ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಅಕ್ಷಿತ್‌ ಸುವರ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ, ಸಮಗ್ರ ತನಿಖೆ ಸಿಬಿಐ ಮೂಲಕ ಆಗಬೇಕು. ಆರೋಪಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಅಕ್ಷಿತ್‌ ಸುವರ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.ಪ್ರಕರಣದ್ಲಲ್ಲಿ ಪ್ರಜ್ವಲ್‌ ರೇವಣ್ಣ ಪಾತ್ರದಷ್ಟೇ ವಿಡಿಯೋ ಹರಿಬಿಟ್ಟವರ ಪಾತ್ರವೂ ಇದೆ. ಮಹಿಳೆಯರ ಮುಖ ಬ್ಲರ್‌ ಮಾಡದೆ ವಿಡಿಯೋ ಹರಿಯಬಿಟ್ಟಿದ್ದಾರೆ. ಇದು ಖಂಡನೀಯ. ವಿಡಿಯೋದಲ್ಲಿರುವ ಕುಟುಂಬ ಮತ್ತು ಸಂಸಾರಕ್ಕೆ ಇದು ದೊಡ್ಡ ಹೊಡೆತ ನೀಡಲಿದೆ. ಆದ್ದರಿಂದ ಈ ವಿಡಿಯೋ ಯಾರು ಹರಿ ಬಿಟ್ಟಿದ್ದಾರೋ ಅವರ ವಿರುದ್ಧವೂ ಕಠಿಣ ಕ್ರಮವಾಗಬೇಕು. ಎಸ್‌ಐಟಿ ಒಂದು ಭಾಗದ ವಿಚಾರಣೆ ಮಾತ್ರ ಮಾಡಿದ್ದಾರೆ. ವೀಡಿಯೊಗಳನ್ನು ಹಂಚಿಕೆ ಮಾಡಿದ, ವೈರಲ್‌ ಮಾಡಿದವರ ವಿಚಾರಣೆ ಮಾಡುತ್ತಿಲ್ಲ ಎಂದು ಅಕ್ಷಿತ್‌ ಸುವರ್ಣ ಹೇಳಿದರು.ಜೆಡಿಎಸ್‌ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್‌ ಕರ್ಕೇರ, ಉಪಾಧ್ಯಕ್ಷ ಮೊಹಮ್ಮದ್‌ ಅಸಿಫ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್‌ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್‌ ಬಂದರು, ಯುವ ಘಟಕ ಪಧಾದಿಕಾರಿಗಳಾದ ನಿತೇಶ್‌ ಪೂಜಾರಿ, ವಿನಿತ್‌, ರಿನಿತ್‌, ನಿಶಾಂತ್‌, ಜಯದೀಪ್‌, ಧನುಷ್‌ ಪೂಜಾರಿ, ಸುಮಂತ್‌ ಬಂಟ್ವಾಳ್‌, ಕಾರ್ತಿಕ, ಸುಶಾಂತ್‌, ವಿಕ್ಯಾತ್‌ ಮತ್ತಿತರರು ಇದ್ದರು.