ಸಾರಾಂಶ
ಬನಹಟ್ಟಿಯಲ್ಲಿ ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಮಹಾಶಿವರಾತ್ರಿಯಂದು ನಡೆದ ಶಿವದಾಸಿಮಯ್ಯನವರ ಜಯಂತಿ ಉತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಬನಹಟ್ಟಿ ಹಿರೇಮಠದ ಚರಂತಯ್ಯ ಹಿರೇಮಠ, ಶಿವರಾತ್ರಿಯಂದು ಶಿವದಾಸಿಮಯ್ಯನವರಂತಹ ಮಹಾನ್ ಶರಣರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಿವರಾತ್ರಿಯಂದು ಶಿವದಾಸಿಮಯ್ಯನವರಂತಹ ಮಹಾನ್ ಶರಣರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಭಾರತೀಯ ಸಂಸ್ಕೃತಿಯ ಉಳುವಿಗಾಗಿ ಜಯಂತಿ ಆಚರಣೆಗಳು ಅಗತ್ಯವಾಗಿವೆ ಎಂದು ಬನಹಟ್ಟಿ ಹಿರೇಮಠದ ಚರಂತಯ್ಯ ಹಿರೇಮಠ ಹೇಳಿದರು.ಬನಹಟ್ಟಿಯಲ್ಲಿ ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಮಹಾಶಿವರಾತ್ರಿಯಂದು ನಡೆದ ಶಿವದಾಸಿಮಯ್ಯನವರ ಜಯಂತಿ ಉತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬನಹಟ್ಟಿ ಮಹಾಂತ ಮಂದಾರ ಮಠದ ಶರಣರಾದ ಮಹಾಂತ ದೇವರು ಮಾತನಾಡಿ, ರಜೆಯಿಲ್ಲದೆ ಸರ್ಕಾರವೇ ಶಿವದಾಸಿಮಯ್ಯ ಜಯಂತಿ ಆಚರಿಸಬೇಕು. ಈ ಸಮುದಾಯಕ್ಕೆ ೨ಎ ಮೀಸಲು ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ತಕ್ಷಣವೇ ಜಾರಿಯಾಗಬೇಕು. ಶಿಕ್ಷಣದಲ್ಲಿ, ಧಾರ್ಮಿಕವಾಗಿ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಾಣುತ್ತಿರುವ ಸಮಾಜ ರಾಜಕೀಯವಾಗಿಯೂ ಮುಂದೆ ಬರಬೇಕೆಂದ ಅವರು, ಪ್ರತಿಯೊಬ್ಬರೂ ಸಮಾಜದೊಂದಿಗೆ ಬೆರೆತು ಸಂಘಟಿತ ಸಮಾಜ ನಿರ್ಮಿಸಿದಲ್ಲಿ ಸಮಾಜದೊಂದಿಗೆ ವ್ಯಕ್ತಿಯೂ ಬೆಳೆಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟಿತರಾಗಬೇಕು ಅಂದಾಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ, ಉಪನ್ಯಾಸಕ ವಿಶ್ವಜ ಕಾಡದೇವರ ಮಾತನಾಡಿದರು. ಬನಹಟ್ಟಿ ಶಿವಸಿಂಪಿ ಸಮಾಜದ ಅಧ್ಯಕ್ಷ ಸಿದ್ದಲಿಂಗಪ್ಪ ತುಂಗಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೀರ್ತಿ ಆಳಗಿ, ಐಶ್ವರ್ಯ ಅವರಿಗೆ ಸನ್ಮಾನಿಸಲಾಯಿತು.
ಶ್ರೀಶೈಲ ಶಿರೋಳ, ಬಸವರಾಜ ಐವಳ್ಳಿ, ನಂದು ಬುರಾಣಪುರ, ಶಶಿಕಾಂತ ಮೊಳೆ, ಬಸವರಾಜ ಪಾವಟೆ, ಸದಾಶಿವ ಪಾವಟೆ, ಮಹಾದೇವ ತುಂಗಳ, ಮಲ್ಲಪ್ಪ ಐವಳ್ಳಿ, ಈರಪ್ಪ ಜತ್ತಿ, ಗಂಗಾಧರ ಫಿರಂಗಿ, ಶಂಕರ ತುಂಗಳ, ಮಹೇಶ ಗಂಗಾವತಿ, ಬಸವರಾಜ ಜತ್ತಿ, ಕುಮಾರ ಪಾವಟೆ, ಪ್ರೇಮಾ ಐವಳ್ಳಿ, ಮಂಜುಳಾ ಶಿರೋಳ ಸೇರಿದಂತೆ ಇತರರು ಇದ್ದರು. ಕಿರಣ ಆಳಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ತುಂಗಳ ನಿರೂಪಿಸಿದರು. ಆನಂದ ಆಳಗಿ ವಂದಿಸಿದರು.