ಸಾರಾಂಶ
ಸಹಸ್ತ್ರ ಸಂವತ್ಸರಗಳ ಹಿಂದೆ ಕಪಿಲ ನದಿ ತೀರದ ಶ್ರೀ ಸುತ್ತೂರು ಕ್ಷೇತ್ರದಲ್ಲಿ ತಮ್ಮ ತಪಸ್ಸಿನಿಂದ ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠವನ್ನು ಸ್ಥಾಪಿಸಿದರು.
ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ
ಜ. 26 ರಿಂದ 31ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಆಹ್ವಾನ ನೀಡಲು ಸುತ್ತೂರು ಮಠದಿಂದ ಗ್ರಾಮಕ್ಕೆ ಆಗಮಿಸಿದ ಜಾತ್ರಾ ಪ್ರಚಾರ ರಥಕ್ಕೆ ವೀರಶೈವ ಲಿಂಗಾಯಿತ ನಂಜನಗೂಡು ತಾಲೂಕು ಅಧ್ಯಕ್ಷ ಎಸ್.ಎನ್. ಕೆಂಪಣ್ಣ ಸ್ವಾಗತಿಸಿದರು.ನಂತರ ಮಾತನಾಡಿದ ಅವರು, ಸಹಸ್ತ್ರ ಸಂವತ್ಸರಗಳ ಹಿಂದೆ ಕಪಿಲ ನದಿ ತೀರದ ಶ್ರೀ ಸುತ್ತೂರು ಕ್ಷೇತ್ರದಲ್ಲಿ ತಮ್ಮ ತಪಸ್ಸಿನಿಂದ ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠವನ್ನು ಸ್ಥಾಪಿಸಿದರು. ಆದರೆ ಅದು ಈಗ ಕೋಟ್ಯಾಂತರ ಭಕ್ತರ ಮೆಚ್ಚುಗೆ ಪಡೆದಿದೆ.
ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನಾವೆಲ್ಲರೂ ಹೋಗಿ ದೇವರ ಕೃಪೆಗೆ ಪಾತ್ರರಾಗಿ ಶ್ರೀಗಳ ಸಾನಿಧ್ಯ ವಹಿಸುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ದರ್ಶನ ಪಡೆಯೋಣ ಎಂದು ಹೇಳಿದರು.ತಾಲೂಕು ಯುವ ಘಟಕದ ಅಧ್ಯಕ್ಷ ಮಲ್ಕುಡಿ ಮಹದೇವಸ್ವಾಮಿ. ಎಪಿಎಂಸಿ ಮಾಜಿ ಅಧ್ಯಕ್ಷ ಮಾದಪ್ಪ. ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಂಜು, ಗ್ರಾಪಂ ಅಧ್ಯಕ್ಷ ಶಿವನಾಗಪ್ಪ, ಮಾಜಿ ಅಧ್ಯಕ್ಷ ಮಹೇಶ್, ಅಣ್ಣ ಬಸವಣ್ಣ, ಸದಸ್ಯ ಮಲ್ಲಿಕಾರ್ಜುನ, ಮುಖಂಡರಾದ ಕೆಂಡಗಣಪ್ಪ, ಮಂಜು, ಅಶೋಕ್, ಮೋಹನ್, ಕುಮಾರ, ಸುಬ್ಬಣ್ಣ, ಮಹದೇವಸ್ವಾಮಿ, ಹುಚ್ಚಯ್ಯ ಇದ್ದರು.