ಕರ್ನಾಟಕ ಮಹಿಳಾ ಕೆಪಿಎಲ್‌ ಗೆ ಆಯ್ಕೆಯಾಗಿರುವ ಜೆ. ದೀಕ್ಷಾಗೆ ಸನ್ಮಾನ

| Published : Aug 03 2025, 01:30 AM IST

ಸಾರಾಂಶ

1ನೇ ಬಿಸಿಎ ವಿದ್ಯಾರ್ಥಿನಿ ಜೆ. ದೀಕ್ಷಾ ಅವರನ್ನು ಕಾಲೇಜು, ಬಿಸಿಎ ಹಾಗೂ ಕ್ರೀಡಾ ವಿಭಾಗದಿಂದ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಾರದ ಸಮಾವೇಶದಲ್ಲಿ ಕರ್ನಾಟಕ ಮಹಿಳಾ ಕೆಪಿಎಲ್‌ಗೆ ಮೈಸೂರು ವಾರಿಯರ್ ತಂಡಕ್ಕೆ ಆಯ್ಕೆಯಾಗಿರುವ 1ನೇ ಬಿಸಿಎ ವಿದ್ಯಾರ್ಥಿನಿ ಜೆ. ದೀಕ್ಷಾ ಅವರನ್ನು ಕಾಲೇಜು, ಬಿಸಿಎ ಹಾಗೂ ಕ್ರೀಡಾ ವಿಭಾಗದಿಂದ ಅಭಿನಂದಿಸಲಾಯಿತು. ಹಿರಿಯ ಪ್ರಾಧ್ಯಾಪಕ ಡಾ.ಎಚ್.ಆರ್. ತಿಮ್ಮೇಗೌಡ, ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಎಚ್.ಎನ್. ಭಾಸ್ಕರ್, ಐಕ್ಯೂಎಸಿ ಸಂಯೋಜಕಿ ಡಿ. ಗೀತಾ, ಪ್ರಾಂಶುಪಾಲರಾದ ಡಾ.ಬಿ.ಆರ್. ಜಯಕುಮಾರಿ, ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್ ಎನ್.ಡಿ. ಯೋಗೇಶ್, ಶೈಕ್ಷಣಿಕ ಡೀನ್ ಡಾ. ಎಚ್. ಶ್ರೀಧರ್, ಕ್ರೀಡಾ ವಿಭಾಗದ ಮಧುಸೂದನ್ ಹಾಗೂ ಕ್ರೀಡಾ ವಿಭಾಗದ ಸಹಾಯಕ ಕೆ. ಸೋಮಶೇಖರ್ ಇದ್ದರು.