ್ಕ ನಿಯಂತ್ರಣಾಧಿಕಾರಿ ಸುರೇಶ ಎ.ಸಿಂಧೂರ ಮಾತನಾಡಿ, ಇಂದಿನ ಯುಗದಲ್ಲಿ ಪೂರ್ವಾಗ್ರಹ ಪೀಡಿತ ಸಾಹಿತ್ಯವನ್ನು ಓದದೆ. ಅತೀ ಹೆಚ್ಚು ಮೊಬೈಲ್ ಬಳಸದೆ ಧನಾತ್ಮಕ ಸಾಹಿತ್ಯವನ್ನು ಓದುವುದರ ಮೂಲಕ ಬದುಕು ಮತ್ತು ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ ಎಂದು ಸಲಹೆ ನೀಡಿದರು.ಸಾನ್ನಿಧ್ಯ ಕಲಬುರಗಿಯ ನಾಗರತ್ನ ಬಂತೆ ಜೀ ವಹಿಸಿದ್ದರು. ಆಯುಷ ನಿರ್ದೇಶನಾಲಯ ಉಪನಿರ್ದೇಶಕ ಅನುರಾಧಾ ಎಲ್. ಚಂಚಲಕರ, ಜಾರಿ ನಿರ್ದೇಶನಾಲಯ ಡಿವೈಎಸ್ಪಿ ಸುನೀಲ ಕಾಂಬಳೆ, ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ, ಅಂಚೆ ಅಧೀಕ್ಷಕ ಚಂದ್ರಕಾಂತ ಕಾಂಬಳೆ, ಶಿವಲಿಂಗ ಕುರೆನ್ನವರ, ಡಾ. ರಮೇಶ ಕಾಂಬಳೆ, ಸಾಹೇಬ ಕಾಂಬಳೆ, ಮುದ್ದಣ್ಣ ಭೀಮನಗರ, ರಾವಸಾಹೇಬ ಗವಾರಿ, ಬಸವರಜ ಚಲವಾದಿ, ಸುಜಾತಾ ಚಲವಾದಿ, ಚಿದಾನಂದ ಕಾಂಬಳೆ, ಚಿದಾನಂದ ಕಾಂಬಳೆ, ಅರವಿಂದ ಲಂಬು, ರವಿಕಾಂತ ಸಿ.ಎಂ, ರಾಕೇಶ ಇಂಗಳಗಿ, ಹೆಚ್.ಬಿ. ಸಿಂಗ್ಯಾಗೋಳ, ರವೀಂದ್ರ ಶಿವಯಗೋಳ, ದುರ್ಗಪ್ಪ ಚಲವಾದಿ, ಮೋಹನ ಬಿ. ಗುನ್ನಾಪುರ, ಸುರೇಶ ದಲ್ಲಾರಿ, ಶಿವಾನಂದ ಕಟ್ಟಿಮನಿ, ಪುನೀತಕುಮಾರ, ಕುಮಾರ ಬಾಗೇವಾಡಿ, ರಮೇಶ ಅರ್. ಪಿರಗಾ, ಆಂಜನೇಯಸ್ವಾಮಿ ಹೊಸಮನಿ, ಪಿ.ಎಸ್. ಧರಣಾಕರ, ರವೀಂದ್ರ ಇರಸೂರ, ಯುವರಾಜ ನಾಟೀಕಾರ, ಸಿ.ಕೆ. ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.