ಸಾರಾಂಶ
ಹಾವೇರಿ: ನಗರದ ಕಾಗಿನೆಲೆ ರೋಡ್‌ನ ಶ್ರೀ ಮುರುಘರಾಜೇಂದ್ರ ಮಠದಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸಂಘಟನೆಯ ವತಿಯಿಂದ ಗೌತಮ ಬುದ್ಧನ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು. ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಮಾತನಾಡಿ, ಬುದ್ಧನ ಜೀವನ ತತ್ವಗಳು ಎಲ್ಲಾ ಕಾಲಕ್ಕೂ ಬೆಲೆಯುಳ್ಳವುಗಳು ಆಗಿವೆ. ನೆಮ್ಮದಿಯ ಬದುಕಿಗೆ ಸರಳ ಜೀವನ ಮುಖ್ಯವಾಗಿದೆ. ಗೌತಮ ಬುದ್ಧರು ಜೀವನದ ಅರ್ಥವನ್ನು ಕಂಡುಕೊಂಡು ವಿಶ್ವದಲ್ಲಿ ಶಾಂತಿ, ನೆಮ್ಮದಿಯ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರ ಜೀವನ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.ಮುಖ್ಯಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಪರಿಶಿಷ್ಟ್ಟ ಜಾತಿ, ಪರಿಶಿಷ್ಟ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಗೌತಮ ಬುದ್ಧರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿಗೆ ಸಾಕ್ಷಿಯಾಗೋಣ ಎಂದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಎನ್. ಮಾಸೂರ, ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಹಾನಗಲ್ಲ ತಾಲೂಕಿನ ಸಂಚಾಲಕ ಜಗದೀಶ ಹರಿಜನ, ಮಹೇಶಪ್ಪ ಹರಿಜನ, ಹನುಮಂತಪ್ಪ ಸಿ.ಡಿ., ಮಂಜುನಾಥ ಹಾವನೂರ ಹಾಗೂ ಡಿಎಸ್‌ಎಸ್ ಭೀಮ ಘರ್ಜನೆ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ದೊಡ್ಡಮನಿ, ಸಂತೋಷ ಕನ್ನಮ್ಮನವರ, ನಿಂಗಪ್ಪ ಹಿತ್ತಲಮನಿ, ಮಲ್ಲೇಶಪ್ಪ ಹಿರೇಕ್ಕನವರ, ಪರಮೇಶ ಮಾದರ,ಚಂದ್ರಪ್ಪ ಮಾದರ,ನೀಲಪ್ಪ ಮಾದರ,ಗಣೇಶ ಹರಿಜನ, ಬಿದ್ದಾಡೆಪ್ಪ ಹಂಸಬಾವಿ,ನಾಗರಾಜ ಹರಿಜನ,ದಯಾನಂದ ಹರಿಜನ, ಹನುಮಂತ ಹೊಳೆಮ್ಮನವರ, ಶಿವಾನಂದ ಹಿತ್ತಲಮನಿ,ಮಲ್ಲೇಶಪ್ಪ ಹರಿಜನ ಇತರರು ಇದ್ದರು.