ಸಾರಾಂಶ
ರಾಮನಗರ: ಬಿಡದಿ ಪುರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯೆ ಭಾನುಪ್ರಿಯಾ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಹರಿಪ್ರಸಾದ್ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಇಟ್ಟುಮಡು ಕ್ಷೇತ್ರದ ಜೆಡಿಎಸ್ ಸದಸ್ಯೆ ಭಾನುಪ್ರಿಯಾ ಮತ್ತು ಬಾನಂದೂರು ಕ್ಷೇತ್ರದ ಕಾಂಗ್ರೆಸ್ ಸದಸ್ಯ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು.ಚುನಾವಣೆ ಪ್ರಕ್ರಿಯೆಯಲ್ಲಿ ಭಾನುಪ್ರಿಯಾ 14 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಶ್ರೀನಿವಾಸ್ ಅವರನ್ನ(ಪಡೆದ ಮತ 9) 5 ಮತಗಳ ಅಂತರದಿಂದ ಸೋಲಿಸಿದರು. ಮತದಾನದಲ್ಲಿ ಜೆಡಿಎಸ್ 14 ಮತ್ತು ಕಾಂಗ್ರೆಸ್ 9 ಸದಸ್ಯರು ಪಾಲ್ಗೊಂಡರೆ, ಮತದಾನದ ಹಕ್ಕು ಹೊಂದಿದ್ದ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಗೈರಾಗಿದ್ದರು.
ನೂತನ ಅಧ್ಯಕ್ಷರಾಗಿ ಭಾನುಪ್ರಿಯಾ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ತೇಜಸ್ವಿನಿ ಕಾರ್ಯನಿರ್ವಹಿಸಿದರು. ಮುಖ್ಯಾಧಿಕಾರಿ ಎಂ.ಮೀನಾಕ್ಷಿ ಹಾಜರಿದ್ದರು.
ಮಾಜಿ ಶಾಸಕ ಎ.ಮಂಜುನಾಥ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಗೋವಿಂದಯ್ಯ, ವಿಪಕ್ಷ ನಾಯಕ ಸಿ.ಉಮೇಶ್, ಸದಸ್ಯರಾದ ದೇವರಾಜು, ರಾಕೇಶ್ , ಮನು ಲೋಕಿ, ರಮೇಶ್ , ಲೋಹಿತ್ ಕುಮಾರ್, ಹರಿಪ್ರಸಾದ್ , ಸೋಮಶೇಖರ್ , ಲಲಿತಾ ನರಸಿಂಹಯ್ಯ, ಆಯಿಷಾ, ಸರಸ್ವತಮ್ಮ, ಯಲ್ಲಮ್ಮ, ನಾಗರಾಜು, ಮುಖಂಡರಾದ ಎಚ್.ಎಲ್.ಚಂದ್ರಯ್ಯ, ಡಾ.ಭರತ್ , ಪಲ್ಲವಿ ಪುಟ್ಟಪ್ಪ, ರಾಮಕೃಷ್ಣಯ್ಯ, ಬಸವರಾಜು, ಸೋಮೇಗೌಡ, ವಸಂತ್, ಮಂಜುನಾಥ್, ಗಿರಿಧರ್ ಮತ್ತಿತರರು ನೂತನ ಅಧ್ಯಕ್ಷೆ ಭಾನು ಪ್ರಿಯಾ ಅವರನ್ನು ಅಭಿನಂದಿಸಿದರು.ಹೈಕೋರರ್ಟ್ ಗೆ ಅಗೌರವ :
