ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ತತ್ತರಿಸಿರುವ ತಾಲೂಕಗಳು ಗ್ರಾಮಗಳಿಗೆ ತುರ್ತು ಬರ ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ರೈತರ ಸಾಲಮನ್ನಾ, ಪರಿಹಾರ, ಕುಡಿಯುವ ನೀರು, ಜಾನುವಾರಗಳಿಗೆ ಮೇವಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೆಡಿಎಸ್ ತಾಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ ಮಾತನಾಡಿ, ಬರಪೀಡಿತ ತಾಲೂಕು ಘೋಷಿಸಿ ಅದಕ್ಕೆ ಪೂರಕವಾಗಿರುವ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕಷ್ಟ ಕಾಲದಲ್ಲಿ ರೈತನ ಕೈಹಿಡಿಯಬೇಕಿದ್ದ ಸರ್ಕಾರ ₹2500 ಪರಿಹಾರ ಘೋಷಿಸಿದ್ದು, ರೈತನ ಭಾವನೆಯ ಮೇಲೆ ಬರೆ ಎಳದಿದೆ. ರೈತನ ಸಂಕಷ್ಟ ಅರ್ಥ ಮಾಡಿಕೊಂಡು ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹25,000 ಪರಿಹಾರ ಘೋಷಿಸಿಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಎಸ್‌ಸಿ ವಿಭಾಗದ ಜಿಲ್ಲಾಧ್ಯಕ್ಷ ಸಂಜೀವ ದೊಡಮನಿ, ರಾಮಚಂದ್ರ ಚವ್ಹಾಣ, ಸುಜಾತಾ ಕಣಬೂರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎನ್.ಪಾಟೀಲ, ದಯಾನಂದ ಕಸಮೂಳೆ, ಶಿವಾನಂದ ಹಿರೇಕುರಬರ, ಶಿವು ಕೋಳಿ, ವಿಕಾಸ ಬಿರಾದಾರ, ಕೇವಸನ ಸಾವಳೆ, ಭೀಮರಾಯ ಇಬ್ರಾಹಿಂಪುರ, ಲಾಲಬಾಶಾ ಜಮಾದಾರ ಇದ್ದರು.