ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜೆಡಿಎಸ್ ಕೈ ಜೋಡಿಸಿದೆ: ಎಚ್.ಡಿ. ದೇವೇಗೌಡ

| Published : Mar 16 2024, 01:55 AM IST

ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜೆಡಿಎಸ್ ಕೈ ಜೋಡಿಸಿದೆ: ಎಚ್.ಡಿ. ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಹಿರಿಮೆಯನ್ನು ವಿಶ್ವಕ್ಕೆ ತೋರಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜೆಡಿಎಸ್ ಕೈ ಜೋಡಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

-ಕಡೂರಿನಲ್ಲಿ ನಡೆದ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಕನ್ನಡಪ್ರ್ರಭ ವಾರ್ತೆ, ಕಡೂರು

ಭಾರತದ ಹಿರಿಮೆಯನ್ನು ವಿಶ್ವಕ್ಕೆ ತೋರಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜೆಡಿಎಸ್ ಕೈ ಜೋಡಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.ಶುಕ್ರವಾರ ಕಡೂರಿನ ಗೀತಾ ಮಂದಿರದಲ್ಲಿ ನಡೆದ ಕಡೂರು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ದರು. 150 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಪ್ರಧಾನಿಯಾಗುವ ಯೋಗ್ಯತೆಯಿರುವ ವ್ಯಕ್ತಿ ಮೋದಿ. 10 ವರ್ಷಗಳಲ್ಲಿ ದೇಶಕ್ಕೆ ಅವರು ನೀಡಿರುವ ಕೊಡುಗೆಗಳೇ ಇದನ್ನು ಸ್ಪಷ್ಟಪಡಿಸಿದ್ದು, ಭಾರತದ ಗೌರವ ಕಾಪಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಬಣ್ಣಿಸಿದರು.

ಬಿಜೆಪಿ ಜೆಡಿಎಸ್ ಒಂದಾಗಿ ಕಾಂಗ್ರೆಸ್ಸಿನ ದುರಾಡಳಿತ ಕಿತ್ತೊಗೆಯಲು ತೀರ್ಮಾನಿಸಿವೆ. ಇದಕ್ಕೆ ಮೋದಿಯವರು ಹಾಗೂ ನಾನು ಶಕ್ತಿ ತುಂಬಿದ್ದೇವೆ. ಕಾಂಗ್ರೆಸ್ ನ ಸಿದ್ದರಾಮಯ್ಯನವರು ಸ್ಕೀಮುಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಕುಂಠಿತ ಗೊಳಿಸುವ ಜೊತೆಗೆ ಕೋಟಿ ಕೋಟಿ ಹಣ ನೀಡಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ನೀರಿಲ್ಲದೆ ಜನರು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 9 ತಿಂಗಳಲ್ಲಿ 695 ಜನರು ಮತ್ತು ಜಾನುವಾರುಗಳು ನೀರಿಲ್ಲದೆ ಸಾವಿಗೀಡಾಗಿವೆ ಎಂದರು.ದೇಶದ ರಾಜಸ್ತಾನ್, ಮದ್ಯಪ್ರದೇಶ್ ಮತ್ತು ಛತ್ತೀಸ್ ಗಡ್ ಸೇರಿದಂತೆ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತವಿದ್ದು, 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೋದಿಯವರು ಮತ್ತೆ ಪ್ರಧಾನಿಯಾಗಲು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೈಜೋಡಿಸಿದೆ. ಮೊಮ್ಮಗ ಪ್ರಜ್ವಲ್ ಮತ್ತೊಮ್ಮೆ ಸ್ಪರ್ಧಿಸಿದ್ದು ಪುನರಾಯ್ಕೆ ಮೂಲಕ ಹಾಸನದ ಜೊತೆಗೆ ಕಡೂರಿನಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲಿದೆ ಎಂದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಎಂದು ಹೇಳಿ ರೈತರ ಮನೆಹಾಳು ಮಾಡುತ್ತಿದೆ. ಅವುಗಳ ವೆಚ್ಚದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು. ಮೋದಿಯವರು ಹಾಸನ ಚಿಕ್ಕಮಗಳೂರು ಕ್ಷೇತ್ರಗಳಿಗೆ 12 ಸಾವಿರ ಕೋಟಿ ರು.ಅನುದಾನ ನೀಡಿದ್ದಾರೆ. ನಾನು ಲೋಕೋಪಯೋಗಿ ಸಚಿವ ನಾಗಿದ್ದಾಗ ರಸ್ತೆಗಳ ನಿರ್ಮಾಣಕ್ಕೆ 350 ಕೋಟಿ ಅನುದಾನ ನೀಡಿದ್ದೆ ಎಂದರು.ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕಷ್ಟದ ದಿನಗಳಲ್ಲಿ ಜೆಡಿಎಸ್ ನ್ನು ಕಟ್ಟಿ ಬೆಳೆಸಿದ ಸ್ವಾರ್ಥರಹಿತ ರಾಜಕಾರಣಿ ವೈಎಸ್.ವಿ.ದತ್ತ ಅವರು ಇಂದಿಗೂ ನಮ್ಮ ಆಶಾಕಿರಣ. ನಮ್ಮ ಕೆಲ ತಪ್ಪು ಮತ್ತು ದತ್ತ ಅವರ ಮೈಮರೆವೆಯಿಂದ ಅವರ ಸೋಲಾಯಿತು. ಕಡೂರಿನ ಕೆರೆಗಳಿಗೆ ನೀರುಣಿಸುವ ಭಧ್ರಾ ಮೇಲ್ದಂಡೆ ಯೋಜನೆ ಇಂದು ರಾಷ್ಟ್ರೀಯ ಯೋಜನೆ ಯಾಗಿ 52 ಸಾವಿರ ಕೋಟಿ ಹಣ ದೊರಕಲು ದೇವೇಗೌಡರು ಹಾಗೂ ವೈಎಸ್.ವಿ.ದತ್ತ ಅವರ ಶ್ರಮ ಕಾರಣ ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕಡೂರು ಕ್ಷೇತ್ರದಲ್ಲಿ ಸೊನ್ನೆಯಿಂದ ಆರಂಭವಾದ ಜೆಡಿಎಸ್ ಇಂದು ಕಾರ್ಯಕರ್ತರಿಂದಲೇ ಉಳಿದಿದೆ. ಸಂಸದ ಪ್ರಜ್ವಲ್ ಅವರನ್ನು ಮತ್ತೊಮ್ಮೆ ಗೆಲ್ಲಿಸುತ್ತಾರೆ. ಬಿಜೆಪಿ ಕಾರ್ಯಕರ್ತರೂ ಸಹ ನಮ್ಮೊಡನಿರುವುದು ನಮ್ಮ ಬಲ ಮತ್ತಷ್ಟು ಹೆಚ್ಚಿಸಿದೆ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಮುಖಂಡರಾದ ಬಿದರೆ ಜಗದೀಶ್, ಕೆ.ಎಂ.ವಿನಾಯಕ, ರಂಜನ್ ಅಜಿತ್ ಕುಮಾರ್, ಬಿ.ಟಿ.ಗಂಗಾಧರ ನಾಯ್ಕ,ಪ್ರೇಮ್ ಕುಮಾರ್, ಮಂಜುನಾಥ್ ಮತ್ತಿರರು ಇದ್ದರು.

