ಸಾರಾಂಶ
ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತವಾಗಿವೆ.
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತವಾಗಿವೆ. ಅಲ್ಲದೇ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಪ್ರಸ್ತುತ ಸಮಾಜ ಕಲ್ಮಶಗೊಂಡಿದ್ದು, ನಾನಾ ಸಮಸ್ಯೆಗಳಿಂದ ಬಳಲುತ್ತಿದೆ. ಶಾಂತಿ, ನೆಮ್ಮದಿ ಕಂಡುಕೊಳ್ಳಲು ಅಧ್ಯಾತ್ಮಿಕದ ಮೊರೆ ಹೋಗುವುದು ಅಗತ್ಯ. ಸಮಾಜದಲ್ಲಿ ಅನೈತಿಕತೆ ಹೆಚ್ಚಾಗುತ್ತಿರುವುದಕ್ಕೆ ಜನರು ಧಾರ್ಮಿಕ ನೆಲೆಗಟ್ಟು ಕಳೆದುಕೊಂಡಿರುವುದು ಕಾರಣವಾಗಿದೆ. ಇಂದು ಧಾರ್ಮಿಕತೆಗೆ ಒತ್ತು ನೀಡಬೇಕಾಗಿದೆ. ಅದು ಪರಸ್ಪರರಲ್ಲಿ ಉಂಟಾಗುವ ಅಪನಂಬಿಕೆ, ದ್ವೇಷ, ಅಸೂಯೆಯನ್ನು ತಡೆಯುತ್ತದೆ. ಪ್ರತಿಯೊಬ್ಬರು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪ್ರಸ್ತುತ ದಿನಮಾನಗಳಲ್ಲಿ ಅಕ ಹಣ ಸಂಪತ್ತು ಗಳಿಸಬೇಕೆಂಬ ಹಂಬಲದಿಂದ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿರುವುದು ಕಾಣಬಹುದು. ಜಾತ್ರೆ ಉತ್ಸವಗಳು ಸಂಸ್ಕೃತಿಯ ಜೀವಾಳ. ಜನರ ಭಾವನೆ ಅಭಿವ್ಯಕ್ತಗೊಳಿಸಲು ಇವು ಸಹಾಯಕವಾಗುತ್ತವೆ. ಭಾವೈಕ್ಯತೆ ಸಾರಲು ಜಾತ್ರೆ ನೆರವಾಗುತ್ತದೆ. ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಯಾವುದು ಅಸಾಧ್ಯವಲ್ಲ ಎಂದು ಹಿರೇಕೆರೂರ ಯುವಕರು ನಿರೂಪಿದ್ದಾರೆ. ಧರ್ಮ ಮಾರ್ಗದಲ್ಲಿ ನಡೆದರೆ ಮಾನವನಿಗೆ ಯಾವ ಭಯವೂ ಇಲ್ಲ. ಉತ್ತಮವಾಗಿ ಜೀವಿಸಲು ಧರ್ಮ ನೆರವಾಗುತ್ತದೆ. ಪ್ರಾಮಾಣಿಕತೆ ಹಾಗೂ ಶ್ರದ್ಧೆ ಬೆಳೆಸಿಕೊಂಡರೆ ಯಾವುದೇ ಕೆಲಸ ಮಾಡಲು ಹಿನ್ನಡೆ ಉಂಟಾಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಆನಂದ ಗಡ್ಡದೇವರಮಠ ಮಾತನಾಡಿದರು.
ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಜಾತ್ರಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಕ್ಷೇತ್ರ ಶಿಕ್ಷಣಾಕಾರಿ ಎನ್. ಶ್ರೀಧರ, ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ, ಎಸ್.ಬಿ. ತಿಪ್ಪಣ್ಣನವರ, ಜಯಣ್ಣ ಬಂಗೇರ, ಎಸ್.ಆರ್. ಪಾಟೀಲ, ಸಂತೋಷಕುಮಾರ ಕೆಂಚಣ್ಣನವರ, ಹನುಮಂತಗೌಡ ಭರಮಗೌಡ್ರ, ಜಾತ್ರಾ ವ್ಯವಸ್ಥಾಪಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕರ್, ಸುರೇಶ ಮಡಿವಾಳರ, ಪರಮೇಶಪ್ಪ ಕರೇಗಾರ, ಮಾಲತೇಶ ಬೆತಕೇರೂರ, ಪಪಂ ಸದಸ್ಯರಾದ ರಜಿಯಾ ಅಸದಿ, ಸುಧಾ ಚಿಂದಿ, ಕವಿತಾ ಹರ್ನಳ್ಳಿ, ವಿಜಯಶ್ರೀ ಬಂಗೇರ, ದುರಗಪ್ಪ ನೀರಲಗಿ ಹಾಗೂ ಜಾತ್ರಾ ವ್ಯವಸ್ಥಾಪಕ ಸಮಿತಿಯ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.