ದೇಶ ಸೇವೆಯೇ ಜೆಡಿಎಸ್, ಬಿಜೆಪಿ ಗುರಿ: ರಂಜನ್ ಅಜಿತ್ ಕುಮಾರ್

| Published : Apr 02 2024, 01:06 AM IST

ಸಾರಾಂಶ

ದೇಶಕ್ಕೆ ಮೋದಿ ಮತ್ತು ಇವರ ಅಡಳಿತ ಬೇಕು. ಈ ಮೂಲಕ ಭಾರತ ವಿಶ್ವಗುರು ಆಗಬೇಕೆಂಬುದು ಜೆಡಿಎಸ್ ನ ನಿಲುವಾಗಿದೆ. ಈ ಕಾರಣದಿಂದ ಮ್ಯೆತ್ರಿಯನ್ನು ಎಲ್ಲಾ ಕಾರ್ಯಕರ್ತರು ಗೌರವಿಸಿ ಲೋಕಸಭೆಯಲ್ಲಿ ಪ್ರಚಂಡ ಗೆಲುವನ್ನು ದಾಖಲಿಸಲು ಶ್ರಮಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ದೇಶಕ್ಕೆ ಮೋದಿ ಮತ್ತು ಇವರ ಅಡಳಿತ ಬೇಕು. ಈ ಮೂಲಕ ಭಾರತ ವಿಶ್ವಗುರು ಆಗಬೇಕೆಂಬುದು ಜೆಡಿಎಸ್ ನ ನಿಲುವಾಗಿದೆ. ಈ ಕಾರಣದಿಂದ ಮ್ಯೆತ್ರಿಯನ್ನು ಎಲ್ಲಾ ಕಾರ್ಯಕರ್ತರು ಗೌರವಿಸಿ ಲೋಕಸಭೆಯಲ್ಲಿ ಪ್ರಚಂಡ ಗೆಲುವನ್ನು ದಾಖಲಿಸಲು ಶ್ರಮಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹೇಳಿದರು.

ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತ ನಾಡಿದ ಅವರು, ನಮ್ಮ ಮುಂದಿನ ಪೀಳಿಗೆಗಾಗಿ ದೇಶ ಉಳಿಯಬೇಕು. ಇದನ್ನು ಸಾಕಾರಗೊಳಿಸಲು ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಅವರ ಜೊತೆ ಕೈಜೋಡಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಇದನ್ನು ರಾಜ್ಯಮಟ್ಟದಲ್ಲಿ ಜೆಡಿಎಸ್ ಪ್ರಮುಖರು ಮನಗಂಡಿದ್ದು, ಮೈತ್ರಿ ಯಶಸ್ವಿ ಯಾಗಲು ಎಲ್ಲಾ ಬೂತ್ ಮಟ್ಟದಲ್ಲೂ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ರೈತರ ಸಾಲ ಮನ್ನಾ, ದೇವೆಗೌಡರ ದೇಶ ಅಭಿವೃದ್ಧಿ ಚಿಂತನೆ, ಎಲ್ಲವನ್ನೂ ಮನೆ ಮನೆಗೆ ತೆರಳಿ ತಿಳಿಸಲಾಗುವುದು. ಅಲ್ಲದೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಂತ್ರಿಯಾಗಿದ್ದಾಗ ಭ್ರಷ್ಠಾಚಾರ ರಹಿತ ಆಡಳಿತ ನೀಡಿದ್ದಾರೆ. ಅವರಿಗೆ ಸ್ಥಳೀಯ ಸಮಸ್ಯೆ ಬಗ್ಗೆ ಅರಿವಿದೆ. ಅವರನ್ನು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಗೆಲ್ಲಿಸೋಣ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿಂದ್ರ ಬೆಳವಾಡಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಶಾಶ್ವತವಾದದ್ದು. ಯಾವುದೇ ಗೊಂದಲ ನಮ್ಮಲ್ಲಿ ಇರಬಾರದು. ದೇವೆಗೌಡರ ಸಲಹೆ ಸೂಚನೆಯನ್ನು ಮೋದಿ ಅವರು ಪಡೆದು ಪಾಲಿಸುತ್ತಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲೂ ದೇಶದ ಸೇವೆ ಹೋರಾಟ ಮತ್ತು ಕಾಯಕ ಎಲ್ಲರಿಗೂ ಮಾದರಿ. ದೇವೆಗೌಡರ ಬದ್ಧತೆ ಹಾಗೂ ಶ್ರಮ ಸರಕಾರಕ್ಕೆ ಇರಲೇಬೇಕು ಎಂಬುದೆ ಮೋದಿ ಆಶಯವಾಗಿದೆ. ಅಲ್ಲದೆ ನಮ್ಮ ಅಭ್ಯರ್ಥಿಯ ಕಾರ್ಯ ಮನೆ ಮನೆಗು ಮುಟ್ಟಿಸಬೇಕು. ಈ ಚುನಾವಣೆ ದೇಶದ ಭವಿಷ್ಯದ ಉಳಿವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಮುಖಂಡರಾದ ಕೆ.ಸಿ.ರತನ್, ರವಿ ಬಸರಳ್ಳಿ, ಕವೀಶ್, ಸುದರ್ಶನ್, ದೀಪಕ್ ದೊಡ್ಡಯ್ಯ, ಹಳಸೆ ಶಿವಣ್ಣ, ಕಲ್ಲೇಶ್, ಕೇಶವ ಕೆಂಜಿಗೆ, ಡಿ.ಎಸ್.ಸುರೇಂದ್ರ ಇದ್ದರು.ಪೋಟೋ ಫೈಲ್‌ ನೇಮ್‌ 1 ಕೆಸಿಕೆಎಂ 8ಮೂಡಿಗೆರೆಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ, ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿದರು.