ಮೋದಿ ಕೊಡುಗೆ ಬಗ್ಗೆ ಅಭಿಪ್ರಾಯ ಸಂಗ್ರಹ-ಶಿವಕುಮಾರ ತಿಪ್ಪಶೆಟ್ಟಿ

| Published : Mar 16 2024, 01:55 AM IST

ಮೋದಿ ಕೊಡುಗೆ ಬಗ್ಗೆ ಅಭಿಪ್ರಾಯ ಸಂಗ್ರಹ-ಶಿವಕುಮಾರ ತಿಪ್ಪಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಈ ೧೦ ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ. ಏನು ಸಹಾಯ ಮಾಡಿದ್ದಾರೆ ಎಂಬುದರ ಮೇಲೆ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡುವುದು ವಿಕಸಿತ ಭಾರತ ಸಂಕಲ್ಪ ಅಭಿಪ್ರಾಯ ಸಂಗ್ರಹದ ಉದ್ದೇಶವಾಗಿದೆ.

ಹಿರೇಕೆರೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಈ ೧೦ ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ. ಏನು ಸಹಾಯ ಮಾಡಿದ್ದಾರೆ ಎಂಬುದರ ಮೇಲೆ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡುವುದು ವಿಕಸಿತ ಭಾರತ ಸಂಕಲ್ಪ ಅಭಿಪ್ರಾಯ ಸಂಗ್ರಹದ ಉದ್ದೇಶವಾಗಿದೆ ಎಂದು ಬಿಜೆಪಿ ಹಿರೇಕೆರೂರ ಮಂಡಳ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಕಸಿತ ಭಾರತ ಸಂಕಲ್ಪ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋದಿ ಅವರು ಜನಸಾಮಾನ್ಯರಿಗೆ ಮಾಡಿರುವ ಅನುಕೂಲತೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಭಿವೃದ್ಧಿ ವಿಕಾಸದ ಯೋಜನೆಗಳ ಬಗ್ಗೆ ಜನಸಾಮಾನ್ಯರ ಸಲಹೆಗಳನ್ನು ಪತ್ರದ ಮೂಲಕ ಹಾಗೂ ನಮೋ ಆ್ಯಪ್‌ಗಳ ಮೂಲಕ ಮತ್ತು ಸರಳ ಆ್ಯಪ್‌ಗಳ ಮೂಲಕ ತಿಳಿಸಬಹುದಾಗಿದ್ದು, ಪಕ್ಷದ ಕಾರ್ಯಕರ್ತರು ಜನರ ಬಳಿ ಹೋಗಿ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಹಾಗೂ ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಿ ಅವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಅವರ ಫೋಟೋದೊಂದಿಗೆ ನಮೋ ಆ್ಯಪ್‌ ಹಾಗೂ ಸರಳ ಆ್ಯಪ್‌ಗಳ ಮೂಲಕ ಕಳುಹಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ೫೦೦ರಿಂದ ೧೦೦೦ ಜನರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದ್ದು, ರಾಜ್ಯಾಧ್ಯಕ್ಷರ ಅಪೇಕ್ಷೆ ಮೇರೆಗೆ ಒಂದು ಜಿಲ್ಲೆಯಲ್ಲಿ ೬೦೦೦ ಸಂಕಲ್ಪ ಪತ್ರ ಆಗಬೇಕೆಂಬ ಉದ್ದೇಶ ಇದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ೬೦೦ ಸಂಕಲ್ಪ ಪತ್ರಗಳನ್ನು ಮಾಡುವ ಮೂಲಕ ರಾಜ್ಯ ಕಾರ್ಯಲಯಕ್ಕೆ ಕಳುಹಿಸಲಾಗುತ್ತದೆ ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಾಚಾರ ಮಾಯಾಚಾರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸಮ್ಮ ಅಬಲೂರು, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ತಿರಕಪ್ಪನವರ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಂಜುಳಾ ಬಾಳಿಕಾಯಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂಜೀವ್ ಹಕ್ಕಳ್ಳಿ, ಪಟ್ಟಣ ಪಂಚಾಯತ್ ಸದಸ್ಯರಾದ ಗುರುಶಾಂತ್ ಎತ್ತಿನಹಳ್ಳಿ, ಹನುಮಂತಪ್ಪ ಕುರುಬರ, ಹರೀಶ್ ಕಲಾಲ್, ವಿಸ್ತಾರಕರಾದ ಆನಂದಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ದಂಡಿಗೆಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ಮಂಜು ತಂಬಾಕದ ಸೇರಿದಂತೆ ಇತರರು ಭಾಗವಹಿಸಿದ್ದರು