ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-೮ರ ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು.
ಬೆಳ್ತಂಗಡಿ: ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-೮ರ ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು.
ಶನಿವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಆಯೋಜಿಸಿದ ಮಾಸಿಕ ಸಭೆ ಮತ್ತು ಆಹಾರೋತ್ಸವ ಉದ್ಘಾಟಿಸಿ ಜೈನ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ: ೨೦೨೭ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ಜರುಗಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಫೆ. ೧೩ ಮತ್ತು ೧೪ ರಂದು ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು.
ಅ.೨೫ರಂದು ವೇಣೂರಿನಲ್ಲಿ ಕರಾವಳಿ ಮಿಲನೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ. ಪ್ರಮೋದ್ ಕುಮಾರ್ ಮಾತನಾಡಿ ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿದರು.
ಭಾರತೀಯ ಜೈನ್‌ಮಿಲನ್ ವಲಯ -೮ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿದರು. ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣರಾದ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು. ಅರ್ಪಣಾ ರವೀಶ್ ವರದಿ ವಾಚಿಸಿದರು.ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ಧನ್ಯವಾದವಿತ್ತರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.