ಸಾರಾಂಶ
ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಶ್ರೀ ಮುದ್ವೀರೇಶ್ವರ ಸ್ವಾಮೀಯ 19ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಮುದ್ವೀರೇಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಹೂವಿನ ಅಲಂಕಾರದೊಂದಿಗೆ ಹೋಮ, ಹವನಗಳನ್ನು ನಡೆಸಲಾಯಿತು, ನಂತರ ಮಹಾ ಮಂಗಳಾರತಿ ನಡೆಯಿತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮುದ್ವೀರೇಶ್ವರ ಸ್ವಾಮಿಯನ್ನು ಕೂರಿಸಿ ಗೊಲ್ಲರಹಟ್ಟಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಪಲ್ಲಕ್ಕಿಗೆ ಚಾಲನೆ ನೀಡಿದರು. ಭಕ್ತಾದಿಗಳು ಪಟಾಕಿ, ಬಾಣ ಬಿರಸು ಹಾಗೂ ಜಾನಪದ ಕಲಾ ತಂಡಗಳು ಮತ್ತು ನೃತ್ಯದೊಂದಿಗೆ ರಥೋತ್ಸವವನ್ನು ವಿಜೃಂಭಣೆಯಿಂದ ಬೆಟ್ಟದ ಬುಡದಲ್ಲಿರುವ ಎತ್ತುವ ಬಸವಣ್ಣದೇವರ ಗುಡಿಯವರೆಗೆ ಮುತ್ತಿನ ಪಲ್ಲಕ್ಕಿ ಸಾಗಿಸಿದರು. ದಾರಿಯುದ್ದಕ್ಕೂ ಭಕ್ತರು ಜಯಘೋಷ ಹಾಕುತ್ತಾ ದೇವರಿಗೆ ಹರಕೆಯನ್ನು ಅರ್ಪಿಸುತ್ತಿದ್ದರು.
ದಾಬಸ್‌ಪೇಟೆ: ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಶ್ರೀ ಮುದ್ವೀರೇಶ್ವರ ಸ್ವಾಮೀಯ 19ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಮುದ್ವೀರೇಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಹೂವಿನ ಅಲಂಕಾರದೊಂದಿಗೆ ಹೋಮ, ಹವನಗಳನ್ನು ನಡೆಸಲಾಯಿತು, ನಂತರ ಮಹಾ ಮಂಗಳಾರತಿ ನಡೆಯಿತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮುದ್ವೀರೇಶ್ವರ ಸ್ವಾಮಿಯನ್ನು ಕೂರಿಸಿ ಗೊಲ್ಲರಹಟ್ಟಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಪಲ್ಲಕ್ಕಿಗೆ ಚಾಲನೆ ನೀಡಿದರು. ಭಕ್ತಾದಿಗಳು ಪಟಾಕಿ, ಬಾಣ ಬಿರಸು ಹಾಗೂ ಜಾನಪದ ಕಲಾ ತಂಡಗಳು ಮತ್ತು ನೃತ್ಯದೊಂದಿಗೆ ರಥೋತ್ಸವವನ್ನು ವಿಜೃಂಭಣೆಯಿಂದ ಬೆಟ್ಟದ ಬುಡದಲ್ಲಿರುವ ಎತ್ತುವ ಬಸವಣ್ಣದೇವರ ಗುಡಿಯವರೆಗೆ ಮುತ್ತಿನ ಪಲ್ಲಕ್ಕಿ ಸಾಗಿಸಿದರು. ದಾರಿಯುದ್ದಕ್ಕೂ ಭಕ್ತರು ಜಯಘೋಷ ಹಾಕುತ್ತಾ ದೇವರಿಗೆ ಹರಕೆಯನ್ನು ಅರ್ಪಿಸುತ್ತಿದ್ದರು.
-