-- ಬಾಕ್ಸ್ ಸುದ್ದಿಗೆ--ಸವಾಲು ಹಾಕಿದ ದೇವೇಗೌಡರು.ನಾನು ವೈ.ಎಸ್.ವಿ.ದತ್ತ ಅವರನ್ನು ಬೆಳೆಸಿದೆ. ನಂಬಿದವರನ್ನು ನಾನೆಂದೂ ಕೈಬಿಟ್ಟಿಲ್ಲ. ಈ ಹಿಂದೆ ಕೆ.ಎಂ.ಕೃಷ್ಣಮೂರ್ತಿ ಯವರನ್ನು ಮಂತ್ರಿ ಮಾಡಲು ಮುಂದಾದಾಗ ಸಿದ್ದರಾಮಯ್ಯ ಅಡ್ಡಿಪಡಿಸಿ ಶಿವಣ್ಣನನ್ನು ಮಂತ್ರಿ ಮಾಡಿಸಿದರು. ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಕೊನೆಗಾಣಬೇಕು. ದೇವೇಗೌಡನಿಗಿನ್ನೂ ಶಕ್ತಿ ಇದೆ ಎಂದು ಮೇಜು ಗುದ್ದಿ ಸವಾಲು ಹಾಕಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ. ಕಡೂರು ಜನತೆ ಪ್ರಜ್ವಲ್ ಅವರನ್ನು ಮತ್ತೊಮ್ಮೆ ಸಂಸದನನ್ನಾಗಿಸಲು ಹೆಚ್ಚಿನ ಮತ ನೀಡಿ ಎಂದು ಗೌಡರು ಮನವಿ ಮಾಡಿದರು.---ರಾಜಕೀಯ ನೆಲೆ ಇಲ್ಲವಾಗಿತ್ತು: ಚೇತನ್ನಮ್ಮ ಕುಟುಂಬ ಜೆಡಿಎಸ್ , ಕಾಂಗ್ರೆಸ್ ಸಿದ್ದರಾಮಯ್ಯನವರ ಜೊತೆಗೆ ಗುರುತಿಸಿಕೊಂಡಿತ್ತು . ನಮ್ಮ ದೊಡ್ಡಪ್ಪ ದಿ. ಮಾಜಿ ಶಾಸಕ ಕೃಷ್ಣಮೂರ್ತಿ, ನಮ್ಮ ಅಪ್ಪ ಕೆಂಪರಾಜು ಸಿದ್ದರಾಮಯ್ಯ ಜೊತೆಗಿದ್ದರು. ಆದರೆ ಅವರ ನಿಧನದ ಬಳಿಕ ನಮಗೆ ರಾಜಕೀಯ ನೆಲೆ ಇಲ್ಲದಂತಾಗಿತ್ತು.ನಮ್ಮನ್ನು ಗುರುತಿಸಿ ಪ್ರಜ್ವಲ್ ರೇವಣ್ಣ ರಾಜಕೀಯ ಸ್ಥಾನಮಾನ ಕೊಡುವ ಭರವಸೆ ನೀಡಿದ್ದು, ಹಿತೈಷಿಗಳ ಸಲಹೆಯಂತೆ ಜೆಡಿಎಸ್ ಸೇರಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸುತಿದ್ದೇನೆ ಎಂದು ಜೆಡಿಎಸ್‌ಗೆ ಸೇರ್ಪಡೆಯಾದ ಯುವ ಮುಖಂಡ ಚೇತನ್ ಕೆಂಪರಾಜು ಹೇಳಿದರು.15ಕೆಕೆಡಿಯು1,

15ಕೆಕೆಡಿಯು1ಎ.