ಸಾರಾಂಶ
ಪಟ್ಟಣದ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚನ್ನಬಸಪ್ಪ ಚಕ್ಕಿ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಚಂದ್ರಶೇಖರಪ್ಪ ಮರಿಯಾನಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಗುತ್ತಲ: ಪಟ್ಟಣದ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚನ್ನಬಸಪ್ಪ ಚಕ್ಕಿ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಚಂದ್ರಶೇಖರಪ್ಪ ಮರಿಯಾನಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಕಳೆದ ಸೆ.21ರಂದು ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಕೊಟ್ರಪ್ಪ ಚಕ್ಕಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ ಚಂದ್ರಶೇಖರಪ್ಪ ಮರಿಯಾನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸತೀಶ ಚಕ್ರಸಾಲಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಶಿವಾನಂದ ಕೋರಿಶೆಟ್ಟರ, ಶಿವಯೋಗಿ ಹಾಲಗಿ, ಈರಣ್ಣ ವಿಭೂತಿ, ಶಂಭಣ್ಣ ಕುಪ್ಪೇಲೂರ, ಶಂಭುಲಿಂಗಪ್ಪ ಅರಳಿ, ಮಂಗಳಾ ಚನ್ನಬಸಪ್ಪ ಹರಿಹರ, ಗಾಯತ್ರಿ ಸಿದ್ದಲಿಂಗೇಶ ಮರಿಯಾನಿ, ರಾಘವೇಂದ್ರ ಅರ್ಕಸಾಲಿ, ಗಂಗಾಧರ ಭಟ್, ಸಲಹಾ ಸಮಿತಿ ಸದಸ್ಯ ಬಸವರಾಜ ನೀರಲಗಿ, ಮಾಜಿ ನಿರ್ದೇಶಕರಾದ ವಿಶ್ವನಾಥ ಮನ್ನಂಗಿ, ಚಂದ್ರಶೇಖರ ಹರಿಹರ(ಮುಷ್ಠಿ), ಮಾಲತೇಶ ಅಂಗಡಿ, ಶಿವಬಸಪ್ಪ ಅಂಗಡಿ, ಶಿವರಾಜಪ್ಪ ವಿಭೂತಿ, ಸಂಘದ ಕಾರ್ಯದರ್ಶಿ ಪ್ರಭುಕುಮಾರ ಅಂಕಲಕೋಟಿ, ಸಿಬ್ಬಂದಿಗಳಾದ ಚಂದ್ರಶೇಖರ ಹರಿಹರ ಸೇರಿದಂತೆ ಅನೇಕರಿದ್ದರು.