ಸಾರಾಂಶ
ಎಣಿಕೆ ಕಾರ್ಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿ
ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀಕಂಠೇಶ್ವರಸ್ವಾಮಿಯ ಹುಂಡಿಯಲ್ಲಿ 1 ಕೋಟಿ 84 ಲಕ್ಷ , 47 ಸಾವಿರ ನಗದು, 63 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹಗೊಂಡಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಹೇಳಿದರು.
ದೇವಾಲಯದ ದಾಸೋಹ ಭವನದಲ್ಲಿ ಗುರುವಾರ ದೇವಾಲಯದ ಹುಂಡಿಗಳ ಪರ್ಕಾವಣಿ ಕಾರ್ಯ ನಡೆಯಿತು. ಹುಂಡಿಯಲ್ಲಿ 1 ಕೋಟಿ 84 ಲಕ್ಷ, 47 ಸಾವಿರ ನಗದು, 63 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ, ಅಮೆರಿಕಾ ದೇಶದ 332 ಡಾಲರ್, 25 ಯುರೋ, ಎರಡು ಸಾವಿರ ವಿಯೆಟ್ ನಾರ್ವೆ ಕರೆನ್ಸಿ, 5 ಯಾನ್, 10 ಆಸ್ಟ್ರೇಲಿಯಾ ದೇಶದ ಕರೆನ್ಸಿ, 5 ಸಿಂಗಾಪುರ್ ಡಾಲರ್, 50 ಫಿಲಿಪೈನ್ ಕರೆನ್ಸಿ ಸಂಗ್ರಹಗೊಂಡಿದೆ ಎಂದು ಮಾಹಿತಿ ನೀಡಿದರು.ಎಣಿಕೆ ಕಾರ್ಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿಯಾಗಿದ್ದರು.