ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಶಿಲಾಮಯ ದೇಗುಲವಾಗಿ ಪುನಃ ನಿರ್ಮಾಣಗೊಂಡಿರುವ ದರೆಗುಡ್ಡೆ ಗ್ರಾಮದ ಶ್ರೀ ಕ್ಷೇತ್ರ ಇಟಲ ಮಹತೋಭಾರ ಶ್ರೀ ಸೋಮನಾಥೇಶ್ವರ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆ 8ರ ವೃಷಭ ಲಗ್ನ ಸುಮುಹೂರ್ತದಲ್ಲಿ ಸೋಮನಾಥೇಶ್ವರ, ಶ್ರೀ ಮಹಿಷ ಮರ್ಧಿನಿ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಅಪರಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ, 2ರಿಂದ ಪಟ್ಲ, ಕಕ್ಕೆಪದವು, ಅಜೇರು ಕಾವ್ಯಶ್ರೀ ಬಳಗದವರಿಂದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ.ರಾತ್ರಿ 7ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಡಾ.ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಉಮಾನಾಥ ಕೋಟ್ಯಾನ್, ವೇ.ಮೂ.ಲ.ನಾ. ಆಸ್ರಣ್ಣ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ. ಅಭಯಚಂದ್ರ, ಶಶಿಧರ ಶೆಟ್ಟಿ ಉದ್ಯಮಿ, ತಹಸೀಲ್ದಾರ ಶ್ರೀಧರ ಮುಂದಲ ಮನಿ, ಎಂ.ಕೆ. ವಿಜಯಕುಮಾರ್ ಕಾರ್ಕಳ, ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ ಶೆಟ್ಟಿ ಬೇಲೊಟ್ಟು ಶ್ರೀಪತಿ ಭಟ್, ಗೋಪಾಲ ಶೆಟ್ಟಿ ನರೆಂಗೊಟ್ಟು ದರೆಗುಡ್ಡೆ ಮೊದಲಾದವರು ಭಾಗವಹಿಸಲಿದ್ದಾರೆ.ರಾತ್ರಿ ಲಾಡಿ ತಂಡದಿಂದ ಕುಣಿತ ಭಜನೆ, ಸಾಲಿಗ್ರಾಮ ಮೇಳದವರಿಂದ ಶಿವ ಪಂಚಾಕ್ಷರಿ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ. ಕ್ಷೇತ್ರದಲ್ಲಿ ಜಾತ್ರೆ ಮೇ 2ರಿಂದ 7 ರವರೆಗೆ ಜರಗಲಿದೆ.ಶಿಖರ ಪ್ರತಿಷ್ಠೆ : ಶ್ರೀ ಕ್ಷೇತ್ರ ಇಟಲದ ದೇಗುಲದಲ್ಲಿ ಬುಧವಾರ ಶಿಖರ ಪ್ರತಿಷ್ಠೆ ಸೋಮನಾಥೇಶ್ವರ ದೇವರ ಜೀವಕುಂಭಾಭಿ ಷೇಕ, ಮಹಿಷ ಮರ್ಧಿನಿ, ಮಹಾ ಗಣಪತಿ ಬಿಂಬ ಪ್ರತಿಷ್ಠೆ ಅಷ್ಟಬಂಧ ಲೇಪನಾದಿ ಧಾರ್ಮಿಕ ವಿಧಿಗಳು ನಡೆದವು.