ಸಾರಾಂಶ
ಶಿವಮೊಗ್ಗದಲ್ಲಿ ಸಂಗೀತ್ ಸಮಪರ್ಣ್ ಟ್ರಸ್ಟ್ ವತಿಯಿಂದ ಜ.6ರಂದು ಸುಗಮ ಸಂಗೀತ ಮತ್ತು ದಾಸರ ಪದಗಳ ಕಲಿಕಾ ಶಿಬಿರ ನಡೆಯಲಿದೆ. ಸಾಗರ ರಸ್ತೆಯ ಡಾ. ಪಂಡಿತ್ ಪುಟ್ಟರಾಜಕವಿ ಗವಾಯಿ ಅವರ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹಿನ್ನಲೆ ಗಾಯಕಿ ಸುರೇಖಾ ಹೆಗ್ಡೆ ಹೇಳಿದ್ದಾರೆ.
ಶಿವಮೊಗ್ಗ: ಸಂಗೀತ್ ಸಮಪರ್ಣ್ ಟ್ರಸ್ಟ್ ವತಿಯಿಂದ ಜ.6ರಂದು ಸುಗಮ ಸಂಗೀತ ಮತ್ತು ದಾಸರ ಪದಗಳ ಕಲಿಕಾ ಶಿಬಿರ ನಡೆಯಲಿದೆ ಎಂದ ಹಿನ್ನಲೆ ಗಾಯಕಿ ಸುರೇಖಾ ಹೆಗ್ಡೆ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಗರದ ಸಾಗರ ರಸ್ತೆಯ ಡಾ. ಪಂಡಿತ್ ಪುಟ್ಟರಾಜಕವಿ ಗವಾಯಿ ಅವರ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಈ ಶಿಬಿರ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಶಿಬಿರ ಆರಂಭವಾಗಲಿದೆ. ಸಂಜೆ 6 ಗಂಟೆವರೆಗೆ ಶಿಬಿರ ನಡೆಯಲಿದ್ದು, ₹200 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ವಿಶ್ವಾದ್ಯಂತ ದಾಸಸಾಹಿತ್ಯದ ಕಂಪನ್ನು ಪಸರಿಸುತ್ತಿರುವ ಗಾಯಕ, ಸಂಗೀತ ಸಂಯೋಜಕ ಪುತ್ತೂರು ನರಸಿಂಹ ನಾಯಕ್ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವವರು ಹೆಸರು ನೋಂದಣಿಗೆ ಮೊ.99803- 15679, 94816- 62308 ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೋ.ವ.ಮೋಹನಕೃಷ್ಣ ಇದ್ದರು.- - - (-ಫೋಟೋ: ಪುತ್ತೂರು ನರಸಿಂಹ ನಾಯಕ್)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))