ಸಾರಾಂಶ
ವ್ಯಕ್ತಿಯ ಮೇಲೆ ಏಕಾಏಕಿ ಮೂರು ಕರಡಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆದಿದೆ. ಬೈರನಾಯಕನಹಳ್ಳಿ ಹನುಮಂತಪ್ಪ (48) ಕರಡಿ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಜಗಳೂರು: ವ್ಯಕ್ತಿಯ ಮೇಲೆ ಏಕಾಏಕಿ ಮೂರು ಕರಡಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆದಿದೆ. ಬೈರನಾಯಕನಹಳ್ಳಿ ಹನುಮಂತಪ್ಪ (48) ಕರಡಿ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೃಷಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ ಸಂದರ್ಭದಲ್ಲಿ ಮೂರು ಕರಡಿಗಳು ಹನುಮಂತಪ್ಪನ ಮೇಲೆ ದಾಳಿ ನಡೆಸಿವೆ. ಎರಡೂ ಕೈಗಳು, ತಲೆ, ಕಾಲು ಮತ್ತು ಬೆನ್ನಿಗೆ ಗಾಯಗಳಾಗಿವೆ. ದಾಳಿ ಹಿನ್ನೆಲೆ ಹನುಮಂತಪ್ಪ ಕಿರುಚಿದಾಗ ಅಕ್ಕಪಕ್ಕದ ಜಮೀನಿನಲ್ಲಿದ್ದ ಗ್ರಾಮದವರು ನೆರವಿಗೆ ಧಾವಿಸಿ, ಕರಡಿಗಳನ್ನು ಓಡಿಸಿದ್ದಾರೆ. ಗಾಯಗೊಂಡ ಹನುಮಂತಪ್ಪನನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಅನಂತರ ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.-ಫೋಟೋ2:ಕರಡಿಗಳಿಂದ ದಾಳಿಗೊಳಗಾದ ಬೈರನಾಯಕನಹಳ್ಳಿ ಗ್ರಾಮದ ಹನುಮಂತಪ್ಪ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.