ಕಮಲಹಾಸನ್ ಸಿನಿಮಾ ಪ್ರದರ್ಶನ ನಿಷೇಧಿಸಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ

| Published : Jun 03 2025, 12:25 AM IST

ಕಮಲಹಾಸನ್ ಸಿನಿಮಾ ಪ್ರದರ್ಶನ ನಿಷೇಧಿಸಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಚಾರದ ಗೀಳಿಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಕಮಲ್ ಹಾಸನ್ ಅವರ ಚಲನಚಿತ್ರಗಳನ್ನು ನಿಷೇಧಿಸುವುದಷ್ಟೇ ಅಲ್ಲ, ರಾಜ್ಯಕ್ಕೆ ಬರುವುದಕ್ಕೂ ಅವಕಾಶ ನೀಡಬಾರದು ಎಂದು ಹೋರಾಟಗಾರರು ಆಗ್ರಹಿಸಿದರು.

ಬ್ಯಾಡಗಿ: ಕನ್ನಡ ಭಾಷೆಯ ಹುಟ್ಟಿನ ಕುರಿತು ನಟ ಕಮಲಹಾಸನ್ ನೀಡಿರುವ ಅಸಂಬದ್ಧ ಹೇಳಿಕೆ ಖಂಡಿಸಿ ಮುಂಬರುವ ದಿನಗಳಲ್ಲಿ ಅವರ ಎಲ್ಲ ಚಲನಚಿತ್ರಗಳನ್ನು ರಾಜ್ಯದಲ್ಲಿ ಪ್ರದರ್ಶನ ನಿಷೇಧಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ವಿನಾಯಕ ಕಂಬಳಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇದಕ್ಕೆ ಅವಶ್ಯವಿರುವ ಪುರಾವೆಗಳಿವೆ. ಕಳೆದ ಎಂಟನೂರು ವರ್ಷಗಳ ಹಿಂದೆಯೇ ಕ್ರಾಂತಿಯೋಗಿ ಬಸವೇಶ್ವರರು ಹೊಸಗನ್ನಡದಲ್ಲಿ ವಚನಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆ ಮೂಲವು ದ್ರಾವಿಡ ಭಾಷೆ ಆಗಿರಬಹುದು. ಆದರೆ ತಮಿಳಿನಿಂದ ಹುಟ್ಟಿದ್ದಲ್ಲ ಎಂಬುದು ಸ್ಪಷ್ಟ. ಆದರೆ ಕನ್ನಡ ಹುಟ್ಟಿನ ಬಗ್ಗೆ ಮಾತನಾಡುತ್ತಿರುವ ಕಮಲಹಾಸನ್ ಸಮಸ್ತ ಕನ್ನಡಿಗರ ಕ್ಷಮೆಯನ್ನು ಕೇಳಬೇಕು ಎಂದರು.ರಾಜ್ಯಕ್ಕೆ ಬರುವುದನ್ನು ನಿಷೇಧಿಸಿ: ಫರೀದಾಬಾನು ನದೀಮುಲ್ಲಾ ಮಾತನಾಡಿ, ಪ್ರಚಾರದ ಗೀಳಿಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಕಮಲ್ ಹಾಸನ್ ಅವರ ಚಲನಚಿತ್ರಗಳನ್ನು ನಿಷೇಧಿಸುವುದಷ್ಟೇ ಅಲ್ಲ, ರಾಜ್ಯಕ್ಕೆ ಬರುವುದಕ್ಕೂ ಅವಕಾಶ ನೀಡಬಾರದು. ಅಂದಾಗ ಮಾತ್ರ ಇವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ಕನ್ನಡಿಗರು ಶಾಂತಿಪ್ರಿಯರು. ಆದರೇ ಹೇಡಿಗಳಲ್ಲ. ಭಾಷೆಯ ಹುಟ್ಟಿನ ಬಗ್ಗೆ ಅರಿವಿಲ್ಲದೇ ಕಮಲಹಾಸನ್ ಮಾತನಾಡಿದ್ದು ಉದ್ದಟತನದ ವರ್ತನೆಯಾಗಿದೆ ಎಂದರು.ನಟರು ಭಾಷೆಗೆ ಸೀಮಿತವಲ್ಲ: ಪಾಂಡುರಂಗ ಸುತಾರ ಮಾತನಾಡಿ, ಕಾವೇರಿ ವಿವಾದದ ಕಿಡಿಗೆ ಈಗಾಗಲೇ ಎರಡೂ ರಾಜ್ಯಗಳ ಸಂಬಂಧ ಹದಗೆಟ್ಟಿದೆ. ಎರಡೂ ರಾಜ್ಯಗಳು ಕಳೆದ ಹಲವು ದಶಕದಿಂದ ವೈಷಮ್ಯದ ಹಾದಿ ತುಳಿದಿವೆ. ಇಂಥವುಗಳ ಮಧ್ಯೆ ಕಲಾವಿದನಾಗಿ ಭಾಷೆಯ ಅಡೆತಡೆಯಿಲ್ಲದೇ ಕಲೆಯ ಪ್ರದರ್ಶನ ಮಾಡಬೇಕಿದ್ದ ಕಮಲಹಾಸನ್ ಮತ್ತೆ ಕನ್ನಡ ಭಾಷೆ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ವೈಷಮ್ಯ ಹುಟ್ಟು ಹಾಕುತ್ತಿರುವುದು ಸಮಜಂಜಸವಲ್ಲ. ಆಡಿದ ಮಾತಿಗೆ ಮೊದಲು ಕಮಲಹಾಸನ್ ಕನ್ನಡಿಗರ ಕ್ಷಮೆ ಕೇಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರದೀಪ ಜಾಧವ, ಫರೀದಾಬಾನು ನದಿಮುಲ್ಲಾ, ಹಜರತಲಿ ಬಳ್ಳಾರಿ, ಪ್ರಕಾಶ ಕೆಮ್ಮಣ್ಣಕೇರಿ, ಪ್ರವಿಣ ಶಿಲ್ಪಿ, ಚಮನಬಾಷಾ ರಾಣೆಬೆನ್ನೂರ, ಸಾದಿಕ್ ಹಲಗೇರಿ, ಸುದೀಪ ಲಿಂಗದಹಳ್ಳಿ, ಶಬ್ಬೀರ ಬೇಲಿಮನಿ, ದಾದಾಫೀರ ಶಿರಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.5ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಹಾವೇರಿ: ಗುತ್ತಲ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ. 5ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಅಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಗುತ್ತಲ, ಹೊಸರಿತ್ತಿ ಮತ್ತು ನೀರಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ಗುರುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.