ಗ್ರಾಮೀಣರಲ್ಲಿ ಅರಿವು ಮೂಡಿಸುವುದು ಅಧಿಕಾರಿಗಳ ಜವಾಬ್ದಾರಿ

| Published : Feb 08 2025, 12:32 AM IST

ಸಾರಾಂಶ

ತುಮಕೂರು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪಟ್ಟಣದ ನಂದಿನಿ ಕ್ಷೀರ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭವಾರ್ತೆ ಪಾವಗಡ ತುಮಕೂರು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪಟ್ಟಣದ ನಂದಿನಿ ಕ್ಷೀರ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಎಚ್.ವಿ.ವೆಂಕಟೇಶ್‌ ಕಾರ್ಯಾಗಾರದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ಸ್ಥಳೀಯ ಹಾಲು ಉತ್ಪಾದಕ ಸಂಘಗಳಲ್ಲಿನ ಸಮಸ್ಯೆ ಹಾಗೂ ರೈತರಿಗೆ ಹಾಲಿನದರ ಹೆಚ್ಚಿಸುವ ಮೂಲಕ ನೆರವು ಹಾಗೂ ಡೈರಿಯಲ್ಲಿ ಸದಸ್ಯತ್ವ ಪಡೆದ ರೈತರಿಗೆ ವಿಮೆ ಸೌಲಭ್ಯ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಇತರೆ ಅನೇಕ ರೀತಿಯ ಸೌಲಭ್ಯ ಕುರಿತು ವಿವರಿಸಿದರು. ಗ್ರಾಮೀಣ ಜನತೆಯ ಉತ್ತಮ ಬದುಕಿಗೆ ಹಸು ಸಾಕಾಣಿಕೆಯಿಂದ ಸಾಧ್ಯ. ಈ ಬಗ್ಗೆ ಹೆಚ್ಚು ಅರಿವು ಮೂಡಿಸುವಂತೆ ಸ್ಠಳೀಯ ಡೈರಿಯ ಕಾರ್ಯದರ್ಶಿಗಳಿಗೆ ಸಲಹೆ ನೀಡಿದರು. ಪ್ರತಿಯೊಬ್ಬ ರೈತ ಕುಟುಂಬದವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಕರೆ ನೀಡಿದರು. ಈ ವೇಳೆ ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲಾ ಅಧ್ಯಕ್ಷರಾದ ಜಿ.ಜಿ. ವೆಂಕಟೇಗೌಡ,ತುಮುಲ್ ನಿರ್ದೇಶಕರಾದ ಬೆಳ್ಳಿಬಟ್ಲು ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕೇಶವ ಚಂದ್ರದಾಸ್‌, ಪುರಸಭಾ ಅಧ್ಯಕ್ಷ ರಾಜೇಶ್, ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ ಸದಸ್ಯರಾದ ತೆಂಗಿನಕಾಯಿ ರವಿ,ಸಮಾಜ ಸೇವಕ ಬತ್ತಿನೇನಿ ನಾಗೇಂದ್ರ ರಾವ್,ಜಿ.ಸ.ಯೂ.ನಿ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಮಹಾಂತೇಶ್ ಹಿರೇಮಠ್ , ತಾಲೂಕು ಅಧಿಕಾರಿಗಳಾದ ಸುನಿತಾ ಮತ್ತು ಮೋಹನ್ ಸೇರಿ ಅನೇಕರಿದ್ದರು.