ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಬಯಲು ಮಾಡಲು ದೇವರಾಜೇಗೌಡರಿಗೆ ಡಿ.ಕೆ ಶಿವಕುಮಾರ್‌ ಮತ್ತು ಅವರ ತಂಡ 100 ಕೋಟಿ ರು. ಆಫರ್‌ ಮಾಡಿರುವುದಾಗಿ ಆರೋಪಿಸಿದೆ.

ಬೆಂಗಳೂರು: ‘ಸಿ.ಡಿ.ಶಿವಕುಮಾರ್ ಪೆನ್‌ಡ್ರೈವ್ ಗ್ಯಾಂಗ್’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಜೆಡಿಎಸ್ ಪಕ್ಷ ಹರಿಹಾಯ್ದಿದೆ.

ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಇನ್ನೂ ಒಬ್ಬ ಸಚಿವ ಹಾಗೂ ಎಲ್.ಆರ್.ಶಿವರಾಮೇಗೌಡ ಇವರೆಲ್ಲರೂ ಹೂಡಿರುವ ಸಂಚು ಏನು ಗೊತ್ತಾ? ಪ್ರಧಾನಿ ಮೋದಿ ಹಾಗೂ ಎಚ್‌.ಡಿ.ಕುಮಾರಸ್ವಾಮಿಗೆ ಕೆಟ್ಟ ಹೆಸರು ತರುವುದು.

ಈ ಸಂಚು ಸಾಕಾರಗೊಳಿಸಲು ದೇವರಾಜೇಗೌಡರಿಗೆ ಡಿಕೆಶಿ ಆಫರ್ ಮಾಡಿದ ಮೊತ್ತ ಬರೋಬ್ಬರಿ ₹100 ಕೋಟಿ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.