ಕೊನ್ನಾರ ಮಾಗಣೆ ತಂತ್ರಿವರೇಣ್ಯ ಕೆ. ನರಸಿಂಹ ತಂತ್ರಿ, ಶ್ರೀ ರಾಘವೇಂದ್ರ ತಂತ್ರಿ, ಕಳತ್ತೂರು ಉದಯ ತಂತ್ರಿ ಹಾಗೂ ಆರ್ಚಕ ನಾಗರಾಜ್ ಭಟ್ ನೇತೃತ್ವ ವಹಿಸಿದ್ದರು. ಆನುವಂಶಿಕ ಆಡಳಿತ ಮೊಕ್ತಸರ ಪಣಪಿಲ ಅರಮನೆ ಬಿ. ವಿಮಲ್ ಕುಮಾರ್ ಶೆಟ್ಟಿ ಜೀರ್ಣೋದ್ದಾರ ಬ್ರಹ್ಮಕಲಶ ಸಮಿತಿಗಳ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.ಗುರುವಾರ ಬೆಳಗ್ಗೆ 8ಕ್ಕೆ ಧ್ವಜಪ್ರತಿಷ್ಠೆ , ಸಂಕೀರ್ತನೆ, ಅಪರಾಹ್ನ 1ರಿಂದ ದಾಸವಾಣಿ, ಸಂಕೀರ್ತನೆ, ಭಜನೆ, ಭರತನಾಟ್ಯ, ರಾತ್ರಿ ಮಣಿಕೋಟೆಬಾಗಿಲು ನಾಟಕ ‘ಕದಂಬ’ ಪ್ರದರ್ಶನ ಜರಗಿತು.ರಾತ್ರಿ 8ಕ್ಕೆ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಶ್ರೀ ಜೈನಮಠದ ಭಟಾರಕಚಾರುಕೀರ್ತಿ ಸ್ವಾಮೀಜಿ, ಡಿ. ಸುರೇಂದ್ರ ಕುಮಾರ್, ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ, ಬೆಳುವಾಯಿ ಸ.ವ್ಯ. ಸಂಘದ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಸಹಿತ ಗಣ್ಯರು ಭಾಗವಹಿಸಿದ್ದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಎದಮೇರು ಅಧ್ಯಕ್ಷತೆ ವಹಿಸಿದ್ದರು........................ಆಕರ್ಷಣೆಯ ಸನ್ನಿಧಿ ಇಟಲ ಸೋಮನಾಥ ಕ್ಷೇತ್ರ !ಪರಶುರಾಮರ ಶಿಷ್ಯ ಅಂಬರೀಷ ಮುನಿ ಕಾಂತಾವರಕ್ಕೆಂದು ಒಯ್ಯುತ್ತಿದ್ದ ಶಿವಲಿಂಗವನ್ನು ದಣಿವಾರಿಸಿಕೊಳ್ಳಲು ಹಸಿರ ಮಡಿಲ ಧರೆಗುಡ್ಡೆಯ ಈ ಪರಿಸರದಲ್ಲಿ ಇಟ್ಟಲ ಗಿಡದ ಎಲೆಯ ಮೇಲಿಟ್ಟು ವಿರಮಿಸಿ ಮತ್ತೆ ಎತ್ತಲಾಗದೆ ಪ್ರಯತ್ನಿಸಿದ ಆನೆಯೂ ಅಲ್ಲೇ ಕಲ್ಲಾಗುತ್ತದೆ. ಹೀಗೆ ಸೋಮನಾಥ ಇಲ್ಲಿ ನೆಲೆಸುತ್ತಾನೆ. ಗರ್ಭಗೃಹದ ಸುತ್ತಲೂ ಉಕ್ಕುವ ಜಲನಿಧಿ, ಈಶಾನ್ಯ ಮೂಲೆಯಲ್ಲಿರುವ ಗಣಪತಿಗೆ ನಿತ್ಯವೂ ನಿಸರ್ಗದ ಜಲಾಭಿಷೇಕ, ನಾಗ ದೈವ, ಸನ್ನಿಧಿ , ಪಾಂಡವರ ಗುಹೆ, ಒಂದೇ ಅಡಿ ಆಳದ ಜೌಷಧೀಯ ತೀರ್ಥ ಬಾವಿ ಸಂದರ್ಶಿಸುವವರಿಗೆ ಭಾವುಕ, ರೋಚಕ ಅನುಭವ ನೀಡುತ್ತಿದೆ.