ಜಗಳೂರು ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಂಸದೆ ಡಾ.ಪ್ರಭಾ

| Published : Oct 04 2025, 01:00 AM IST

ಜಗಳೂರು ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಂಸದೆ ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು, ಹರಪನಹಳ್ಳಿ ಕ್ಷೇತ್ರಗಳು ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಯಲ್ಲಿ ಕೈ ಹಿಡಿದು ನಡೆಸಿಕೊಂಡು ಹೋಗುವ ಭರವಸೆಯನ್ನು ಚುನಾವಣೆ ಸಂದರ್ಭ ನೀಡಿದ್ದೆ. ಅದೇ ಪ್ರಕಾರವಾಗಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

- ತಮಲೇಹಳ್ಳಿ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ । ಎತ್ತಿನಗಾಡಿಯಲ್ಲಿ ಬಂದ ಸಂಸದೆ- - -

ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು, ಹರಪನಹಳ್ಳಿ ಕ್ಷೇತ್ರಗಳು ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಯಲ್ಲಿ ಕೈ ಹಿಡಿದು ನಡೆಸಿಕೊಂಡು ಹೋಗುವ ಭರವಸೆಯನ್ನು ಚುನಾವಣೆ ಸಂದರ್ಭ ನೀಡಿದ್ದೆ. ಅದೇ ಪ್ರಕಾರವಾಗಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕೆರೆಯಲ್ಲಿ ಗಂಗಾ ಪೂಜೆ-ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತರಳಬಾಳು ಶ್ರೀಗಳು 2018ರಲ್ಲಿ ತರಳಬಾಳು ಹುಣ್ಣಿಮೆ ವೇಳೆ 57 ಕೆರೆ ತುಂಬಿಸುವ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಇದ್ದರು. ₹660 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಘೋಷಿಸಿತ್ತು. ಈಗ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಈಗಲೂ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಸಚಿವರಾಗಿ ಎಸ್ಎಸ್ಎಂ ಇದ್ದಾರೆ. ಜೊತೆಗೆ ಸಂಸದೆಯಾಗಿ ನಾನು ಇದ್ದೇನೆ. ಶಾಸಕ ಬಿ.ದೇವೇಂದ್ರಪ್ಪ ಸಹ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಚುನಾವಣೆ ವೇಳೆ ಸಂಸದರು ಕಪ್ ನಮ್ದೆ ಅಂದು ಹೇಳಿದ್ದರು. ಈಗ ಕಪ್‌ ಗೆದ್ದು ಒಂದು ವರ್ಷವಾಗಿದೆ. ಇನ್ನು 4 ವರ್ಷಗಳು ಬಾಕಿ ಇವೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ತಮಲೇಹಳ್ಳಿ ಕೆರೆ ಇತಿಹಾಸದಲ್ಲೇ ಎಂದೂ ಕೋಡಿ ಬಿದ್ದಿರಲಿಲ್ಲ. ಈಗ ಪೂಜೆ ಮಾಡಿರುವುದು ನಮ್ಮೆಲ್ಲರ ಪುಣ್ಯವಾಗಿದೆ ಎಂದರು.

ಕಣ್ವಕುಪ್ಪೆಯ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿದರು. ಮುಸ್ಟೂರು ಓಂಕಾರೇಶ್ವರ ಮಠದ ನಾಲ್ವಡಿ ಶಾಂತಲಿಂಗ ಮಹಾಸ್ವಾಮೀಜಿ, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್, ಚಿತ್ರದುರ್ಗ ಜಿಲ್ಲೆಯ ಎಚ್ಚುವರಿ ಎಸ್‌ಪಿ ಡಾ. ಆರ್.ದಂಡಿನ ಶಿವಕುಮಾರ್, ಸಂಜಯ ಗಾಂಧಿ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ.ಪ್ರಕಾಶಪ್ಪ, ನಿವೃತ್ತ ಡಿವೈಎಸ್‌ಪಿ ಕಲ್ಲೇಶಪ್ಪ, ನಿವೃತ್ತ ಡಿವೈಎಸ್‌ಪಿ ಲೋಕಾಯುಕ್ತ ಒ.ಟಿ.ಕಲ್ಲೇಶಪ್ಪ, ಕೆ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ ಚೌಡಮ್ಮ ಗ್ರಾಪಂ ಸದಸ್ಯರು, ಷಂಷೀರ್ ಅಹಮದ್, ತೋರಣಗಟ್ಟೆ ತಿಪ್ಪೇಸ್ವಾಮಿ, ನಿವೃತ್ತ ಉಪನ್ಯಾಸಕ ಡಾ.ಸುಭಾಷ್ ಚಂದ್ರಬೋಸ್, ಬಿಸ್ತುವಳ್ಳಿ ಬಾಬು, ಶಿವನಗೌಡ, ನಿವೃತ್ತ ಡಿವೈಎಸ್ಪಿ ರುದ್ರಪ್ಪ, ಸಿದ್ದಲಿಂಗಪ್ಪ, ಹುಚ್ಚವ್ವನಹಳ್ಳಿ ನಾಗರಾಜ್‌ ಇತರರು ಅನೇಕರು ಇದ್ದರು.

- - -

-3ಜೆಎಲ್ಆರ್.ಚಿತ್ರ1: ಕೆರೆಗೆ ಬಾಗಿನ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಉದ್ಘಾಟಿಸಿದರು. -3ಜೆಎಲ್.ಆರ್.ಚಿತ್ರ2: ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದರನ್ನು ಎತ್ತಿನಗಾಡಿಯಲ್ಲಿ ಕರೆತರಲಾಯಿತು.