ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ

| Published : Oct 14 2025, 01:00 AM IST

ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಟೋಬರ್ 19ರಂದು ನಡೆಯುವ ಟಿಎಪಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಷೇರುದಾರ ರೈತರ ಆಶೀರ್ವಾದದಿಂದ ಹೆಚ್ಚಿನ ಬಹುಮತಗಳೊಂದಿಗೆ ಜಯಗಳಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿ ಎನ್ ಪುಟ್ಟಸ್ವಾಮಿಗೌಡ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತ ದೃಷ್ಟಿಯಿಂದ ಸಂಘದ ಸದಸ್ಯರು ಕಣದಲ್ಲಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡುವ ಮೂಲಕ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅಕ್ಟೋಬರ್ 19ರಂದು ನಡೆಯುವ ಟಿಎಪಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಷೇರುದಾರ ರೈತರ ಆಶೀರ್ವಾದದಿಂದ ಹೆಚ್ಚಿನ ಬಹುಮತಗಳೊಂದಿಗೆ ಜಯಗಳಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿ ಎನ್ ಪುಟ್ಟಸ್ವಾಮಿಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಹೋಬಳಿಯ ಪುರಾಣ ಪ್ರಸಿದ್ಧ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿ ಟಿಎಪಿಎಂಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಅನೇಕ ಅವಧಿಗಳಿಂದ ಟಿಎಪಿಎಂಎಸ್ ಆಡಳಿತ ಮಂಡಳಿಯ ಅಧಿಕಾರವನ್ನು ಜೆಡಿಎಸ್ ಪಕ್ಷ ಬಹುಮತಗಳೊಂದಿಗೆ ನಡೆಸುತ್ತಾ ಬಂದಿದೆ. ಈ ಹಿಂದೆ ನಷ್ಟದಲ್ಲಿದ್ದ ಟಿ ಎಪಿಎಂಎಸ್ ಅನ್ನು ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ ಹಾಗೂ ತಮ್ಮ ಸಹಕಾರ ಮತ್ತು ಎಲ್ಲಾ ಸದಸ್ಯರ ಹಾಗೂ ಷೇರುದಾರ ರೈತರ ಸಹಕಾರದಿಂದ ಇಂದು ಪ್ರಸ್ತುತ ಲಾಭದಲ್ಲಿದೆ. ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತ ದೃಷ್ಟಿಯಿಂದ ಸಂಘದ ಸದಸ್ಯರು ಕಣದಲ್ಲಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡುವ ಮೂಲಕ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಹಾಲಿ ಅಭ್ಯರ್ಥಿ ಮರಗೂರು ಅನಿಲ್ ಕುಮಾರ್ ಮಾತನಾಡಿ, ಈಗಾಗಲೇ ಒಟ್ಟು 14 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನುಳಿದ 7 ಸ್ಥಾನಗಳಿಗೆ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ ಉತ್ತಮ ಆಡಳಿತದ ದೃಷ್ಟಿಯಿಂದ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಮತದಾರರು ಹೆಚ್ಚಿನ ಮತ ನೀಡುವ ಮೂಲಕ ಸಂಘ ಇನ್ನಷ್ಟು ಸಂಘ ಅಭಿವೃದ್ಧಿಗೊಳಲು ಸಹಕಾರ ನೀಡುವಂತೆ ತಿಳಿಸಿದರು. ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಹಾಲಿ ಜೆಡಿಎಸ್ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್ ಹಾಗೂ ನೂತನ ನಿರ್ದೇಶಕ ತೋಟಿ ನಾಗರಾಜ್ ಮಾತನಾಡಿದರು.ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಮರಗೂರು ಅನಿಲ್ ಕುಮಾರ್‌, ನಂಜುಂಡೇಗೌಡ, ಬಿಸಿಎಂ ಬಿ ಕ್ಷೇತ್ರದಿಂದ ಕುಂಬಾರ ಹಳ್ಳಿ ರಮೇಶ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶ್ರೀಮತಿ ಮಮತಾ ಬೋರ್ವೆಲ್ ಜಯಣ್ಣ, ಎಂ ತಾರಾಮಣಿ ಸಿ ಎನ್ ಆನಂದ್, ಬಿಸಿಎಂಎ ಕ್ಷೇತ್ರದಿಂದ ಮೀಸೆ ಜಗದೀಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕುಂಬಾರಹಳ್ಳಿ ಕೆ ಆರ್‌ ರವಿಕುಮಾರ್, ಉಳಿದಿರುವ 7 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದ್ದಾರೆ.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಮೆಡಿಕಲ್ ವೆಂಕಟೇಶ್, ಲಾಯರ್‌ ಬೋರೇಗೌಡ, ಕೃಷ್ಣೇಗೌಡ, ನಾಗರಾಜ್ ನೆಟ್ಟೆಕೆರೆ, ಉಮೇಶ್, ಮುಖಂಡರಾದ ಬೋರ್‌ವೆಲ್ ಜಯಣ್ಣ, ತರಬೇನಹಳ್ಳಿ ನಂಜುಂಡೇಗೌಡ, ವಾಸು, ಕುಳೇಗೌಡ, ಸೇರಿದಂತೆ ಇತರರು ಹಾಜರಿದ್ದರು.---------------------------------------