ಕರ್ನಾಟಕ ರಾಜ್ಯದ ಕುರ್ಚಿ ಕಿತ್ತಾಟದ ಬಗ್ಗೆ ಮೋದಿ ಅವರು ರಾಜಕೀಯವಾಗಿ ಹೇಳುವುದು ಸ್ವಾಭಾವಿಕ. ರಾಜ್ಯದಲ್ಲಿ ಕುರ್ಚಿ ಗುದ್ದಾಟ ಇರುವುದೇ ಅಲ್ವಾ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾವೇರಿ: ಕರ್ನಾಟಕ ರಾಜ್ಯದ ಕುರ್ಚಿ ಕಿತ್ತಾಟದ ಬಗ್ಗೆ ಮೋದಿ ಅವರು ರಾಜಕೀಯವಾಗಿ ಹೇಳುವುದು ಸ್ವಾಭಾವಿಕ. ರಾಜ್ಯದಲ್ಲಿ ಕುರ್ಚಿ ಗುದ್ದಾಟ ಇರುವುದೇ ಅಲ್ವಾ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ವರ್ಕಿಂಗ್ ಸ್ಟೈಲ್ ಬೇರೆ, ಕಾಂಗ್ರೆಸ್ ವರ್ಕಿಂಗ್ ಸ್ಟೈಲ್ ಬೇರೆ. ಅವರು ಹೇಳಿದಂತೆ ನಾವು ಹೇಳಲು ಆಗಲ್ಲ. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಯಾವ ರೀತಿ ಅಧಿಕಾರಕ್ಕೆ ಬಂದರು ಅಂತ ಗೊತ್ತಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಆ ರೀತಿಯಲ್ಲ ಆಗಲ್ಲ. ಪೊಲೀಸರು ಭದ್ರತೆಯಲ್ಲಿ ಇರುತ್ತಾರೆ. ಅವರೇ ಎಲ್ಲ ನೋಡಿಕೊಳ್ಳುತ್ತಾರೆ. ಎಲ್ಲೋ ಆಗಿದ್ದಕ್ಕೂ, ಪ್ರಧಾನ ಮಂತ್ರಿಗೆ ಹೋಲಿಸಲು ಆಗುವುದಿಲ್ಲ. ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿನೇ, ಭದ್ರತೆ ಜವಾಬ್ದಾರಿ ನಮ್ಮದು ಅಷ್ಟೇಯಲ್ಲ. ಕೇಂದ್ರ ಸರ್ಕಾರದ್ದು ಇರುತ್ತದೆ. ಅದೇನೂ ಆತಂಕ ಪಡುವಂತಹ ಅವಶ್ಯಕತೆ ಇಲ್ಲ ಎಂದರು.
ತಮಿಳುನಾಡಿನಲ್ಲಿ ಸೆಲ್ಯುಲರ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಬಹಳ ಸಂತೋಷ. ಆ ಹಿನ್ನೆಲೆಯಲ್ಲಿ ನಾವೆಲ್ಲರೂ ಬೆಂಬಲ ಮಾಡಿದ್ದೇವೆ. ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಬಿಜೆಪಿ ಅಧಿಕಾರ ಇರುವ ಬೇರೆ ರಾಜ್ಯದಲ್ಲಿ ನಮ್ಮದೇ ಗ್ಯಾರಂಟಿ ಕಾಪಿ ಮಾಡಿ, ಅದನ್ನೇ ಜಾರಿಗೊಳಿಸುತ್ತಾರೆ ಎಂದು ಜಾರಕಿಹೊಳಿ ಲೇವಡಿ ಮಾಡಿದರು.