ಸಾರಾಂಶ
ಜಯ ಕರ್ನಾಟಕ ಸಂಘಟನೆಯನ್ನು ಮುತ್ತಪ್ಪ ರೈ ನೇತೃತ್ವದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಮುತ್ತಪ್ಪ ರೈ ನಿಧನದ ಬಳಿಕವೂ ಕೂಡ ಸಂಘಟನೆ ನಿರಂತರವಾಗಿ ಹೋರಾಟ ಮುಂದುವರಿಸಿಕೊಂಡು ಬರುತ್ತಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಯ ಕರ್ನಾಟಕ ಸಂಘಟನೆ ಜಿಲ್ಲಾ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಯೋಗಣ್ಣ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಪಾಧ್ಯಕ್ಷರಾಗಿ ಕೆ.ಟಿ.ರಮೇಶ್, ತಾಲೂಕು ಅಧ್ಯಕ್ಷರಾಗಿ ಎಚ್.ಹರ್ಷಿತ್, ತಾಲೂಕು ಉಪಾಧ್ಯಕ್ಷರಾಗಿ ಎಂ.ಅಭಿಷೇಕ್, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮಹೇಶ್ ನೇಮಕಗೊಳಿಸಲಾಗಿದೆ ಎಂದರು.
ಜಯ ಕರ್ನಾಟಕ ಸಂಘಟನೆಯನ್ನು ಮುತ್ತಪ್ಪ ರೈ ನೇತೃತ್ವದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಮುತ್ತಪ್ಪ ರೈ ನಿಧನದ ಬಳಿಕವೂ ಕೂಡ ಸಂಘಟನೆ ನಿರಂತರವಾಗಿ ಹೋರಾಟ ಮುಂದುವರಿಸಿಕೊಂಡು ಬರುತ್ತಿದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಜಯ ಕರ್ನಾಟಕ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಭೆ ನಡೆಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ತಾಲೂಕು ನೂತನ ಅಧ್ಯಕ್ಷ ಹರ್ಷಿತ್ ನೇಮಕಪತ್ರ ಸ್ವೀಕರಿಸಿ ಮಾತನಾಡಿ, ಸಂಘಟನೆಯಲ್ಲಿ ಹಲವು ವರ್ಷಗಳಿಂದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ನನಗೆ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷ ಯೋಗಣ್ಣ ಹಾಗೂ ಜಿಲ್ಲಾ ಉಪಾಧ್ಯಕ್ಷ ರಮೇಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡು, ನುಡಿ ನೆಲ ಜಲದ ರಕ್ಷಣೆ ಜೊತೆಗೆ ಸಮಸ್ಯೆಗಳ ವಿರುದ್ಧ ಸ್ನೇಹಿತರ ಜೊತೆಗೂಡಿ ನಿರಂತರವಾಗಿ ಹೋರಾಟ ಮಾಡುವುದಾಗಿ ಹೇಳಿದರು.ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಆರ್. ರಮೇಶ್ ಮಾತನಾಡಿ, ತಾಲೂಕಿನಲ್ಲಿ ಮುತ್ತಪ್ಪರೈ ಅವರ ಅಶೀರ್ವಾದದೊಂದಿಗೆ ರಾಜ್ಯಾಧ್ಯಕ್ಷ ಜಗದೀಶ್ ಹಾಗೂ ಜಿಲ್ಲಾಧ್ಯಕ್ಷ ಯೋಗಣ್ಣ ಅವರ ಮಾರ್ಗದರ್ಶನದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ವಿಶೇಷ ವಿಭಿನ್ನ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿಯೂ ತಾಲೂಕಿನ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸಲು ಯುವ ನಾಯಕ ಹರ್ಷಿತ್ ಅವರನ್ನು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ, ಎಲ್ಲಾ ಪದಾಧಿಕಾರಿಗಳು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ನಿರತರಾಗಿರುತ್ತಾರೆಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜೀವಧಾರೆ ನಟರಾಜು, ಯುವ ಮುಖಂಡರಾದ ಅಪೂರ್ವರಾಜ್, ಅವಿನಾಶ್, ನಂಜುಂಡ, ಶಿವು ಸೇರಿದಂತೆ ಇತರರು ಇದ್ದರು.
ತೋಟಗಾರಿಕೆ ಇಲಾಖೆಯಲ್ಲಿ ತೆಂಗಿನ ಸಸಿಗಳ ಖರೀದಿಗೆ ಅವಕಾಶಮಂಡ್ಯ:
ತೋಟಗಾರಿಕೆ ಇಲಾಖೆ ವತಿಯಿಂದ 2021-22 ನೇ ಸಾಲಿನ ತೆಂಗಿನ ಗಿಡಗಳು ಮಾರಾಟಕ್ಕೆ ಲಭ್ಯವಿದೆ. ಆಸಕ್ತ ರೈತರು ಇಲಾಖಾ ವತಿಯಿಂದ ನೇರವಾಗಿ ತೆಂಗಿನ ಸಸಿಗಳನ್ನು ಖರೀದಿಸಬಹುದಾಗಿದ್ದು, ಸಸಿಗಳನ್ನು ಖರೀದಿಸಲು ಪಹಣಿ ಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕಿದೆ. ಪ್ರತಿ ಗಿಡಕ್ಕೆ 40 ರುಗಳಂತೆ ಒಬ್ಬರಿಗೆ 40 ಸಸಿಗಳನ್ನು ನೀಡಲಾಗುವುದು, ಸಸಿ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಮಲ್ಲಸಂದ್ರ ಕಾವಲ್ ತೋಟಗಾರಿಕೆ ಮೊ-8884984999, ಪೂರಿಗಾಲಿ ತೋಟಗಾರಿಕೆ ಮೊ-8105946474, ಜವರನಹಳ್ಳಿ ತೋಟಗಾರಿಕೆ ಮೊ-6363667752, ಮಂಡ್ಯ ತೋಟಗಾರಿಕೆ ಮೊ- 9538228585, ಗಾಮನಹಳ್ಳಿ ತೋಟಗಾರಿಕೆ ಮೊ- 9483303421, ಮುರುಕನಹಳ್ಳಿ ತೋಟಗಾರಿಕೆ ಮೊ-9741938178, ಹಳೇಬೀಡು ತೋಟಗಾರಿಕೆ ಮೊ -7337788286, ಪುರ ತೋಟಗಾರಿಕೆ ಮೊ-9916874792, ದುದ್ದ ತೋಟಗಾರಿಕೆ ಮೊ-9845193234, ಶ್ರೀರಂಗಪಟ್ಟಣ ಕಚೇರಿ ಸಸ್ಯಾಗಾರ ಮೊ-7619470626, ಶಿವಳ್ಳಿ ತೋಟಗಾರಿಕೆ ಮೊ- 8496898787, ನಾಯಕನಹಳ್ಳಿ ತೋಟಗಾರಿಕೆ ಮೊ-7019855203 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.