ಶಿವಕುಮಾರ ಶ್ರೀಗೆ ಭಾರತ ರತ್ನ ಕೊಟ್ಟರೆ ಒಳ್ಳೆಯದು: ರೇಣುಕಾಚಾರ್ಯ

| Published : Feb 05 2024, 01:45 AM IST

ಶಿವಕುಮಾರ ಶ್ರೀಗೆ ಭಾರತ ರತ್ನ ಕೊಟ್ಟರೆ ಒಳ್ಳೆಯದು: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಗಂಗಾ ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಕಾಂಗ್ರೆಸ್‌ ನವರು ರಾಜಕೀಯಕ್ಕೋಸ್ಕರ ಸಿದ್ದಗಂಗಾ ಶ್ರೀಗಳ ಹೆಸರನ್ನು ಎಳೆದು ತಂದಿದ್ದಾರೆ. ಅವರಿಗೆ ಭಾರತ ರತ್ನ ಕೊಟ್ಟರೆ ಒಳ್ಳೆಯದು, ಅದನ್ನು ನಾವೇನು ವಿರೋಧಿಸ್ತೀವಾ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರು

ಅಡ್ವಾಣಿಯವರು ಭೀಷ್ಮ, ರಥಯಾತ್ರೆ ಮುಖಾಂತರ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ಅವರಿಗೆ ಗೌರವ ನೀಡುವ ಸಲುವಾಗಿ ಭಾರತ ರತ್ನ ನೀಡಲಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದಗಂಗಾ ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಕಾಂಗ್ರೆಸ್‌ ನವರು ರಾಜಕೀಯಕ್ಕೋಸ್ಕರ ಸಿದ್ದಗಂಗಾ ಶ್ರೀಗಳ ಹೆಸರನ್ನು ಎಳೆದು ತಂದಿದ್ದಾರೆ. ಅವರಿಗೆ ಭಾರತ ರತ್ನ ಕೊಟ್ಟರೆ ಒಳ್ಳೆಯದು, ಅದನ್ನು ನಾವೇನು ವಿರೋಧಿಸ್ತೀವಾ ಎಂದರು.

ಸೋಮಣ್ಣ ತುಮಕೂರಿನಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸೋಮಣ್ಣ ಅವರು ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನ್ನಲ್ಲ. ಅವರು ಮತ್ತು ಹೈ ಕಮಾಂಡ್ ನಡುವೆ ಏನು ಮಾತುಕತೆ ನಡೆದಿದೆ ಗೊತ್ತಿಲ್ಲ ಎಂದರು.

ಮೋದಿ ಪ್ರಧಾನಿ ಆದ ಮೇಲೆ ರೈಲ್ವೇಗೆ, ನೀರಾವರಿ, ರಾಷ್ಟ್ರೀಯ ಹೆದ್ದಾರಿಗಳಿಗೆ ರೈತರಿಗೆ, ಜನಧನ್ ಖಾತೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋದರ ಬಗ್ಗೆ ದಾಖಲೆ ಕೊಡುತ್ತೇವೆ. ರಾಜ್ಯದಲ್ಲಿ ನಿಮ್ಮ ಸರ್ಕಾರ ಬಂದು 9 ತಿಂಗಳು ಕಳೆದಿದೆ. ಸರ್ಕಾರನೇ ಇಲ್ಲ ಸತ್ತೋಗಿದೆ ಎಂದರು.

ಕುಂಕುಮ ಹಚ್ಚಿದ್ರೆ ಬೇಡ ಅಂತೀರಾ, ಕೇಸರಿ ಕಂಡರೆ ಆಗಲ್ಲ, ನಿಮಗೆ ಮಕ್ಮಲ್ ಟೋಪಿ ಇಷ್ಟ ಆಗುತ್ತೆ. ತೀರ್ಥ ಪ್ರಸಾದ ಬೇಕಾಗಿಲ್ಲ, ನಿಮಗೆ ಬೇಕಾಗಿರೋದು ಬಿರಿಯಾನಿ, ಬಾಡೂಟ ಎಂದರು.

ನಮಗೆ ಸಿದ್ದರಾಮಯ್ಯ ಅವರ ಮೇಲೆ ಹಿಂದುಳಿದ ವರ್ಗದ ನಾಯಕರು ಅನ್ನುವ ಗೌರವವಿತ್ತು. ಸಿದ್ದರಾಮಯ್ಯ ಅವರ ತಂದೆ, ತಾಯಿ ಅವರಿಗೆ ರಾಮ ಅನ್ನೋ ಹೆಸರಿಟ್ಟಿದ್ದಾರೆ. ಡಿಕೆಶಿ ತಂದೆ, ತಾಯಿ ಶಿವ ಅನ್ನೋ ಹೆಸರನ್ನ ಇಟ್ಟಿದ್ದಾರೆ. ಆದರೆ ಇವರು ತಂದೆ, ತಾಯಿಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದರು.

ಡಿ.ಕೆ. ಸುರೇಶ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿತ್ತು ಎಂದ ಅವರು ದೇಶ ಒಡೆದ ಕೀರ್ತಿ ಇರುವುದು ಕಾಂಗ್ರೆಸ್ ನ ನೆಹರು ಕುಟುಂಬಕ್ಕೆ. ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾರೆ, ಆದರೆ ದೇಶವನ್ನ ಒಡೆದಿದ್ದೆ ಅವರ ಕುಟುಂಬದವರು ಎಂದರು.

ದೇಶದ್ರೋಹದ ಕೆಲಸ ಆಗ್ತಿರೋದೇ ಕಾಂಗ್ರೆಸ್‌ನಲ್ಲಿ ಎಂದ ಅವರು ಮಂಡ್ಯದಲ್ಲಿ ಹನುಮ ಧ್ವಜವನ್ನು ಇಳಿಸುತ್ತೀರಿ, ಮೈಸೂರಿನಲ್ಲಿ ಕೆಲವು ಕಡೆ ಹತ್ತಾರು ವರ್ಷದಿಂದ ಹಸಿರು ಧ್ವಜ ಹಾರಾಡುತ್ತಿದೆ. ಅವರ ಮೇಲೆ ಕೇಸ್ ಹಾಕಿದ್ದೀರ ಎಂದು ಪ್ರಶ್ನಿಸಿದರು. ನಾನು ಪವಿತ್ರವಾದ ಹನುಮನ ಮೂರ್ತಿ ಮುಂದೆ ಹೇಳುತ್ತೇನೆ ಹನುಮನ ಶಾಪ, ರಾಮನ ಶಾಪ, ಕರಸೇವಕರ ಶಾಪ, ಮಹಿಳೆಯರ ಶಾಪದಿಂದ, ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರ ಪತನವಾಗುತ್ತದೆ ಎಂದರು.

ಸಿ.ಟಿ.ರವಿ ಅವರು ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿ.ಟಿ. ರವಿ ಹಾಗೆ ಹೇಳಿರುವ ಒಂದೇ ಒಂದು ವಿಡಿಯೋ ಕ್ಲಿಪ್ಲಿಂಗ್ ಇದ್ದರೂ ನಾನು ರಾಜಕೀಯಕ್ಕೆ ನಿವೃತ್ತಿ ಹೇಳ್ತಿನಿ ಎಂದರು.