೧೫ಕ್ಕೆ ಪ್ರೊ. ಜಯಪ್ರಕಾಶಗೌಡ ಅಭಿನಂದನಾ ಸಮಾರಂಭ

| Published : Feb 11 2024, 01:48 AM IST

ಸಾರಾಂಶ

ಪ್ರೊ. ಜಯಪ್ರಕಾಶಗೌಡ ಅಭಿನಂದನಾ ಸಮಿತಿ ವತಿಯಿಂದ ಫೆ.೧೫ರಂದು ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಹೆಸರಾಗಿರುವ ಪ್ರೊ.ಬಿ. ಜಯಪ್ರಕಾಶಗೌಡ ೭೫ ಅಭಿನಂದನೆ, ರಂಗಾಭಿನಂದನ ಗ್ರಂಥ ಹಾಗೂ ನಾಥಪಂಥ ಎಂಟು ಸಂಪುಟಗಳ ಮಾಲಿಕೆಯಲ್ಲಿ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭ ನಡೆಯಲಿದೆ ಎಂದು ರಂಗಾಭಿನಂದನ ಅಭಿನಂದನಾ ಗ್ರಂಥ ಸಮಿತಿ ಸಂಪಾದಕ ಡಾ. ರಾಮಕೃಷ್ಣ ತಿಳಿಸಿದರು.

ರಂಗಾಭಿನಂದನ ಗ್ರಂಥದ 1ನೇ ಸಂಪುಟ ಲೋಕಾರ್ಪಣೆ । ರಂಗಸಂಭ್ರಮಕ್ಕೆ ಡಾ. ಬಿ.ಆರ್. ರವಿಕಾಂತೇಗೌಡ ಚಾಲನೆ

ಕನ್ನಡಪ್ರಭ ವಾರ್ತೆ ಮಂಡ್ಯ ಪ್ರೊ. ಜಯಪ್ರಕಾಶಗೌಡ ಅಭಿನಂದನಾ ಸಮಿತಿ ವತಿಯಿಂದ ಫೆ.೧೫ರಂದು ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಹೆಸರಾಗಿರುವ ಪ್ರೊ.ಬಿ. ಜಯಪ್ರಕಾಶಗೌಡ ೭೫ ಅಭಿನಂದನೆ, ರಂಗಾಭಿನಂದನ ಗ್ರಂಥ ಹಾಗೂ ನಾಥಪಂಥ ಎಂಟು ಸಂಪುಟಗಳ ಮಾಲಿಕೆಯಲ್ಲಿ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭ ನಡೆಯಲಿದೆ ಎಂದು ರಂಗಾಭಿನಂದನ ಅಭಿನಂದನಾ ಗ್ರಂಥ ಸಮಿತಿ ಸಂಪಾದಕ ಡಾ. ರಾಮಕೃಷ್ಣ ತಿಳಿಸಿದರು.

ಅಂದು ಬೆಳಗ್ಗೆ ೧೦.೩೦ಕ್ಕೆ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ರಂಗಸಂಭ್ರಮ ಕಾರ್ಯಕ್ರಮವನ್ನು ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ ಉದ್ಘಾಟಿಸುವರು. ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ವಿಶ್ರಾಂತ ಪ್ರಾಂಶುಪಾಲರಾದ ಡಾ. ಡಿ. ಶ್ರೀನಿವಾಸ್, ಡಾ. ವಿ.ಕೆ. ಕೃಷ್ಣಪ್ಪ, ಅಭಿನವ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಧ್ಯಾಹ್ನ ೨ ಗಂಟೆಗೆ ಜೆಪಿ-ನೆನಪಿನಂಗಳದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ತಜ್ಞ ಪ್ರೊ.ಎಚ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಮರಿಗುದ್ದಿ ಸಾಂಸ್ಕೃತಿಕ ಚಟುವಟಿಕೆಗಳು, ಖ್ಯಾತ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಅಸ್ಮಿತೆಯ ಹುಡುಕಾಟ, ಮಹಿಳಾ ಚಿಂತಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ಜೆಪಿಯವರ ಒಡನಾಟ ಹಾಗೂ ರಂಗಕರ್ಮಿ ಡಾ. ಶಶಿಧರ ಭಾರಿಘಾಟ್ ರಂಗಸಂಘಟನೆ ಕುರಿತು ಮಾತನಾಡುವರು.

