ನನ್ನ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಸಮಸ್ಯೆ ಮುಕ್ತ ಮಾಡಲೆಂದು ಪ್ರಾರಂಭಿಸಿದ್ದ ಮನೆ ಬಾಗಿಲಿಗೆ ಮನೆ ಮಗ ಜನಸ್ಪಂದನ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಶಾಸಕ ಸುರೇಶ್ ಬಾಬು ಸಿ ಬಿ ತಿಳಿಸಿದರು.
ಕನ್ನಡಪ್ರಭ ವಾರ್ತ ಹುಳಿಯಾರು
ನನ್ನ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಸಮಸ್ಯೆ ಮುಕ್ತ ಮಾಡಲೆಂದು ಪ್ರಾರಂಭಿಸಿದ್ದ ಮನೆ ಬಾಗಿಲಿಗೆ ಮನೆ ಮಗ ಜನಸ್ಪಂದನ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಶಾಸಕ ಸುರೇಶ್ ಬಾಬು ಸಿ ಬಿ ತಿಳಿಸಿದರು.ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಪಾಳ್ಯದಲ್ಲಿ ಶುಕ್ರವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಚಿಕ್ಕನಾಯಕನಹಳ್ಳಿಯ ತೀ.ನಂ.ಶ್ರೀ ಭವನದಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮಕ್ಕೆ ಕೆಲ ನಾಗರಿಕರು ಬರಲು ಆಗದೆ ಆದ್ದರಿಂದ ಅಧಿಕಾರಿಗಳ ಜೊತೆ ಮಾತನಾಡಿ ನಾವೆಲ್ಲರು ಮನೆ ಬಾಗಿಲಿಗೆ ಹೋಗೊಣ ಎಂದು ತೀರ್ಮಾನಿಸಿ ಹಳ್ಳಿಗಳಿಗೆ ಬಂದಿದ್ದೇವೆ. ಈ ಕಾರ್ಯಕ್ರಮದಲ್ಲಿ ಯಾವುದೇ ಲಂಚ, ಮದ್ಯವರ್ತಿಗಳ ಆವಳಿ ಇಲ್ಲದೆ ನಿಮ್ಮ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಿ ಎಂದರು.ಚಿಕ್ಕನಾಯಕನಹಳ್ಳಿ ಅಲ್ಲದೆ ಕ್ಷೇತ್ರ ವ್ಯಾಪ್ತಿಗೆ ಒಳ ಪಡುವ ಶಿರಾ ತಾಲೂಕಿನಲ್ಲೂ ಕೂಡ 50 ವಾರಗಳ ಜನಸ್ಪಂದನ ಕಾರ್ಯಕ್ರಮವಾಗಿದೆ. ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದಲೇ ಯಶಸ್ವಿಯಾಗಿದೆ.ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಮ್ಮ ಕ್ಷೇತ್ರದಲ್ಲಿ ಯಾವುದೇ ಇಲಾಖೆಯ ಸಮಸ್ಯೆ ಇರಲಿ ಅದನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದರು.ನೇರವಾಗಿ ನೀವುಗಳು ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪ್ರಮಯವೇ ಬರುವುದಿಲ್ಲ. ಈ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಪ್ರತಿ ಶುಕ್ರವಾರ ತಾಲೂಕಿನ ಯಾವುದಾದರೂ ಪಂಚಾಯಿತಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲು ಬದ್ಧನಾಗಿದ್ದೇನೆ ಎಂದರು.ಪಶು ಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜು ಮಾತನಾಡಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಪ್ರಗತಿ ಹಾದಿಯಲ್ಲಿ ಕೊಂಡೊಯ್ಯಬೇಕು ಎಂದು ದೃಢಸಂಕಲ್ಪ ಮಾಡಿರುವ ಶಾಸಕರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಅದರಲ್ಲಿ ಶೈಕ್ಷಣಿಕವಾಗಿ ಸಿಇಟಿ ಕೋಚಿಂಗ್ ನೀಡುವುದರ ಮೂಲಕ ಈ ತಾಲೂಕಿನ ಮಕ್ಕಳು ಓದಿ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂಬ ಆಶಾಭಾವನೆಯನ್ನು ಶಾಸಕರು ಇಟ್ಟುಕೊಂಡಿದ್ದಾರೆ. ಈ ಜನಸ್ಪಂದನ ಕಾರ್ಯಕ್ರಮವನ್ನು ಸ್ವದುಪಯೋಗಪಡಿಸಿಕೊಳ್ಳಿ ಎಂದರು. ಕೊರಗೆರೆ ಪಂಚಾಯಿತಿಯ ಮರಾಠಿ ಪಾಳ್ಯ ಭಟ್ಟರಹಳ್ಳಿ ಮೋಟಿ ಹಳ್ಳಿ ಡೆಂಕನಹಳ್ಳಿ ಸಾಲಪುರ ಉಪ್ಪಾರಹಳ್ಳಿ ಕೋರಗೆರೆ ಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯುತ್ ರಸ್ತೆ ನಿವೇಶನ ಗೃಹ ನಿರ್ಮಾಣ ಸೇರಿದಂತೆ ಅನೇಕ ಅರ್ಜಿಗಳನ್ನು ಶಾಸಕರು ಸ್ವೀಕರಿಸಿದರು.