ಹಿರೇಕೆರೂರು: ಭಾರತಕ್ಕೆ ತನ್ನದೇ ಸೇವೆ ಸಲ್ಲಿಸಿದ ಮಹಾನ್ ಚೇತನ ಡಾ. ಬಾಬು ಜಗಜೀವನ್ ರಾಮ್. ದೇಶದಲ್ಲಿ ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲಿಸುತ್ತದೆ. ಇಂಥ ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿಗಳ ಒಕ್ಕೂಟಗಳ ವತಿಯಿಂದ ಆಯೋಜಿಸಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ದೇಶದ ಇತಿಹಾಸದಲ್ಲಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಬ್ಬರು ನಾಯಕರು ಸ್ವತಂತ್ರ ಭಾರತದ ನಂತರ ಭಾರತ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಳಿದ ಸಮಾಜಗಳಿಗೆ ಸುದೀಧೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಆಡಳಿತದ ಇತಿಹಾಸದಲ್ಲಿಯೇ ದೇಶದಲ್ಲಿ 30 ವರ್ಷಗಳ ವರೆಗೆ ಒಬ್ಬ ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಹೋಗಬೇಕು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ರೇಣುಕಾ, ಬಿಇಒ ಎನ್. ಶ್ರೀಧರ್, ಮುಖ್ಯಾಧಿಕಾರಿ ಕೂಡಿ ಭೀಮರಾಯ, ಟಿಎಚ್‌ಒ ಡಾ. ಝಡ್.ಆರ್. ಮಕಾನ್ದಾರ್, ಸಿಡಿಪಿಒ ಗೀತಾ ಬಾಳಿಕಾಯಿ, ಹೆಸ್ಕಾಂ ಎಇಇ ನೂರ್‌ಅಹಮದ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರಿಯಣ್ಣ ಮುಡಿಯಮ್ಮನವರ, ಜಿಪಂ ಮಾಜಿ ಸದಸ್ಯ ಬಿ.ಆರ್. ಪುಟ್ಟಣ್ಣನವರ, ದುರಗಪ್ಪ ನೀರಲಗಿ, ಗಣೇಶನಾಯಕ ಜೆ., ಬಾಲಚಂದ್ರ ಬಾಲಣ್ಣನವರ, ವೀರಭದ್ರಗೌಡ ಗೌಡರ, ರುದ್ರಗೌಡ ದೊಡ್ಡ ಮಲ್ಲಪ್ಪನವರ, ರೇಷ್ಮಾ ಬಿ.ಆರ್., ಪ್ರೇಮ ಈಳಿಗೇರ, ಕೆ.ವೈ. ರುದ್ರಾಕ್ಷಿ ಹನುಮಂತಪ್ಪ ಹರಿಜನ, ಶಂಭು ಹಂಸಬಾವಿ, ಗಣೇಶ್ ದೊಡ್ಡಮನಿ ಮಾಲತೇಶ ಬೆಟಗೇರಿ, ಬಸವರಾಜ ಕಟ್ಟಿಮನಿ, ಬೀರಪ್ಪ ಹಾರ‍್ನಳ್ಳಿ ಸೇರಿದಂತೆ ದಲಿತ ಮುಖಂಡರು ಅಧಿಕಾರಿಗಳು ಇದ್ದರು.
ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ ಜಗಜೀವನ ರಾಮ್
ಹಿರೇಕೆರೂರು ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಯು.ಬಿ. ಬಣಕಾರ ಅವರು ಮಾತನಾಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.