ನಿಖಿಲ್ ಕುಮಾರ ಸ್ವಾಮಿ ನೇತೃತ್ವ: ಮಾಜಿ ಶಾಸಕ ವೈ ಎಸ್.ವಿ. ದತ್ತ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಜೆಡಿಎಸ್ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾಲ್ಗೊಳ್ಳಲಿರುವ ಜನರೊಂದಿಗೆ ಜೆಡಿಎಸ್ ಸಮಾವೇಶ ಭಾನುವಾರ ನಡೆಯಲಿದೆ ಎಂದು ಮಾಜಿ ಶಾಸಕ ವೈ ಎಸ್.ವಿ. ದತ್ತ ತಿಳಿಸಿದರು. ಶನಿವಾರ ಜೆಡಿಎಸ್ ನ ಜನರೊಂದಿಗೆ ಜನತಾದಳ ಸಮಾವೇಶ ಮುನ್ನಾ ದಿನದ ಸಿದ್ಧತೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ ಸಂಘಟನೆ ಹಿನ್ನಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಸುತ್ತುತ್ತಿದ್ದು ಇದೀಗ ಕಡೂರು ಪಟ್ಟಣದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈವರೆಗೆ ರಾಜ್ಯಾದ್ಯಂತ ಸುಮಾರು 63 ಜೆಡಿಎಸ್ ಸಮಾವೇಶಗಳ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಅದೇ ರೀತಿ ಕಡೂರಿನ ಈ ಸಮಾವೇಶದ ಮೂಲಕ ರಾಜ್ಯಕ್ಕೆ ಹೊಸ ಸಂದೇಶ ರವಾನೆ ಆಗಲಿದೆ ಎಂದರು.ಸಮಾವೇಶದಲ್ಲಿ ಸುಮಾರು 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, 150 ಜನರು ಕೂರುವ ದೊಡ್ಡ ವೇದಿಕೆ ಹಾಕಲಾಗಿದೆ. ಬೆಳಿಗ್ಗೆ 11.30 ಕ್ಕೆ ಸಾವಿರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುವ ಜೊತೆ ಪಟ್ಟಣದ ಮರವಂಜಿ ವೃತ್ತದಿಂದ ಕಾರ್ಯಕ್ರಮ ನಡೆಯುವ ಎಪಿಎಂಸಿ ಪ್ರಾಂಗಣದ ಕಾರ್ಯಕ್ರಮ ನಡೆವ ವೇದಿಕೆವರೆಗೆ ರೋಡ್ ಶೋ ನಡೆಯಲಿದೆ. ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಪಾಲ್ಗೊಂಡು ಮಾತನಾಡಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಬರುವ ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಇರಲಿದೆ. ಕಡೂರು ಕ್ಷೇತ್ರದಲ್ಲಿ ತಾವು ಕಳೆದ 20 ವರ್ಷಗಳಿಂದ ಸಕ್ರಿಯ ರಾಜಕಾರಣ ಮಾಡುತ್ತಾ ಬಂದಿದ್ದು, ಅಂದಿನ ಬದಲಾದ ರಾಜಕಾರಣದಲ್ಲಿ ತಮಗೆ ಜನತೆ ತೋರಿದ ಪ್ರೀತಿ ರಾಜಕಾರಣಕ್ಕೆ ಒಂದು ಭಾರಿ ನನ್ನನ್ನು ಶಾಸಕರಾಗಿ ಕಾರ್ಯಕರ್ತರು ಆಯ್ಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷದ ಗಟ್ಟಿ ಕಾಳುಗಳಾಗಿರುವ ಜೆಡಿಎಸ್ ಕಾರ್ಯಕರ್ತರಿಂದಲೇ ಪಕ್ಷ ಸಂಘಟನೆಯಲ್ಲಿ ಮಂಚೂಣಿಯಲ್ಲಿದೆ ಎಂದರು.
ಜೆಡಿಎಸ್ ಪಕ್ಷ ಸಂಘಟಿಸುವ ಹಿನ್ನೆಲೆಯಲ್ಲಿ ನಾವು ಸೇರಿದಂತೆ ಯುವ ಮುಖಂಡ ಚೇತನ್ ಕೆಂಪರಾಜು ನೇತೃತ್ವದಲ್ಲಿ ಬರಲಿ ರುವ ಎಲ್ಲ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಜೆಡಿಎಸ್ ಪಕ್ಷ ಸಜ್ಜಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದತ್ತ ಮನವಿ ಮಾಡಿದರು.
ಯುವ ಮುಖಂಡ ಚೇತನ್ ಕೆಂಪರಾಜ್, ಮುಖಂಡರಾದ ಕೆ.ಎಂ.ಮಹೇಶ್ವರಪ್ಪ, ಬಿದರೆ ಜಗದೀಶ್, ಪ್ರೇಂ ಕುಮಾರ್, ಬಿ.ಪಿ.ನಾಗರಾಜ್, ಬಿ.ಟಿ ಗಂಗಾಧರನಾಯ್ಕ, ಡಿ.ಪ್ರಶಾಂತ್, ಪಾಪಣ್ಣ, ಮಹೇಂದ್ರ, ಸೇರಿದಂತೆ ಮತ್ತಿತರರು ಇದ್ದರು.-- ಬಾಕ್ಸ್ ಸುದ್ದಿಗೆ---
ರಾಜ್ಯದ ಜನರ ಕಲ್ಯಾಣ ಬಯಸುವ ಕಾರಣದಿಂದಲೇ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜನರ ಮನಸಲ್ಲಿ ಉಳಿದಿದೆ, ಪ್ರಾದೇಶಿಕ ಪಕ್ಷ ಕಟ್ಟಿದ್ದ ದೇವರಾಜ್ ಅರಸು, ಯಡಿಯೂರಪ್ಪ, ಬಂಗಾರಪ್ಪ, ಸಿದ್ದರಾಮಯ್ಯ, ರಾಮು ಮತ್ತಿತರರು ಪಕ್ಷ ಸಂಘಟನೆಯಲ್ಲಿ ಯಶಸ್ವಿ ಆಗಲಿಲ್ಲ. ಜೆಡಿಎಸ್ ಉಳಿದಿರುವ ಏಕೈಕ ಪಕ್ಷ.---- ವೈ.ಎಸ್.ವಿ.ದತ್ತ.
18ಕೆಕೆಡಿಯು2.ಮಾಜಿ ಶಾಸಕ ವೈ.ಎಸ್.ವಿ.ದತ್ತರವರು ಜೆಡಿಎಸ್ ಸಮಾವೇಶ ನಡೆಯಲಿರುವ ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ಸಿದ್ದತೆ ಪರಿಶೀಲಿಸಿದರು. ಯುವ ಮುಖಂಡ ಚೇತನ್ ಕೆಂಪರಾಜು ಮತ್ತಿತರರು ಇದ್ದರು.