ಜೆಡಿಎಸ್ ಮುಖಂಡ ಜಯರಾಮು ಮತ್ತೆ ಬಿ.ರೇವಣ್ಣ ಬಳಗಕ್ಕೆ ಸೇರ್ಪಡೆ

| Published : Apr 17 2024, 01:19 AM IST

ಸಾರಾಂಶ

ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸೇರಿ ಮುಂದಿನ ದಿನಗಳಲ್ಲಿ ಬಿ.ರೇವಣ್ಣ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡುವುದು ನನ್ನ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಬಿ.ರೇವಣ್ಣ ಅಭಿಮಾನಿ ಬಳಗವು ಸಕ್ರೀಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ಕ್ಷೇತ್ರದ ಶಾಸಕರನ್ನಾಗಿ ಮಾಡುವವರೆಗೂ ಎಲ್ಲರು ಒಗ್ಗಟ್ಟಿನಿಂದ ದುಡಿಯುತ್ತೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಜೆಡಿಎಸ್ ಮುಖಂಡ ಎಲ್.ಕೆ.ಜಯರಾಮು ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಅಭಿಮಾನಿ ಬಳಗ ಸೇರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಕೆ.ಜಯರಾಮು, ನಾನು ಈ ಹಿಂದೆ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದೆ. ಆದರೆ, ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೇರಿದ್ದೆ. ಅಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣ ಮತ್ತೆ ಬಿ.ರೇವಣ್ಣ ಅಭಿಮಾನಿ ಬಳಗಕ್ಕೆ ಸೇರುತ್ತಿದ್ದೇನೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸೇರಿ ಮುಂದಿನ ದಿನಗಳಲ್ಲಿ ಬಿ.ರೇವಣ್ಣ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡುವುದು ನನ್ನ ಗುರಿಯಾಗಿದೆ ಎಂದರು.

ಬಿ.ರೇವಣ್ಣ ಅಭಿಮಾನಿ ಬಳಗದ ಬಿ.ಟಿ.ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಬಿ.ರೇವಣ್ಣ ಅಭಿಮಾನಿ ಬಳಗವು ಸಕ್ರೀಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ಕ್ಷೇತ್ರದ ಶಾಸಕರನ್ನಾಗಿ ಮಾಡುವವರೆಗೂ ಎಲ್ಲರು ಒಗ್ಗಟ್ಟಿನಿಂದ ದುಡಿಯುತ್ತೇವೆ ಎಂದರು. ಈ ವೇಳೆ ಬಳಗದ ಬಣ್ಣದ ಅಂಗಡಿ ಮಹದೇವು, ಬಿ.ಟಿ.ಮಂಜುನಾಥ್, ಶ್ರೀಕಂಠ, ಸಂತೋಷ್, ಬಾಲರಾಜ್ ಇದ್ದರು.

ತೊರೆಕಾಡನಹಳ್ಳಿಯಲ್ಲಿ ಸ್ಟಾರ್ ಚಂದ್ರು ಪರ ಮತಯಾಚನೆ

ಹಲಗೂರು:ತೊರೆಕಾಡನಹಳ್ಳಿಯಲ್ಲಿ ಗ್ರಾಪಂ ಅಧ್ಯಕ್ಷ ಎಚ್.ಕೆ.ತೇಜ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮನೆ ಮನೆಗೆ ತೆರಳಿ ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದರು.

ನಂತರ ತೇಜ್ ಕುಮಾರ್ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ಜೊತೆಗೆ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿ ಮತಯಾಚಿಸುತ್ತಿದ್ದೇವೆ ಎಂದರು.ಈ ವೇಳೆ ನಾಗರಾಜ್ ಮೂರ್ತಿ, ರಾಜಪ್ಪ, ಸಿದ್ದರಾಮ, ಸಿದ್ದಪ್ಪ, ಮಹೇಶ, ಸುರೇಶ, ಜಗದೀಶ, ಮೂರ್ತಿ ಸೇರಿದಂತೆ ಇತರರು ಇದ್ದರು.