ಸಹಬಾಳ್ವೆಯ ಸಂದೇಶ ಸಾರಿದವರು ಜಗದ್ಗುರು ರೇಣುಕಾಚಾರ್ಯರು

| Published : Mar 25 2024, 12:54 AM IST

ಸಹಬಾಳ್ವೆಯ ಸಂದೇಶ ಸಾರಿದವರು ಜಗದ್ಗುರು ರೇಣುಕಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಶಾಂತಿಯುತ ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಸಂದೇಶ ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದು ವಿದ್ವಾನ್ ಚಂದ್ರಶೇಖರಯ್ಯ ಹೇಳಿದರು.

ರಾಮನಗರ: ಶಾಂತಿಯುತ ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಸಂದೇಶ ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದು ವಿದ್ವಾನ್ ಚಂದ್ರಶೇಖರಯ್ಯ ಹೇಳಿದರು.

ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಮಾತನಾಡಿದರು.

ಸಮಸ್ತ ಲೋಕ ಕಲ್ಯಾಣಕ್ಕಾಗಿ ಕೊಲ್ಲಿಪಾಕಿಯ ಸೋಮೇಶ್ವರ ಲಿಂಗಮುಖದಿಂದ ಅವಿರ್ಭವಿಸಿದ ಜಗದ್ಗುರು ರೇಣುಕಾಚಾರ್ಯರು ಲೋಕೋದ್ಧಾರಕ್ಕಾಗಿ ಹಗಲಿರುಳೆನ್ನದೆ ಸಂಚರಿಸಿದರು. ನಾಲ್ಕು ಯುಗಗಳಲ್ಲಿ ಮೊದಲ ಕೃತಾಯುಗದಲ್ಲಿ ಏಕಾಕ್ಷರರಾಗಿ, ತ್ರೇತಾಯುಗದಲ್ಲಿ ಏಕವಕ್ತ್ರರಾಗಿ, ದ್ವಾಪರಾಯುಗದಲ್ಲಿ ರೇಣುಕಾಚಾರ್ಯರಾಗಿ, ಕಲಿಯುಗದಲ್ಲಿ ರೇವಣಸಿದ್ದರಾಗಿ ಧರೆಯಲ್ಲಿ ಅವತರಿಸಿದ ಮಹಾಪುರುಷರು ಎಂದು ತಿಳಿಸಿದರು.

ಕಲಿಯುಗದಲ್ಲಿ ರೇವಣಸಿದ್ಧರಾಗಿ ಧರೆಗವತರಿಸಿ ಅನಂತ ಲೀಲೆಗಳನ್ನು ಮಾಡಿ ಭಕ್ತರ ಮನದಲ್ಲಿ ಆಧ್ಯಾತ್ಮಿಕ ಚೇತನವನ್ನು ತುಂಬಿದವರು. ರಾಮನಗರ ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಗುಪ್ತವಾಗಿ 700 ವರ್ಷಗಳು ತಪೋನುಷ್ಠಾನಗಳನ್ನು ಮಾಡಿದವರು. ನಂತರ ತುಮಕೂರಿನ ಸಿದ್ದರಬೆಟ್ಟದಲ್ಲಿ ತಪಪ್ಪನ್ನು ಮಾಡಿ ಲೋಕಕಲ್ಯಾಣಾರ್ಥವಾಗಿ ಲೋಕಸಂಚಾರ ನಡೆಸಿ ಭಕ್ತರಲ್ಲಿ ಶಿವಜ್ಞಾನವನ್ನು ತುಂಬಿದರು ಎಂದು ಹೇಳಿದರು.

ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಪೋಲೀಸ್ ರುದ್ರೇಶ್ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ತಪೋನುಷ್ಠಾನ ಮಾಡಿದ ಪುಣ್ಯ ಸ್ಥಳದಲ್ಲಿರುವ ನಾವೇ ಧನ್ಯರು ಅಂತಹ ಮಹಮಹಿಮರು ನಮಗೆ ಶಾಂತಿ ಸಹಬಾಳ್ವೆಯ ಸಂದೇಶ ನೀಡಿ ಮಾನವನ ದಾನದ ಗುಣಗಳನ್ನು ಹೇಳಿಕೊಟ್ಟು ಸನ್ಮಾರ್ಗದ ದಾರಿ ನಮಗೆ ತೋರಿ ಹೋಗಿದ್ದಾರೆ. ಅಂತಹ ಮಹಾಮಹಿಮರ ಆದರ್ಶ ನಾವು ಪಾಲಿಸಬೇಕು. ಅವರ ಜಯಂತಿಯನ್ನು ಸರ್ಕಾರ ಪ್ರತೀ ವರ್ಷ ಆಚರಿಸುತ್ತಿರುವುದು ಸಂತಷ ತಂದಿದೆ. ಭಕ್ತ ಗಣಕೋಟಿಗೆ ರೇಣುಕಾಚಾರ್ಯರ ಮಹಿಮೆಯನ್ನು ಸಾರಲು ಇಂತಹ ಕಾರ್ಯಕ್ರಮ ಅವಶ್ಯಕವಾಗಿವೆ ಎಂದರು.

ವೀರಶೈವ ಮುಖಂಡ ಕೆ.ಎಸ್. ಶಂಕರಪ್ಪ ಮಾತನಾಡಿ, ಸೃಷ್ಟಿಯ ಅವಿಭಾಜ್ಯ ಅಂಗ ಗುರು ಜಗತ್ತಿಗೆ ಅಜ್ಞಾನದ ಕಡೆಯಿಂದ ಸುಜ್ಞಾನದ ಕಡೆ ಬೀಜ ಬಿತ್ತಿದವರು ರೇಣುಕಾಚಾರ್ಯರು. ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಂತಿ, ಸಾಮರಸ್ಯ, ಸಹಬಾಳ್ವೆಯ ಹಾದಿ ರೇಣುಕಾಚಾರ್ಯರು ತೋರಿದ್ದಾರೆ. ವಿಶ್ವ ಬಂಧುತ್ವ ಸಾರಿದ ರೇಣುಕಾಚಾರ್ಯರ ಧರ್ಮದ ದಶ ಸೂತ್ರಗಳು ಸರ್ವರಿಗೂ ಸರ್ವ ಕಾಲಕ್ಕೂ ಧರ್ಮದ ಹಾದಿಯಲ್ಲಿ ನಡೆಯುವ ದಿಕ್ಕನ್ನು ತೋರಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ಬಾಬು, ವೀರಶೈವ ಸಂಘ ತಾಲ್ಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ತಾಲೂಕು ಮಹಾಸಭಾ ಅಧ್ಯಕ್ಷ ಪೋಲೀಸ್ ಶಂಕರಪ್ಪ ವೀರಶೈವ ಮುಖಂಡರಾದ ಐಜೂರು ಜಗದೀಶ್, ಶಿವಾನಂದ್, ವಿಭೂತಿಕೆರೆ ಶಿವಲಿಂಗಯ್ಯ, ಡೇರಿ ಮಹೇಶ್, ಶಿವಲಿಂಗಪ್ರಸಾದ್, ರಾಜಶೇಖರ್, ಶಿವಸ್ವಾಮಿ, ಯೋಗಾನಂದ್, ಶಂಕರ್, ಸಿದ್ದಲಿಂಗಮೂರ್ತಿ, ರೇವಣ್ಣ, ಲೋಕೇಶ್, ಚಂದ್ರಶೇಖರ್, ಕೀರ್ತಿ, ರುದ್ರೇಶ್, ನಾಗರಾಜು ಮತ್ತಿತರರು ಹಾಜರಿದ್ದರು.

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.