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎ.ಮಜುನಾಥ್, ಜೆಡಿಎಸ್ ಬೆಂಬಲಿತ 14 ಸದಸ್ಯರ ಮತ ಪಡೆದು ಭಾನುಪ್ರಿಯಾ ಆಯ್ಕೆಯಾಗಿರುವುದು ಪಕ್ಷ ಮತ್ತು ವರಿಷ್ಠರಿಗೆ ಸಂತಸ ತಂದಿದೆ. 2ನೇ ಅವಧಿಗೆ ಅವರನ್ನು ಅಧ್ಯಕ್ಷರಾಗಿರುವ ಭಾನು ಪ್ರಿಯಾ ಅವರಿಗೆ ಪುರಸಭೆಯ 23 ಸದಸ್ಯರ ಸಹಕಾರದೊಂದಿಗೆ ಪಟ್ಟಣ ಅಭಿವೃದ್ಧಿ ಪಡಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.ಮಾಗಡಿ ಪುರಸಭೆ ಚುನಾವಣೆ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿದೆ. ಚುನಾವಣಾ ಪ್ರಕ್ರಿಯೆ ಅಷ್ಟೆ ಮುಗಿಸಬೇಕು, ಫಲಿತಾಂಶ ಘೋಷಿಸಬಾರದು ಎಂದು ನ್ಯಾಯಾಲಯದ ಸೂಕ್ತ ನಿರ್ದೇಶನ ಸಹ ಇದೆ. ನಮ್ಮ ಪಕ್ಷದಿಂದ ಈ ಹಿಂದೆ ವೋಟ್ ಕ್ರಾಸ್ ಮಾಡಿದ್ದವರು ಗುಪ್ತ ಮತದಾನ ಮಾಡಿ ನ್ಯಾಯಾಲಯಕ್ಕೆ ನೀಡ ಬೇಕೆಂಬ ಆದೇಶವಿದ್ದರೂ, ಶಾಸಕರು ಅಧಿಕಾರ ಬಳಸಿ ಫಲಿತಾಂಶ ಘೋಷಿಸಿ, ಪಟಾಕಿ ಸಿಡಿಸಿ ಸಂಭ್ರಮಾ ಚರಣೆ ಮಾಡಿದ್ದಾರೆ. ಅದರೆ ಅವರು ಹೈಕೋರ್ಟ್ ಗೆ ಅಗೌರವ ಕೆಲಸ ಮಾಡಿದ್ದು, ಮುಂದೆ ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ನೋಡಬೇಕಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ಕೋಟ್ ............ನೂರು ವರ್ಷಗಳ ಇತಿಹಾಸ ಇರುವ ಆರ್ ಎಸ್ ಎಸ್ ಸಂಘಟನೆಗೆ ಬಗ್ಗೆ ದೊಡ್ಡ ಮನೆತನದವರಾಗಿರುವ ಸಚಿವ ಪ್ರಿಯಾಂಕಖರ್ಗೆ ಅವರು ಉಡಾಫೆ ಹೇಳಿಕೆ ನೀಡ ಬಾರದು. ಅವರು ವಿಚಾರವಂತರಾಗಿದ್ದು, ಹೇಳಿಕೆ ಕೊಡುವಾಗ ಸ್ವಂತ ವಿವೇಚನೆಯಿಂದ ಮಾತನಾಡದೆ ಪ್ರಚಾರಕ್ಕಾಗಿ ಮಾತನಾಡುವುದು ಸರಿಯಲ್ಲ ಅದನ್ನು ಖಂಡಿಸುತ್ತೇನೆ. ನಿಮ್ಮ ತಂದೆಯವರ ಸ್ಥಾನಮಾನಕ್ಕೆ ಸರಿ ಸಮಾನವಾದ ಗೌರವ ಕೊಡುವಂತೆ ಹೇಳಿಕೆ ಕೊಡಿ.
- ಎ.ಮಂಜುನಾಥ್, ಜಿಲ್ಲಾಧ್ಯಕ್ಷರು, ಜೆಡಿಎಸ್, ಬೆಂ.ದಕ್ಷಿಣ ಜಿಲ್ಲೆ15ಕೆಆರ್ ಎಂಎನ್ 1.ಜೆಪಿಜಿ
ಬಿಡದಿ ಪುರಸಭೆ ನೂತನ ಅಧ್ಯಕ್ಷೆ ಭಾನು ಪ್ರಿಯಾ ಅವರನ್ನು ಸದಸ್ಯರು ಅಭಿನಂದಿಸಿದರು.