ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಭಗವಂತ ಎಲ್ಲೆಡೆ ವ್ಯಾಪಿಸಿದ್ದು ದೇವರಲ್ಲಿ ಜನರು ಭಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಆಲತ್ತೂರು ಗ್ರಾಮದ ಶಾಂತಿ ಹಾಗೂ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ಶ್ರೀ ವರದರಾಜಸ್ವಾಮಿ, ಶ್ರೀ ಕಾಲಭೈರವೇಶ್ವರ, ಕಾಳಿಕಾಂಬ, ವೇಣುಗೋಪಾಲಸ್ವಾಮಿ, ಶ್ರೀ ರಾಮಮಂದಿರ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ, ಪುನರ್ ಪ್ರತಿಷ್ಠಾಪನೆ ಕುಂಭಾಬಿಷೇಕ, ಅಂಕ ಶಿಲಾಸ್ಥಾಪನಾ ಮಹೋತ್ಸವದ ಬಳಿಕ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.ಭಗವಂತನ ಅನುಗ್ರಹ ಎಲ್ಲರಿಗೂ ಇರುತ್ತೇ, ಜನರಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ ಇದ್ದರೂ ಕೆಲವು ಸಲ ಭಗವಂತ ಪರೀಕ್ಷೆ ಮಾಡುತ್ತಾನೆ. ಕಷ್ಟಕ್ಕೆ ಎದೆಗುಂದಬೇಕಿಲ್ಲ, ಹೃದಯ ಪೂರ್ವಕವಾಗಿ ನೋವುಗಳನ್ನು ಎದುರಿಸಬೇಕು ಎಂದರು. ಜನರಿಗೆ ಸಂತೋಷ, ನೆಮ್ಮದಿ ಸಿಗಬೇಕೆಂದರೆ ದೇವಸ್ಥಾನಗಳಿರಬೇಕು. ಜನರಲ್ಲಿ ಯಾವುದೇ ಸಂಕೋಚಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳಲು ಆಗುವುದಿಲ್ಲ. ಹಾಗಾಗಿ ದೇವರ ಬಳಿ ಹೇಳಿಕೊಳ್ಳುತ್ತಾನೆ ಎಂದರು.ಸಾಹಿತಿ ಪ್ರೊ. ಕೃಷ್ಣೇಗೌಡರ ಹಾಸ್ಯದಲ್ಲೂ ನೈತಿಕತೆ ಇರುತ್ತೇ? ಬರೀ ಹಾಸ್ಯ ಮಾಡುವವರಲ್ಲ. ಜನರಿಗೆ ನೈತಿಕತೆ ತಿಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ಮಾತನಾಡಿದರು. ಮಾಜಿ ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ಹಾಗೂ ಸನ್ಮಾನಿತ ಐಆರ್‌ಎಸ್ ಅಧಿಕಾರಿ ನಾರಾಯಣಸ್ವಾಮಿ, ಅಬಕಾರಿ ಜಂಟಿ ಆಯುಕ್ತ ಎ.ಎಲ್. ನಾಗೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಬಿಜೆಪಿ ಮುಖಂಡ ಆಲತ್ತೂರು ಕೆ. ರಾಜೇಶ್ ಮಾತನಾಡಿದರು.ಸಮಾರಂಭದಲ್ಲಿ ಆದಿ ಚುಂಚನಗಿರಿ ಮೈಸೂರು ಶಾಖಾ ಮಠಾಧೀಶ ಸೋಮನಾಥ ಸ್ವಾಮೀಜಿ, ತುಮಕೂರು ಜಿಲ್ಲೆಯ ಗುಬ್ಬಿ ಮಠಾಧೀಶ ಚಂದ್ರಶೇಖರ ಸ್ವಾಮೀಜಿ, ಮಾದಪಟ್ಟಣ ಮಠಾಧೀಶ ತೋಂಟದಾರ್ಯ ಸ್ವಾಮೀಜಿ, ಮಾಜಿ ಸಂಸದ ಎಂ.ಶಿವಣ್ಣ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಗ್ರಾಮದ ಪ್ರಮುಖರಾದ ಬೋರೇಗೌಡ, ರಾಮಕೃಷ್ಣೇಗೌಡ, ಮಲ್ಲೇಶ್, ಮಹೇಶ್, ರೇವಣ್ಣ, ಕೆ.ಸತೀಶ್, ಶಾಂತೇಶ್, ಎಲ್‌ಐಸಿ ಮಹೇಶ್, ಪ್ರವೀಣ್ ಮುಖಂಡರಾದ ನಂಜನಗೂಡಿನ ಕಿಟ್ಟಪ್ಪ, ಎಸ್.ಶಿವನಾಗಪ್ಪ, ರಮೇಶ್ ಗುಂಡ್ಲುಪೇಟೆ, ಎಲ್.ಸುರೇಶ್, ಎನ್.ಮಲ್ಲೇಶ್, ಕನ್ನೇಗಾಲಸ್ವಾಮಿ ಸೇರಿದಂತೆ ಆಲತ್ತೂರು ಗ್ರಾಮಸ್ಥರು ಇದ್ದರು.
ವಿಕಾಸ ಮತ್ತು ಸೃಷ್ಟಿಯಲ್ಲಿ ಮನುಷ್ಯ ಶೇಷ್ಠನಾಗುತ್ತಾನೆ. ಮತ್ತಷ್ಟು ಶ್ರೇಷ್ಠತೆ ಕಾಣಲು ಮನುಷ್ಯರ ಮನಸ್ಸಿಗೆ ಸಂಸ್ಕಾರ ಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಮಹಾಸ್ವಾಮೀಜಿ ಹೇಳಿದರು. ವಿದೇಶಗಳಲ್ಲಿ ಐದು ಸಾವಿರ ವರ್ಷಗಳಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಜ್ಞಾನಿಗಳು ಇದ್ದರು. ನಮ್ಮ ದೇಶದಲ್ಲಿ ಹೆಜ್ಜೆ ಇಟ್ಟ ಕಡೆಯಲ್ಲಿ ಮಣ್ಣಿನ ಕಣದಲ್ಲೂ ಜ್ಞಾನಿಗಳು ಸಿಗುತ್ತಾರೆ. ಮನುಷ್ಯ ಒಳಗಿನ ಜ್ಞಾನ ತೆರೆದರೆ ಶ್ರೇಷ್ಠರಾಗುತ್ತಾರೆ ಎಂದರು.ನಿರ್ಮಲಾನಂದ ಸ್ವಾಮೀಜಿನಾಲ್ವರು ಸಾಧಕರನ್ನು ಸನ್ಮಾನಿಸಿದ ಶ್ರೀಗಳು:ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನಾಲ್ವರು ಸಾಧಕರನ್ನು ಸುತ್ತೂರು ಹಾಗೂ ಆದಿಚುಂಚನಗಿರಿ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಅಬಕಾರಿ ಜಂಟಿ ಆಯುಕ್ತ ಆಲತ್ತೂರು ಎ.ಎಲ್. ನಾಗೇಶ್, ಐಆರ್‌ಎಸ್ ಅಧಿಕಾರಿ ಸವಕನಹಳ್ಳಿಪಾಳ್ಯದ ನಾರಾಯಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಬಿ.ಶಿವಣ್ಣ, ಸಾಹಿತಿ ಪ್ರೊ. ಕೃಷ್ಣೇಗೌಡರನ್ನು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ ಸನ್ಮಾನಿಸಿದರು.