ಸಾರಾಂಶ
ಭಾರತೀಯ ಮಜ್ದೂರ್ ಸಂಘ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದಿಂದ ಬಸವಕಲ್ಯಾಣದಿಂದ ಬೆಂಗಳೂರಿಗೆ ಬೃಹತ್ ಜಾಥಾಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಭಾರತೀಯ ಮಜ್ದೂರ್ ಸಂಘ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದಿಂದ ಬಸವಕಲ್ಯಾಣದಿಂದ ಬೆಂಗಳೂರಿಗೆ ಬೃಹತ್ ಜಾಥಾ ಹಮ್ಮಿಕೊಂಡಿದೆ.ಈ ಜಾಥಾವು ಬಸವಕಲ್ಯಾಣದಿಂದ ಆ.18ರಂದು ಹೊರಟು ಸೆ.4ರಂದು ಬೆಂಗಳೂರಿಗೆ ತಲುಪಿ ಅಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ರಾಜ್ಯಾದ್ಯಂತ ಜಾಥಾ ಮೂಲಕ ಸಾರಿಗೆ ಕಾರ್ಮಿಕರ ಹಿಂಬಾಕಿ ಹಣ ನೀಡುವಂತೆ ನಮ್ಮ ದುಡಿಮೆ ನಮ್ಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ 38 ತಿಂಗಳ ಹಿಂಬಾಕಿ ಹಾಗೂ ಜನವರಿ 2024ರಿಂದ ವೇತನ ಪರಿಷ್ಕರಣೆಗೋಸ್ಕರ ಕಲ್ಯಾಣ ನಾಡಿನ ಬಸವಕಲ್ಯಾಣ ಬಸವ ಭೂಮಿ ಪರುಷ ಕಟ್ಟೆಯಿಂದ ಜಾಥಾಗೆ ಚಾಲನೆ ನೀಡಲಾಯಿತು.
ಜಾಥಾಗೆ ಚಾಲನೆ ನೀಡಿದ ಹಿರಿಯ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಮಾತನಾಡಿದರು. ಸಂಘದ ಪರವಾಗಿ ಮತ್ತು ರಾಜ್ಯದ ಎಲ್ಲಾ ಕಾರ್ಮಿಕರ ಪರವಾಗಿ ಅನಂತ ಧನ್ಯವಾದಗಳು ಸಲ್ಲಿಸುತ್ತೇವೆ ಎಂದು ಭಾರತೀಯ ಮಜ್ದೂರ್ ಸಂಘ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರೆಪ್ನೂರ್ ಹಜನಾಳ ತಿಳಿಸಿದರು.ಜಾಥಾದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹದೇವಯ್ಯ ಹಾಗೂ ಹಿರಿಯರಾದ ಸೋಮಶೇಖರ್ ಸಜ್ಜನ್ ಮತ್ತು ಬಬ್ಲೆಶ್ವರ್ ಬಿಜಾಪುರ್ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್ ಚೋರ ಹಾಗೂ ಇನ್ನು ಹಿರಿಯರು ಇದ್ದರು.
ಸಂಘದ ಬೀದರ್ ಜಿಲ್ಲಾ ಜಿಲ್ಲಾಧ್ಯಕ್ಷ ಜಾನ್ಸನ್, ಕಾರ್ಯದರ್ಶಿ ಗುಂಡಪ್ಪ ವಲ್ಲೂರು, ಮಲ್ಲಿಕಾರ್ಜುನ ಪಾಟೀಲ್, ಸಾಧಕ ಯೆನಗುಂದಾ, ಮಹಾದೇವ್ ಇಸ್ಲಾಂಪೂರ, ಸಂಜು ಹಾಗೂ ಹಿರಿಯ ಕಾರ್ಯಕರ್ತರಾದ ಕವಿರಾಜ್ ಮೂಳೆ, ಧನಶೆಟ್ಟಿ ಮನ್ನಾಳೆ, ಗಣಪತಿ ಸಕ್ರಪ್ಪನೋರ್ ಮತ್ತಿತರರು ಇದ್ದರು.