ಸಾರಾಂಶ
ಗ್ರಾಮೀಣ ಜನರು ಉಪಯೋಗಿಸುವ ನೀರು ಶುದ್ಧವಾಗಿದ್ದರೆ ಆರೋಗ್ಯವಂತರಾಗಿ ಬದುಕಬಹುದು ಎಂಬ ಮಹಾದಾಸೆಯನ್ನು ಹೊಂದಿರುವ ಪ್ರಧಾನಿ ನರೆಂದ್ರಮೋದಿ ಅವರು, ಜಲ ಜೀವನ್ ಮೀಷನ್ ಯೋಜನೆಯಲ್ಲಿ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜ ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಗ್ರಾಮೀಣ ಜನರು ಉಪಯೋಗಿಸುವ ನೀರು ಶುದ್ಧವಾಗಿದ್ದರೆ ಆರೋಗ್ಯವಂತರಾಗಿ ಬದುಕಬಹುದು ಎಂಬ ಮಹಾದಾಸೆಯನ್ನು ಹೊಂದಿರುವ ಪ್ರಧಾನಿ ನರೆಂದ್ರಮೋದಿ ಅವರು, ಜಲ ಜೀವನ್ ಮೀಷನ್ ಯೋಜನೆಯಲ್ಲಿ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ ಎಂದು ಶಾಸಕ ಸಿಮೆಂಟ್ ತಿಳಿಸಿದರು.ತಾಲೂಕಿನ ಚನ್ನಾಪುರ ಮತ್ತು ಹಂಚೂರು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಯಡೆಹಳ್ಳಿ ನಂಜಾಪುರ ಗ್ರಾಮದಲ್ಲಿ ೨೯೦, ಕುಂದೂರು ಹೋಬಳಿ ಚನ್ನಾಪುರ ೨೮೦, ಹಂಚೂರು ೨೦೭ ಮನೆಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಶುದ್ಧ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು.
ರಾಜ್ಯದಲ್ಲಿ ಬರದ ಛಾಯೆ ಆರಂಭವಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದೆ. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿರುವುದರಿಂದ ಕೆಲ ಕೊಳವೆ ಬಾವಿಗಳಲ್ಲಿ ಜಲ ಬತ್ತಿಹೋಗುತ್ತಿದೆ. ಇಂತಹ ಪರಿಸ್ಥಿತಿಗಳನ್ನು ಗ್ರಾಪಂ ಮಟ್ಟದಲ್ಲಿ ಪಿಡಿಒ ಗಮನ ಹರಿಸಿ, ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಗಳಿಗೆ ಸೂಚಿಸಿದರು. ಹಂಚೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಪಶು ಆಸ್ಪತ್ರೆಯಿದ್ದರೂ ವೈದ್ಯರು ಇಲ್ಲದೆ ಜಾನುವಾರುಗಳ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲಾಗುತ್ತಿಲ್ಲವೆಂದು ಗ್ರಾಮಸ್ಥರು ದೂರಿದರು. ಮನವಿ ಸ್ಪಂದಿಸಿದ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ವಾರಕ್ಕೆ ಒಂದು ದಿನವಾದರೂ ಆಸ್ಪತ್ರೆಗೆ ವೈದ್ಯರು ಹಾಜರಾಗಿ ಸ್ಪಂದಿಸುವಂತೆ ಸೂಚಿಸಿದರು. ಈ ವೇಳೇ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಕಾರಗೋಡು ಗ್ರಾಪಂ ಅಧ್ಯಕ್ಷ ಮಂಜೇಗೌಡ, ಪಿಡಿಒ ಸಣ್ಣಪ್ಪ, ಮಗ್ಗೆ ಪಿಡಿಒ ಪರಮೇಶ್, ಕಟ್ಟೆಗದ್ದೆ ನಾಗರಾಜು, ಲೋಹಿತ್ ಕುಮಾರ್, ಕುಂದೂರು ಪಂಚಾಯಿತಿ ಪಿಡಿಒ ರಮ್ಯ ಅಧ್ಯಕ್ಷೆ ಶೈಲಜಾ, ಮಾಜಿ ಅಧ್ಯಕ್ಷ ವಿಕಾಸ್, ಸದಸ್ಯ ರವೀಂದ್ರ, ಹಂಚೂರು ಪಂಚಾಯಿತಿ ಪಿಡಿಒ ಸವಿತ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮಂಜೇಗೌಡ, ಕರುಣ, ಶರಣ್, ಚಂದ್ರಶೇಖರ್, ಷಣ್ಮುಖಪ್ಪ, ಅಜಿತ್ ಚಿಕ್ಕಕಣಗಾಲು, ಲೊಕೇಶ್ ಕಣಗಾಲ್, ಹನುಮಂತೇಗೌಡ ಉಪಸ್ಥಿತರಿದ್ದರು.