ಬದುಕಿಗೆ ಬೆಳಕು ತೋರಿದವರು ಸಿದ್ದೇಶ್ವರ ಶ್ರೀ

| Published : Jan 02 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಂಬಾ: ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿಗೂ ಬೆಳಕು ತೋರಿದವರು. ಪದವಿ, ಗೌರವ, ಹಣ, ಅಂತಸ್ತನ್ನು ತಿರಸ್ಕರಿಸಿದ ಗುರುವಿಗೆ ನಮಿಸಿ,ಬದುಕು ಪವಿತ್ರಗೊಳಿಸಿಕೊಳ್ಳೋಣ ಎಂದು ಪ್ರಜ್ಞಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಂಬಾ: ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿಗೂ ಬೆಳಕು ತೋರಿದವರು. ಪದವಿ, ಗೌರವ, ಹಣ, ಅಂತಸ್ತನ್ನು ತಿರಸ್ಕರಿಸಿದ ಗುರುವಿಗೆ ನಮಿಸಿ,ಬದುಕು ಪವಿತ್ರಗೊಳಿಸಿಕೊಳ್ಳೋಣ ಎಂದು ಪ್ರಜ್ಞಾನಂದ ಸ್ವಾಮೀಜಿ ಹೇಳಿದರು.

ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳು ಸತ್ಯದ ಅರಿವು ಮೂಡಿಸುವುದರ ಜೊತೆಗೆ ಜ್ಞಾನದ ಬೆಳಕು ತೋರಿಸಿ ಎಲ್ಲರ ಬದುಕಿಗೆ ದಿವ್ಯ ಚೇತನರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಿವಪ್ರಸಾದ ಸ್ವಾಮೀಜಿ ಮಾತನಾಡಿ, ಭಕ್ತರ ಮನದ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ ಶ್ರೀಗಳ ಬದುಕೇ ಎಲ್ಲರಿಗೂ ಪ್ರೇರಣಾದಾಯಕ. ಅವರ ಅಮೃತ ಸಮಾನವಾದ ಪ್ರವಚನದ ಸಾರವನ್ನು ತಿಳಿದು ಬದುಕು ರೂಪಿಸಿಕೊಳ್ಳಬೇಕು ಎಂದರು.

ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ ಶಿಕ್ಷಕ ಶಿವಶರಣಪ್ಪ ಶಿರೂರು ಮಾತನಾಡಿ, ಜಾಗತಿಕ ದಾರ್ಶನಿಕರ ಗ್ರಂಥಗಳನ್ನು ಅಧ್ಯಯನ ಮಾಡಿದ್ದ ಶ್ರೀಗಳು, ಜನರಿಗೆ ಅರ್ಥವಾಗುವ ಶೈಲಿಯಲ್ಲಿ ಪ್ರವಚನ ಹೇಳುತ್ತಾ, ಬದುಕುವ ರೀತಿಯನ್ನು ತಿಳಿಸಿದ್ದಾರೆ. ಅವರ ಮಾರ್ಗದರ್ಶಿ ಸೂತ್ರ ಅಳವಡಿಸಿಕೊಂಡು ಮುನ್ನಡೆಯುವಂತೆ ತಿಳಿಸಿದರು.

ಪೂಜಣ್ಣ ಪೂಜಾರಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಶಾಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸುರೇಶಗೌಡ ಬಿರಾದಾರ, ಕಾರ್ಯದರ್ಶಿ ಸುನಂದಾ ಹುಣಶ್ಶಾಳ, ಶಿಕ್ಷಕರಾದ ಎಂ.ಎಸ್.ಪಾಪನಾಳಮಠ, ರಾಘು ಮೊಗಳ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಸಚಿನ ಅವಟಿ, ಮಧುಮತಿ ನಿಕ್ಕಂ, ಸರೋಜನಿ ಕಟ್ಟಿಮನಿ, ಆರ್.ಎಸ್.ಭಜಂತ್ರಿ, ಎಸ್.ಎಂ.ಬಾಗಲಕೋಟ, ಎಂ.ಎಂ.ವಾಡೇದ, ಎಂ.ವಿ.ಭಜಂತ್ರಿ, ವೀರೇಶ ಹುಣಶ್ಶಾಳ ಹಾಗೂ ಗ್ರಾಮಸ್ಥರು ಇದ್ದರು.