ಜಯತೀರ್ಥರ ಆರಾಧಾನಾ ಮಹೋತ್ಸವ

| Published : Jul 16 2025, 12:45 AM IST

ಸಾರಾಂಶ

ನೂರಾರು ಸಂಖ್ಯೆಯ ಭಕ್ತರು ಕೊಪ್ಪಳದ ರಾಯರ ಮಠಕ್ಕೆ ಭೇಟಿ ನೀಡಿ, ಬೃಂದಾವನದ ದರ್ಶನ ಪಡೆದರು. ಮಠದ ವತಿಯಿಂದ ಸುಪ್ರಭಾತ, ಜಯತೀರ್ಥ ಸ್ತುತಿ ಪಾರಾಯಣ, ಅಷ್ತೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ ಅಲಂಕಾರ, ತೀರ್ಥಪ್ರಸಾದ ಕಾರ್ಯಕ್ರಮ ನಡೆದವು.

ಕೊಪ್ಪಳ:

ನಗರದ ಶ್ರೀರಾಘವೇಂದ್ರ ಸ್ವಾಮೀಜಿಗಳ ಮಠದಲ್ಲಿ ಶ್ರೀಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವದ ನಿಮಿತ್ತ ಮಂಗಳವಾರ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಮಧ್ಯಾಹ್ನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ನೂರಾರು ಸಂಖ್ಯೆಯ ಭಕ್ತರು ರಾಯರ ಮಠಕ್ಕೆ ಭೇಟಿ ನೀಡಿ, ಬೃಂದಾವನದ ದರ್ಶನ ಪಡೆದರು. ಮಠದ ವತಿಯಿಂದ ಸುಪ್ರಭಾತ, ಜಯತೀರ್ಥ ಸ್ತುತಿ ಪಾರಾಯಣ, ಅಷ್ತೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ ಅಲಂಕಾರ, ತೀರ್ಥಪ್ರಸಾದ ಕಾರ್ಯಕ್ರಮ ನಡೆದವು.ರಾಯರ ಬೃಂದಾವನ ಹಾಗೂ ಎದುರು ಇರುವ ಆಂಜನೇಯನ ದೇವಸ್ಥಾನದಲ್ಲಿ ತರಹೇವಾರಿ ಹೂಗಳಿಂದ ಹೂವಿನ ಅಲಂಕಾರ ಮಾಡಲಾಗಿತ್ತು. ಮಠದ ಪ್ರಧಾನ ಅರ್ಚಕ ಪಂಡಿತ್‌ ರಘುಪ್ರೇಮಾಚಾರ್ ಮುಳಗುಂದ ಅವರು ಪೂಜಾ ಕೈಂಕರ್ಯ ನೆರವೇರಿಸಿದರು. ವ್ಯವಸ್ಥಾಪಕ ಜಗನ್ನಾಥ ಹುನಗುಂದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಂಜೆ ಪಂಡಿತ್‌ ಹನುಮೇಶಚಾರ್ಯ ಗಂಗೂರ ಅವರಿಂದ ಉಪನ್ಯಾಸ ಮತ್ತು ಆಕಾಶವಾಣಿ ಕಲಾವಿದೆ ಕಲಬುರಗಿಯ ಶ್ರುತಿ ವಿಜಯೀಂದ್ರ ಸಗರ ಅವರ ಭಕ್ತಿ ಸಂಗೀತ ಜರುಗಿದವು. ರಾತ್ರಿ ಕೂಡ ಭಕ್ತರು ಮಠಕ್ಕೆ ಭೇಟಿ ನೀಡಿದರು.