ಸಂಜೆ ೪ ಗಂಟೆಗೆ ಪ್ರೊ. ಜಯಪ್ರಕಾಶಗೌಡ ೭೫ ಅಭಿನಂದನೆ, ರಂಗಾಭಿನಂದನ ಅಭಿನಂದನಾ ಗ್ರಂಥ ಹಾಗೂ ನಾಥಪಂಥ ಕೃತಿ ಬಿಡುಗಡೆ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾನ್ನಿಧ್ಯ ಹಾಗೂ ವಿಶ್ವಮಾನವ ಕೊಮ್ಮೇರಹಳ್ಳಿ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ಮಾಜಿ ಶಾಸಕ ಬಿ. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಅವರು ರಂಗಾಭಿನಂದನ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮಾಜಿ ಶಾಸಕ ಎಂ. ಶ್ರೀನಿವಾಸ್, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಪ್ರೊ. ಜಯಪ್ರಕಾಶಗೌಡ ಹಾಗೂ ಮಂಜುಳಾ ಜಯಪ್ರಕಾಶಗೌಡ ಅವರನ್ನು ಅಭಿನಂದಿಸುವರು. ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಅಭಿನಂದನಾ ನುಡಿಯನ್ನಾಡುವರು. ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ನಾಥಪಂಥ ಸಂಪುಟ ಮಾಲಿಕೆ ಕುರಿತು ಮಾತನಾಡುವರು. ಶಾಸಕ ನರೇಂದ್ರಸ್ವಾಮಿ ಅವರು ನಾಥಪಂಥ ಸಂಪುಟ-೧ ಬಿಡುಗಡೆ ಮಾಡುವರು. ಕೃತಿಯ ಲೇಖಕ ಡಾ. ಎಚ್.ಜಿ. ಶ್ರೀಧರ್, ಶಾಸಕ ಪಿ. ರವಿಕುಮಾರ್ ಗಣಿಗ ಅವರು ಸಂಪಾದಕರನ್ನು ಗೌರವಿಸುವರು ಎಂದು ಹೇಳಿದರು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಡೀಸಿ ಡಾ. ಕುಮಾರ, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಎಸಿ ಡಾ. ಎಚ್.ಎಲ್. ನಾಗರಾಜು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ.ಟಿ. ವೀರಪ್ಪ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮಾಜಿ ಶಾಸಕ ಎಂ. ಶ್ರೀನಿವಾಸ್ ಮಾತನಾಡಿ, ಪ್ರೊ.ಜಯಪ್ರಕಾಶಗೌಡರು ಒಬ್ಬ ರಂಗಪ್ರೇಮಿ. ನಾಟಕ, ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವನತಿಯ ಅಂಚಿನಲ್ಲಿದ್ದ ಮೂಡಲಪಾಯ ಯಕ್ಷಗಾನದ ಪುನಶ್ಚೇತನಕ್ಕೆ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೂಲಕ ಅದನ್ನು ರಂಗಪ್ರಯೋಗಕ್ಕೆ ಇಳಿಸಿದ್ದಾರೆ. ಅವರೊಬ್ಬ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದು ಬಣ್ಣಿಸಿದರು. ಈ ವೇಳೆ ಮಾಜಿ ಶಾಸಕ ಎಂ. ಶ್ರೀನಿವಾಸ್, ಸದಸ್ಯರಾದ ಎಸ್.ಬಿ. ಶಂಕರೇಗೌಡ, ಮಂಜುಳಾ, ನಾಗಪ್ಪ ಗೋಷ್ಠಿಯಲ್ಲಿದ್ದರು.